Bengaluru Metro: ಮೆಟ್ರೋ ಪ್ರಯಾಣಿಕರೇ ಇದನ್ನ ತಪ್ಪದೇ ಓದಿ, ಗೊತ್ತಿಲ್ಲದಿದ್ದರೆ 5,000 ರೂಪಾಯಿ ದಂಡ!

bengaluru diaries | July 17, 2026 - 11:02 pm
ನಮ್ಮ ಬೆಂಗಳೂರಿನ ಮೆಟ್ರೋ ಸೇವೆ ಬಗ್ಗೆ ಇಡೀ ಜಗತ್ತು ಹೆಮ್ಮೆಯಿಂದ ಮಾತನಾಡುತ್ತದೆ, ಅದರಲ್ಲೂ ನಮ್ಮ ಮೆಟ್ರೋ ಒದಗಿಸುವ ಸೇವೆ ಇಡೀ ಜಗತ್ತಿಗೆ ಮಾದರಿ ಆಗಿದೆ. ಪ್ರಪಂಚದ ಹಲವು ದೇಶಗಳು ಬೆಂಗಳೂರಿನ ಈ ನಮ್ಮ ಮೆಟ್ರೋ ಸೇವೆಯನ್ನು ಫಾಲೋ ಮಾಡಲು ಮುಂದೆ ಬರುತ್ತಿವೆ. ಹೀಗಿದ್ದಾಗ ಕೆಲವು ಅಜ್ಞಾನಿಗಳು ನಮ್ಮ ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡುವಾಗ ಏನೇನೋ ಎಡವಟ್ಟು ಮಾಡುತ್ತಾರೆ. ಜೊತೆಯಲ್ಲೇ ನಿಯಮ ಮೀರಿ ವರ್ತಿಸುತ್ತಿರುವ ಘಟನೆಗಳೂ ಹೆಚ್ಚಾಗುತ್ತಿವೆ. ಇಂತಹ ಸಮಯದಲ್ಲೇ ಈ ರೀತಿ ನಿಯಮ ಮೀರಿ ವರ್ತಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ ಮೆಟ್ರೋ ಆಡಳಿತ. ಅದರಲ್ಲೂ ಮೆಟ್ರೋ ಪ್ರಯಾಣಿಕರೇ ಇದನ್ನ ತಪ್ಪದೇ ಓದಿ, ಗೊತ್ತಿಲ್ಲದಿದ್ದರೆ 5,000 ರೂಪಾಯಿ ದಂಡ ಬೀಳಬಹುದು!

ನಮ್ಮ ಮೆಟ್ರೋ ಕನ್ನಡಿಗರ ಪಾಲಿಗೆ ಕೇವಲ ಸಂಚಾರ ಮಾಡುವ ಸಂಸ್ಥೆ ಅಲ್ಲ, ಇದರ ಜೊತೆಯಲ್ಲೇ ಬೆಂಗಳೂರಿನ ಜೀವನಾಡಿ ಆಗಿದೆ ನಮ್ಮ ಮೆಟ್ರೋ ರೈಲು ಸೇವೆ. ಏಕೆಂದರೆ ಹತ್ತಾರು ಲಕ್ಷ ಪ್ರಯಾಣಿಕರಿಗೆ ಗಂಟೆ ಗಂಟೆ ಟೈಮ್ ಉಳಿಸುವ ಮೂಲಕ ಹೆಸರು ಮಾಡಿದೆ ನಮ್ಮ ಮೆಟ್ರೋ. ಆದರೆ ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳು ಮತ್ತೆ ರೈಲಿನ ಒಳಗೆ ರೀಲ್ಸ್ ಮಾಡುವುದು, ಗಲಾಟೆ ಮಾಡುವುದು & ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆಲ್ಲಾ ಬ್ರೇಕ್ ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ ಇದೀಗ ಕಠಿಣ ಕ್ರಮಕ್ಕೆ ಮುಂದಾಗಿದ್ದು, ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲು ಸಿದ್ಧತೆ ನಡೆಸಿದೆಯಂತೆ.



ನಮ್ಮ ಮೆಟ್ರೋ ಪ್ರಯಾಣಿಕರೇ ಗಮನಿಸಿ...
ಅಷ್ಟಕ್ಕೂ ಇನ್ನುಮುಂದೆ ನಮ್ಮ ಮೆಟ್ರೋ ಆವರಣದಲ್ಲಿ ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ವಿಡಿಯೋಗಳ ಚಿತ್ರೀಕರಣ, ಜೋರಾಗಿ ಹಾಡುಗಳನ್ನು ಹಾಕುವುದು, ಇತರರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ವರ್ತನೆ, ಅನುಮತಿ ಇಲ್ಲದೆ ಆಹಾರ ಸೇವನೆ ಸೇರಿ ವಿವಿಧ ನಿಯಮ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಹೊಸ ಪ್ರಸ್ತಾವನೆ ಸಿದ್ಧವಾಗಿದೆ. ಪ್ರಯಾಣಿಕರು ಸಾರ್ವಜನಿಕ ಸ್ಥಳದ ಗೌರವ ಕಾಪಾಡುವಂತೆ ಮಾಡುವ ಉದ್ದೇಶಕ್ಕೆ ಇದೀಗ ದಂಡದ ಹಣವನ್ನ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡಲು ಸಂಸ್ಥೆಯಲ್ಲಿ ಚಿಂತನೆ ನಡೆದಿದೆ. ಆ ಮೂಲಕ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ನಮ್ಮ ಮೆಟ್ರೋ ರೂಲ್ಸ್ ಇನ್ನಷ್ಟು ಟೈಟ್ ಆಗುವುದು ನಿಶ್ಚಿತವಾಗಿದೆ.

25,000 ರೂಪಾಯಿ ತನಕ ದಂಡ?
ಅಂದಹಾಗೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಚೆನ್ನೈ ಮೆಟ್ರೋ ಮಾದರಿಯಲ್ಲೇ ಬಿಎಂಆರ್‌ಸಿಎಲ್ ಕೂಡ ನಮ್ಮ ಮೆಟ್ರೋದಲ್ಲಿ ಹೊಸ ನಿಯಮ ಜಾರಿಗೊಳಿಸಲು ಚಿಂತನೆ ನಡೆಸಿದೆ. ಹೊಸ ಪ್ರಸ್ತಾವನೆಯಂತೆ ಮೆಟ್ರೋ ರೈಲು ಅಥವಾ ನಿಲ್ದಾಣದ ಒಳಗೆ ಅನುಮತಿ ಇಲ್ಲದೆ ರೀಲ್ಸ್ ಅಥವಾ ವಿಡಿಯೋ ಚಿತ್ರೀಕರಣ ಮಾಡುವುದು, ನೆಲದ ಮೇಲೆ ಕುಳಿತುಕೊಳ್ಳುವುದು, ಅತಿಯಾದ ಸೌಂಡ್ ಮಾಡುವುದು, ಮೊಬೈಲ್ ಅಥವಾ ಸ್ಪೀಕರ್‌ನಲ್ಲಿ ಜೋರಾಗಿ ಮ್ಯೂಸಿಕ್ ಹಾಕುವುದು & ಆಹಾರ ಸೇವಿಸಿ ಸ್ವಚ್ಛತೆಗೆ ಧಕ್ಕೆ ತರುವುದು ಮುಂತಾದ ಗಂಭೀರ ತಪ್ಪುಗಳಿಗೆ 5,000 ರೂಪಾಯಿ ಟು 25,000 ರೂಪಾಯಿ ತನಕ ಬೃಹತ್ ಮೊತ್ತದ ದಂಡ ವಿಧಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ ಎನ್ನಲಾಗಿದೆ.

ಒಟ್ನಲ್ಲಿ ಮೆಟ್ರೋ ಆಡಳಿತ ಮಂಡಳಿ ಇದೀಗ ದೊಡ್ಡದಾದ ಬದಲಾವಣೆಗೆ ಮುಂದಾಗಿದ್ದು, ಪ್ರಯಾಣಿಕ ಪಡೆ ತಪ್ಪು ಮಾಡಿದರೆ ದೊಡ್ಡ ಮಟ್ಟದಲ್ಲಿ ದಂಡ ಬೀಳುವುದು ಗ್ಯಾರಂಟಿ ಆಗಿದೆ. ಕೆಲವು ಪ್ರಯಾಣಿಕರು ಮೆಟ್ರೋ ನಿಲ್ದಾಣ ಹಾಗೂ ರೈಲುಗಳ ಒಳಗೆ ಶಿಸ್ತು ಮೀರಿ ವರ್ತಿಸುವ ಘಟನೆಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಈ ರೀತಿಯಲ್ಲಿ ಶಿಸ್ತು ಕ್ರಮ ಜಾರಿಗೆ ತರುತ್ತಿರುವುದು ಸರಿಯಾಗಿದೆ ಎನ್ನುತ್ತಿದ್ದಾರೆ ಕನ್ನಡಿಗರು. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.