ನಟ ದರ್ಶನ್ ತೂಗುದೀಪ್ ಅವರಿಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಲೇ ಇದ್ದು, ಸ್ಯಾಂಡಲ್‌ವುಡ್ ಸ್ಟಾರ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಎದುರಾದ ಸಮಸ್ಯೆಗಳು ಮಾಯವಾಗಲಿ ಅಂತಾ ಅಭಿಮಾನಿಗಳು ಕಳೆದ 2 ವರ್ಷಗಳಿಂದ ಪ್ರಾರ್ಥನೆ ಮಾಡುತ್ತಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣ ನಟ ದರ್ಶನ್ ತೂಗುದೀಪ್ ಅವರಿಗೆ ಮುಳುವಾಗಿರುವ ಸಮಯದಲ್ಲೇ, ನಟ ದರ್ಶನ್ ತೂಗುದೀಪ್ ಪ್ರಕರಣಕ್ಕೆ ದಿಢೀರ್ ಟ್ವಿಸ್ಟ್, ಅಭಿಮಾನಿಗಳಿಗೆ ನಿರಾಸೆ? ಬನ್ನಿ ತಿಳಿಯೋಣ...
ಅಂದಹಾಗೆ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದ ಪ್ರಮುಖ ಸಾಕ್ಷಿದಾರನಿಗೆ ಬೆದರಿಕೆ ಹಾಕಿದ ಆರೋಪ ಈಗ ಕೋಟಿ ಕೋಟಿ ಅಭಿಮಾನಿಗಳ ಪಾಲಿನ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೇಸ್‌ಗೆ ದೊಡ್ಡ ಟ್ವಿಸ್ಟ್ ಕೊಟ್ಟಿದೆ. ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹೀಗೆ ಬಂಧಿತರನ್ನು ಸುಹಾಸ್, ವೇಣು & ಎಂ.ಆರ್. ಪುನೀತ್ ಎಂದು ಗುರುತಿಸಲಾಗಿದ್ದು, ಈ ಬಂಧಿತರನ್ನ ತುಮಕೂರು ಮೂಲದವರು ಎನ್ನಲಾಗಿದೆ. ಪುನೀತ್ 'ಡಿ-ಕಮ್ಯುನಿಟಿ' ಫೇಸ್‌ಬುಕ್ ಪುಟದ ನಿರ್ವಾಹಕ ಎಂಬ ಮಾಹಿತಿ ಲಭ್ಯವಾಗಿದೆ. ಜೊತೆಗೆ ಇವರೆಲ್ಲಾ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೂಡ ಎನ್ನಲಾಗಿದ್ದು, ಕೇಸ್‌ಗೆ ದೊಡ್ಡ ಟ್ವಿಸ್ಟ್ ಸಿಗುವ ಮುನ್ಸೂಚನೆ ಹೊರಬಿದ್ದಿದೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ದಿಢೀರ್ ಟ್ವಿಸ್ಟ್?
ಪ್ರಕರಣದ ಪ್ರಮುಖ ಸಾಕ್ಷಿ ಪುನೀತ್, ಮೃತದೇಹ ಸಾಗಿಸಲು ಕಾರು ಒದಗಿಸಿದ್ದಾಗಿ ಹಾಗೂ ಬಳಿಕ ವಾಹನದಲ್ಲಿದ್ದ ರಕ್ತದ ಕಲೆ ಸ್ವಚ್ಛಗೊಳಿಸಲಾಗಿತ್ತು ಎಂದು ಈ ಹಿಂದೆ ಹೇಳಿಕೆ ನೀಡಿದ್ದಾನೆ. ಅಲ್ಲದೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆತರಲಾಗಿಲ್ಲ ಎಂದು ಹೇಳುವಂತೆ ಸಾಕ್ಷಿದಾರ ಸಂದೀಪ್ ಮೇಲೆ ಒತ್ತಡ ಹೇರಲಾಗಿತ್ತು ಎಂಬ ಆರೋಪ ಹೊರಿಸಲಾಗಿದೆ. ಈ ಕುರಿತಾಗಿ, ಸಂದೀಪ್ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು. ಅದರ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಇದೀಗ ಮೂವರನ್ನೂ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.
ಜೈಲಲ್ಲಿ ನಟ ದರ್ಶನ್ ತೂಗುದೀಪ್
ಮತ್ತೊಂದು ಕಡೆ ನಟ ದರ್ಶನ್ ತೂಗುದೀಪ್ ಅವರು ಈಗಾಗಲೇ ಜೈಲಿನಲ್ಲಿದ್ದು, ವಿಚಾರಣೆ ಕೂಡ ನಡೆಯುತ್ತಾ ಇದೆ. ಇಂತಹ ಸಮಯದಲ್ಲೇ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಪ್ರಯತ್ನಗಳು ನಡೆದಿವೆ ಎಂಬ ಆರೋಪ ಕೂಡ ಕೇಳಿ ಬಂದಿರುವುದು ಹಲ್‌ಚಲ್ ಎಬ್ಬಿಸಿದೆ. ಹಾಗೇ ಪೊಲೀಸರು ಕೂಡ ಈ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಕೇಸ್‌ನಲ್ಲಿ ಇನ್ನಷ್ಟು ಜನರು ಅಂದರ್ ಆಗುತ್ತಾರಾ? ಎಂಬ ಚರ್ಚೆ ಕೂಡ ಶುರುವಾಗಿದೆ.