ಕರ್ನಾಟಕದ ಆರೋಗ್ಯ ಸೇವೆ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಉತ್ತಮವಾಗಿದೆ, ಆದರೂ ಕೆಲವು ಲೋಪ ದೋಷಗಳು ಕಂಡುಬರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣ ಆಗುತ್ತಲೇ ಇರುತ್ತೆ. ಹೀಗಿದ್ದಾಗ, ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬರೋದಿಲ್ಲ ಮತ್ತು ತುಂಬಾ ಲೇಟ್ ಆಗಿ ಬರುವ ಕಾರಣಕ್ಕೆ ರೋಗಿಗಳಿಗೆ ಸಮಸ್ಯೆ ಆಗುತ್ತಾ ಇದೆ ಎಂಬ ಆಕ್ರೋಶ ಮೊಳಗುತ್ತಲೇ ಇತ್ತು. ಈ ಕಾರಣಕ್ಕೆ ತುರ್ತು ವೈದ್ಯಕೀಯ ಸೇವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ 108 ಆಂಬುಲೆನ್ಸ್ ವ್ಯವಸ್ಥೆಗೆ ರಾಜ್ಯ ಸರ್ಕಾರ ಹೊಸ ಕಾರ್ಯನಿರ್ವಹಣಾ ಮಾನದಂಡ ಜಾರಿಗೆ ತರಲು ಮುಂದಾಗಿತ್ತು. ಆದ್ರೆ ಈಗ ಅದೇ ಹೊಸ ರೂಲ್ಸ್ ಚಾಲಕರಲ್ಲಿ ಕಿಚ್ಚು ಹೊತ್ತಿಸಿದೆ.
ಯು.ಟಿ. ಖಾದರ್ ಕರ್ನಾಟಕ ರಾಜ್ಯ ಕಂಡ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಸುವ ಸಚಿವರು. ಅದರಲ್ಲೂ ಈ ಹಿಂದೆ ಕೂಡ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ದ ಯು.ಟಿ. ಖಾದರ್ ಅವರು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದರು. ಇದೇ ಕಾರಣಕ್ಕೆ ಮತ್ತೊಮ್ಮೆ ಕರ್ನಾಟಕದ ಆರೋಗ್ಯ ಸಚಿವರಾಗಿ 2ನೇ ಬಾರಿಗೆ ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಿದಂತೆ ಕಾಣುತ್ತಿದೆ. ಹೀಗೆ ಅಧಿಕಾರ ವಹಿಸಿಕೊಂಡು ತಿಂಗಳ ಒಳಗಾಗಿ ದೊಡ್ಡ ದೊಡ್ಡ ಬದಲಾವಣೆಗೆ ಕೈಹಾಕಿದ್ದರು ಸಚಿವ ಯು.ಟಿ. ಖಾದರ್ ಅವರು. ಅದರಲ್ಲೂ ಪ್ರಮುಖ ನಿರ್ಧಾರ ಎಂಬಂತೆ ಅಪಘಾತ, ಹೃದಯಾಘಾತ ಸೇರಿದಂತೆ ಜೀವಾಪಾಯ ಪರಿಸ್ಥಿತಿಗಳಲ್ಲಿ ಕ್ಷಿಪ್ರ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರ ಕಟ್ಟುನಿಟ್ಟಿನ ಸಮಯದ ನಿಯಮ ರೂಪಿಸುತ್ತಿದೆ. ಆದರೆ ಇದೇ ನಿಯಮ ಇದೀಗ 108 ಆಂಬುಲೆನ್ಸ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
5,000 ರೂಪಾಯಿ ದಂಡ ವಿಧಿಸುವ ಎಚ್ಚರಿಕೆ?
ಹೌದು, ಹೊಸ ಮಾರ್ಗಸೂಚಿ ಪ್ರಕಾರ ಎಮೆರ್ಜೆನ್ಸಿ ಕಾಲ್ ಬಂದ ನಂತರ ಕೇವಲ 15 ನಿಮಿಷಗಳ ಒಳಗೆ ಆಂಬುಲೆನ್ಸ್ ಘಟನಾ ಸ್ಥಳವನ್ನು ತಲುಪಬೇಕು ಎಂಬ ರೂಲ್ಸ್ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಆದರೆ ಇದೇ ರೂಲ್ಸ್ ಕುರಿತು ಈಗ 108 ಆಂಬುಲೆನ್ಸ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದ್ದು, ಬೇಸರ ಹೊರ ಹಾಕಿದ್ದಾರೆ. ನಿಗದಿತ ಅವಧಿಯ ಒಳಗೆ ಘಟನೆ ನಡೆದ ಸ್ಥಳ ಅಥವ ರೋಗಿಯ ಬಳಿಗೆ ತಲುಪದಿದ್ದರೆ, ಸಂಬಂಧಿಸಿದ ಸೇವಾ ಸಂಸ್ಥೆ ಅಥವಾ ಚಾಲಕರ ವಿರುದ್ಧ ₹5,000 ದಂಡ ವಿಧಿಸುವ ಪ್ರಸ್ತಾವವೂ ಇದೆ ಎನ್ನಲಾಗಿದೆ. ಇದೇ ವಿಚಾರಕ್ಕೆ ಇದೀಗ 108 ಆಂಬುಲೆನ್ಸ್ ಚಾಲಕರು ತೀವ್ರ ಆಕ್ಷೇಪ ಹೊರ ಹಾಕಿದ್ದಾರೆ.
ನಮ್ಮ ಕರ್ನಾಟಕದ ಹೊರಗೆ ಅಂದ್ರೆ ನೆರೆಯ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ತುರ್ತು ಸೇವೆ ತಲುಪಲು ಸುಮಾರು 20 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಅದಕ್ಕಿಂತ ಕಡಿಮೆ ಅವಧಿ ನಿಗದಿಪಡಿಸಿದ್ದು, ಸರ್ಕಾರ ಹೊಸ ರೂಲ್ಸ್ ಜಾರಿಗೆ ತರಲು ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಇದೇ ಸಮಯದಲ್ಲಿ ಮೊದಲು ರಸ್ತೆ ಮೂಲಸೌಕರ್ಯ ಸುಧಾರಣೆ, ಸಂಚಾರ ದಟ್ಟಣೆ ಪರಿಹಾರ & ತುರ್ತು ವಾಹನಗಳಿಗೆ ವಿಶೇಷ ಮಾರ್ಗದ ವ್ಯವಸ್ಥೆಗಳನ್ನು ಕಲ್ಪಿಸಿ. ಆಮೇಲೆ ಬೇಕಾದ್ರೆ 108 ಆಂಬುಲೆನ್ಸ್ ಚಾಲಕರಿಗೆ ಟೈಮ್ ಲಿಮಿಟ್ ಫಿಕ್ಸ್ ಮಾಡಿ ಅಂತಾ ಚಾಲಕರು ಇದೀಗ ಆಗ್ರಹ ಮಾಡುತ್ತಿದ್ದಾರೆ.
108 ಆಂಬುಲೆನ್ಸ್‌ಗೆ ನೂರಾರು ಸಮಸ್ಯೆ!
ಇದರ ಜೊತೆಗೆ ಮತ್ತೊಂದು ಸಮಸ್ಯೆ ಕೂಡ ನಮ್ಮ ರಾಜ್ಯದ ರಸ್ತೆಗಳಲ್ಲಿ 108 ಆಂಬುಲೆನ್ಸ್ ಚಾಲಕರಿಗೆ ಎದುರಾಗುತ್ತಾ ಇದ್ದು, ಚಾಲಕರ ಪ್ರಕಾರ ಸೈರನ್ & ತುರ್ತು ದೀಪಗಳನ್ನು ಬಳಸಿದರೂ ಹಲವೆಡೆ ವಾಹನಗಳಿಗೆ ದಾರಿಯೇ ಸಿಗೋದಿಲ್ಲ ಎಂದು ಬೇಸರ ಹೊರ ಹಾಕುತ್ತಿದ್ದಾರೆ. ಕೆಲವು ತುರ್ತು ಸಂದರ್ಭಗಳಲ್ಲಿ ಸಿಗ್ನಲ್‌ಗಳಲ್ಲಿ ಹೆಚ್ಚು ಸಮಯ ಕಾಯಬೇಕಾದ ಸ್ಥಿತಿ ಇದೆ. ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವುದರಿಂದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದು ಕೂಡ ದೊಡ್ಡ ಸವಾಲಾಗಿದೆ ಎಂದು 108 ಆಂಬುಲೆನ್ಸ್ ಚಾಲಕರು ಸರ್ಕಾರದ ಈ ಹೊಸ 15 ನಿಮಿಷಗಳ ರೂಲ್ಸ್‌ಗೆ ಬೇಸರ ಹೊರ ಹಾಕಿದ್ದಾರೆ. ಆಂಬುಲೆನ್ಸ್‌ಗೆ ದಾರಿ ಸಿಕ್ಕ ಕೂಡಲೇ ಕೆಲ ಖಾಸಗಿ ವಾಹನಗಳು ಹಿಂದೆ ವೇಗವಾಗಿ ಬಂದು ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇನ್ನು ಹೊಸ ರೂಲ್ಸ್ ಪರಿಣಾಮವಾಗಿ ಮತ್ತಷ್ಟು ಅಪಘಾತಗಳಿಗೆ ಅವಕಾಶ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಚಾಲಕರು ಬೇಸರ ಹೊರ ಹಾಕಿದ್ದು, ಮರು ಪರಿಶೀಲನೆಗೂ ಆಗ್ರಹಿಸಿದ್ದಾರೆ.