ಕನ್ನಡಿಗ ಯಶ್ ತಮ್ಮ ಕೆಪಾಸಿಟಿ ಏನು, ಸಿನಿಮಾ ರಂಗದಲ್ಲಿ ತಾವು ಮನಸ್ಸು ಮಾಡಿದರೆ ಏನೇನೆಲ್ಲಾ ಸಾಧನೆ ಮಾಡಬಹುದು ಅನ್ನೋದನ್ನ ಮತ್ತೆ ಮತ್ತೆ ತೋರಿಸುತ್ತಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ರಾಕಿಂಗ್ ಸ್ಟಾರ್ & ಹ್ಯಾಂಡ್ಸಮ್ ಬಾಯ್ ಅಂತೆಲ್ಲಾ ಬಿರುದು ಪಡೆದಿರುವ ಯಶ್ ಇದೀಗ ರಾಮಾಯಣದ ರಾವಣನಾಗಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ರಾಕಿಭಾಯ್ ಯಶ್ ಅವರ ಅಬ್ಬರ ನೋಡಿ ಇಡೀ ಜಗತ್ತು ಒಂದು ಕ್ಷಣ ಆಶ್ಚರ್ಯಗೊಂಡು ಕುಣಿದಾಡಿದೆ, ಅದರಲ್ಲೂ ಯಶ್ ಅವರು ಒಂದೊಂದು ಸೀನ್ ಅಲ್ಲೂ ಅಭಿಮಾನಿಗಳ ಮೈ ರೋಮಾಂಚನದ ಅಲೆಯಲ್ಲಿ ತೇಲುವಂತೆ ಮಾಡಿದ್ದಾರೆ. ಹಾಗಾದರೆ, ಹೇಗಿದೆ 4000 ಕೋಟಿ ರೂಪಾಯಿ ವೆಚ್ಚದ ರಾಮಾಯಣ ಸಿನಿಮಾ ಟ್ರೇಲರ್? ಬನ್ನಿ ಕನ್ನಡಿಗರೇ ಓದಿ ತಿಳಿಯೋಣ...
ಹೌದು, ಭಾರತ ಮಾತ್ರವಲ್ಲದೇ ಇಡೀ ಜಾಗತಿಕ ಚಿತ್ರರಂಗದಲ್ಲೇ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಚಿತ್ರ ರಾಮಾಯಣ ಟ್ರೇಲರ್ ಅಧಿಕೃತವಾಗಿ ಇಂದು ಪ್ರಪಂಚದ ಮೂಲೆ ಮೂಲೆಗೂ ತಲುಪುವಂತೆ ರಿಲೀಸ್ ಆಗಿದೆ. ಈ ಸಿನಿಮಾ ಕನ್ನಡಿಗರು & ಭಾರತೀಯರು ಮಾತ್ರವಲ್ಲ ಪ್ರಪಂಚದ ಸಿನಿಮಾ ರಂಗಕ್ಕೂ ಅತಿಮುಖ್ಯ ಅಂತಾನೇ ಬಿಂಬಿಸಲಾಗಿದೆ. ರಾಮಾಯಣ ಸಿನಿಮಾದ ಅಧಿಕೃತ ತುಣುಕು ಅಂದ್ರೆ ಟ್ರೇಲರ್ ಗುರುವಾರ ಬೆಳಗಿನ ಜಾವ, 'ಬ್ರಹ್ಮ ಮುಹೂರ್ತ'ಕ್ಕೆ ಸರಿಯಾಗಿ ರಿಲೀಸ್ ಆಗಿದೆ. ಈ ಮೂಲಕ ಜುಲೈ 30 ಗುರುವಾರ ಬೆಳಗ್ಗೆ 4.15ಕ್ಕೆ ರಾಮಾಯಣ ಸಿನಿಮಾ ಟ್ರೇಲರ್ ಯುಟ್ಯೂಬ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಅಬ್ಬರಿಸಿದೆ. ಟ್ರೇಲರ್ ನೋಡಲು ಕೋಟಿ ಕೋಟಿ ಯಶ್ ಅಭಿಮಾನಿಗಳು ರಾತ್ರಿಯಿಂದಲೇ ಅಲಾರಂ ಇಟ್ಟು ಕಾಯುತ್ತಾ ಕೂತಿದ್ದರು...
ರಾವಣನಾಗಿ ಕನ್ನಡಿಗ ಯಶ್ ಆರ್ಭಟ!
ಅಬ್ಬಬ್ಬಾ ಏನ್ ಡೈಲಾಗ್ ಡೆಲಿವರಿ.. ಏನ್ ವಾಯ್ಸ್.. ಏನಪ್ಪಾ ಲುಕ್ಕು... ಹಿಂಗೆಲ್ಲಾ ರಾಮಾಯಣ ಟ್ರೇಲರ್ ನೋಡಿದ ಕೋಟ್ಯಂತರ ಅಭಿಮಾನಿಗಳು ಅಬ್ಬರಿಸಿದ್ದಾರೆ. ಮಹಾನ್ ಬ್ರಾಹ್ಮಣ & ಅತಿದೊಡ್ಡ ಶಿವಭಕ್ತ ಎಂಬ ಬಿರುದು ಪಡೆದಿದ್ದ ರಾವಣ ಲಂಕೆಯ ಅಧಿಪತಿ ಮಾತ್ರವಲ್ಲ, 3 ಲೋಕವನ್ನೂ ತನ್ನ ಕೈಯಲ್ಲಿ ಇಟ್ಟುಕೊಂಡು ಆಳುವ ಕನಸು ಕಂಡವನು. ರಾವಣನ ಅಬ್ಬರಕ್ಕೆ ದೇವತೆಗಳು ನಲುಗಿ ಹೋಗಿದ್ದರು, ಹೀಗಿದ್ದಾಗಲೇ ಶ್ರೀ ವಿಷ್ಣು ಪರಮಾತ್ಮ ರಾಮನ ಅವತಾರವೆತ್ತು ಬಂದು ರಾವಣನ ಸಂಹಾರ ಮಾಡಿದ ಎಂಬುದು ಪುರಾಣಗಳಲ್ಲಿ ಉಲ್ಲೇಖ ಆಗಿರುವ ವಿಚಾರ. ಹೀಗಿದ್ದರೂ ರಾವಣನ ಬಗ್ಗೆ ಹಾಗೂ ರಾವಣನ ಶಕ್ತಿಯ ಬಗ್ಗೆ ಎಲ್ಲರಿಗೂ ಗೌರವ ಇತ್ತು & ರಾವಣನನ್ನು ಪೂಜೆ ಮಾಡುವವರು ಇದ್ದರು ಎನ್ನುವ ಮಾತು ಇದೆ. ಹೀಗಿದ್ದಾಗ, ಕನ್ನಡಿಗ ಯಶ್ ರಾವಣನ ಅವತಾರದಲ್ಲಿ ಅಬ್ಬರಿಸಿದ್ದಾರೆ ಇಂದು.
ಯಶ್ ಅಬ್ಬರದೊಂದಿಗೆ ಟ್ರೇಲರ್ ಶುರು...
ರಾಮಾಯಣ ಟ್ರೇಲರ್ ಆರಂಭ ಆಗುವುದೇ ಯಶ್ ಅವರ ಎಂಟ್ರಿ ಮೂಲಕ, ರಾವಣನ ಅವತಾರದಲ್ಲಿ ಇದೇ ನಮ್ಮ ಯಶ್ ಅವರು ಎಂಟ್ರಿ ಕೊಡುತ್ತಾರೆ. ರಾವಣನಾಗಿ ಯಶ್ ಭವ್ಯ ಅರಮನೆ ಒಂದರ ಬಾಗಿಲಿಗೆ ಆಗಮಿಸುತ್ತಾರೆ ಮತ್ತು ಯಶ್ ಆ ಬೃಹತ್ ಬಾಗಿಲು ಒಡೆದು ಹಾಕಿದ ನಂತರ ರಾಯಲ್ ಎಂಟ್ರಿ ಕೊಡುತ್ತಾರೆ. ಅಲ್ಲಿಂದ ಮುಂದೆ ದೊಡ್ಡ ಕಾಳಗ ಆರಂಭ ಆಗುತ್ತದೆ, ಇದು 'ರಾವಣ ರಾಜ್ಯದ ಆರಂಭ' ಎಂದು ಘೋಷಿಸುತ್ತಾರೆ ಯಶ್. ಅಲ್ಲಿಂದ ಮುಂದೆ ಟ್ರೇಲರ್ ಮತ್ತಷ್ಟು ಮೆರಗು ಪಡೆಯುತ್ತದೆ. ರಾವಣನ ಉದಯದ ನಂತರ ದೇವತೆಗಳು & ಅನೇಕ ರಾಜರು ಆತಂಕಕ್ಕೆ ಒಳಗಾಗಿ, ನಲಗುವ ದೃಶ್ಯ ಕಾಣುತ್ತದೆ. ಆದರೆ ಇದೇ ವೇಳೆ ದುಷ್ಟಶಕ್ತಿಗಳ ಸಂಹಾರಕ್ಕೆ ಎಂದು ಭಗವಾನ್ ಶ್ರೀ ವಿಷ್ಣು ಪರಮಾತ್ಮ ಭೂಲೋಕದಲ್ಲಿ ಅಯೋಧ್ಯೆ ರಾಜ, ದಶರಥ ಪುತ್ರನಾದ ಶ್ರೀರಾಮನ ಅವತಾರದಲ್ಲಿ ಜನ್ಮ ತಾಳುತ್ತಾರೆ.