ಶಾಲಾ ಮಕ್ಕಳಿಗೆ ಈ ಮೊದಲು ಯಾವುದೇ ಸೌಲಭ್ಯ ಇರಲಿಲ್ಲ, ಆದರೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಆಧುನಿಕ ಕಾಲಘಟ್ಟದಲ್ಲಿ ಪಠ್ಯಪುಸ್ತಕ ಸಹಿತ ಊಟ & ಪೌಷ್ಠಿಕ ಆಹಾರ ಸೇರಿದಂತೆ ಎಲ್ಲವನ್ನೂ ಸರ್ಕಾರ ಒದಗಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ 2000ರ ನಂತರ ಸಾಕಷ್ಟು ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಿಗುವಂತೆ ಆಗಿದೆ. ಮತ್ತೊಂದು ಕಡೆ ದಕ್ಷಿಣ ಭಾರತದ ರಾಜ್ಯಗಳ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆ ಕೂಡ ಇದ್ದು, ಇಡೀ ದೇಶಕ್ಕೆ ಮಾದರಿ ಕೂಡ ಆಗಿವೆ. ಹೀಗಿದ್ದಾಗಲೇ ದಿಢೀರ್, ಶಾಲಾ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಚಿಕನ್ ಬಿರಿಯಾನಿ ಫ್ರೀ... ಫ್ರೀ... ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ.
ವಿದ್ಯಾರ್ಥಿಗಳಿಗೆ ಈಗಾಗಲೇ ಹಾಲು, ಮೊಟ್ಟೆ, ಬಾಳೆಹಣ್ಣು ನೀಡುತ್ತಿರುವುದು ನಮಗೆಲ್ಲಾ ಗೊತ್ತೇ ಇದೆ. ಆದರೆ ಕರ್ನಾಟಕದ ನೆರೆ ರಾಜ್ಯ ತಮಿಳುನಾಡು ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಇದೀಗ ತಮಿಳುನಾಡಿನಲ್ಲಿ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಮತ್ತೊಂದು ಕ್ರಾಂತಿಕಾರಿ ಬದಲಾವಣೆಗೆ ಮುಂದಾಗಿದೆ ಅಲ್ಲಿನ ಸರ್ಕಾರ. ಆಷ್ಟಕ್ಕೂ ತಮಿಳುನಾಡು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇನ್ನುಮುಂದೆ ಪೌಷ್ಟಿಕಾಂಶ ಭರಿತ ಆಹಾರದ ಜೊತೆ ಭರ್ಜರಿ ಬಿರಿಯಾನಿಯೂ ಫಿಕ್ಸ್ ಆಗಿದೆ. ತಮಿಳುನಾಡು ರಾಜ್ಯದಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಹಲವು ಮಹತ್ವದ ಯೋಜನೆಗಳು ಜಾರಿಗೆ ಬರುತ್ತಿವೆ. ಇದೇ ರೀತಿ ಇದೀಗ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯ ಗಣನೀಯವಾಗಿ ಹೆಚ್ಚಿಸುವ ಉದ್ದೇಶದಿಂದ, ಮಕ್ಕಳಿಗಾಗಿ ಭರ್ಜರಿ ಚಿಕನ್ ಬಿರಿಯಾನಿ ಆಫರ್ ರೆಡಿಯಾಗಿದೆ.
ಶಾಲೆಗಳಲ್ಲಿ ಫ್ರೀ ಚಿಕನ್ ಬಿರಿಯಾನಿ ಫಿಕ್ಸ್!
ತಮಿಳುನಾಡು ಕೂಡ ಕರ್ನಾಟಕದ ರೀತಿಯಲ್ಲೇ ಶೈಕ್ಷಣಿಕ ವಿಚಾರದಲ್ಲಿ ಮುಂದೆ ಇದ್ದು, ಶಾಲೆಗಳಲ್ಲೂ ಉತ್ತಮ ಶಿಕ್ಷಣ ಸಿಗುತ್ತಿದೆ. ಹೀಗಿದ್ದರೂ ಮಕ್ಕಳ ಹಾಜರಾತಿ ಕ್ಷೀಣಿಸುತ್ತಿದೆ ಎಂಬ ವಿಚಾರ ಚರ್ಚೆಯಲ್ಲಿ ಇತ್ತು, ಹೀಗಾಗಿ ಈಗ ತಮಿಳುನಾಡು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಗಣನೀಯವಾಗಿ ಹೆಚ್ಚಿಸುವ ಉದ್ದೇಶದಿಂದ, ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ವಿಶೇಷ ಯೋಜನೆಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಈ ಮಹತ್ವದ ಪ್ರಸ್ತಾವನೆಯನ್ನ ಪರಿಶೀಲಿಸುತ್ತಿದ್ದು, ಸದ್ಯದಲ್ಲೇ ಚಿಕನ್ ಬಿರಿಯಾನಿ ವಿತರಣೆ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಈ ಮೂಲಕ ಈಗ ರುಚಿಕರ & ಹೊಸ ಮೆನು ಜಾರಿಗೊಳಿಸುವುದರಿಂದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿಯೂ ಗಣನೀಯವಾಗಿ ಹೆಚ್ಚಾಗುತ್ತದೆ ಎಂಬ ವಿಶ್ವಾಸವನ್ನು ತಮಿಳುನಾಡು ಸರ್ಕಾರ ಹೊಂದಿದೆ.
ಕರ್ನಾಟಕದಲ್ಲೂ ಜಾರಿ ಆಗುತ್ತಾ ಯೋಜನೆ?
ತಮಿಳುನಾಡು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಲವು ದಶಕಗಳಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಯಶಸ್ವಿ ಆಗಿ ಜಾರಿಯಲ್ಲಿದೆ. ಕಾಲಕಾಲಕ್ಕೆ ಬಂದ ನಾಯಕರು ಈ ಯೋಜನೆಯಲ್ಲಿ ಹೊಸ ಮೆನುಗಳನ್ನ ಸೇರಿಸುತ್ತಾ ಬಂದಿದ್ದಾರೆ. ಇದೀಗ ಸಿಎಂ ಸಿ. ಜೋಸೆಫ್ ವಿಜಯ್ ಅವರ ಸರ್ಕಾರದ ಅಡಿಯಲ್ಲಿ, ಶಾಲಾ ಮಕ್ಕಳ ಊಟದ ಮೆನು ಇನ್ನಷ್ಟು ಆಕರ್ಷಕವಾಗಿಸಲು ನಿರ್ಧರಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈಗಾಗಲೇ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಅನುಮತಿಗಾಗಿ ಕಾಯುತ್ತಿದ್ದಾರೆ.
ಇದರಡಿ ವಾರದಲ್ಲಿ ಒಂದು ದಿನ ಮಕ್ಕಳಿಗೆ ಇಷ್ಟವಾಗುವ & ಅಧಿಕ ಪೌಷ್ಟಿಕಾಂಶ ಇರುವ ಚಿಕನ್ ಬಿರಿಯಾನಿಯನ್ನು ಮಧ್ಯಾಹ್ನ ಊಟದ ಜೊತೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬ ಸುದ್ದಿ ದೇಶಾದ್ಯಂತ ಸದ್ದು ಮಾಡುತ್ತಿದೆ. ಆದರೆ ಯಾವಾಗ ಈ ಯೋಜನೆ ಜಾರಿಗೆ ಬರುತ್ತದೆ? ಯಾವ, ಯಾವ ಕ್ಲಾಸ್ ವಿದ್ಯಾರ್ಥಿಗಳು ಇದಕ್ಕೆ ಅರ್ಹರು? ಅನ್ನೋದನ್ನ ಕಾದು ನೋಡಬೇಕಿದೆ. ಹಾಗೇ ತಮಿಳುನಾಡು ಈ ಯೋಜನೆ ಜಾರಿಗೆ ತಂದರೆ ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ ರಾಜ್ಯಗಳಲ್ಲೂ ಮುಂದೆ ಜಾರಿ ಆಗುವ ನಿರೀಕ್ಷೆ ಇದೆಯಾ? ಎಂಬುದನ್ನ ಕಾದು ನೊಡಬೇಕಿದೆ.