ನಟ ದರ್ಶನ್ ತೂಗುದೀಪ್ ಅವರಿಗೆ ಇರುವಷ್ಟು ಅಭಿಮಾನಿಗಳು ಕನ್ನಡ ಸಿನಿಮಾ ರಂಗದಲ್ಲೇ ಯಾರಿಗೂ ಇಲ್ಲ ಎಂಬ ಮಾತು ಇದೆ. ಸಿಂಗಲ್ ಸ್ಕ್ರೀನ್‌ಗಳಿಗೆ ಈಗಲೂ ನಟ ದರ್ಶನ್ ತೂಗುದೀಪ್ ಅವರ ಸಿನಿಮಾಗಳೇ ಶಕ್ತಿ ತುಂಬಿ ನಿಲ್ಲಿಸುವ ತಾಕತ್ ಹೊಂದಿವೆ. ಕಾಟೇರ ಸಿನಿಮಾ ಇದಕ್ಕೆ ತಾಜಾ ಉದಾಹರಣೆ ಆಗಿತ್ತು ಎನ್ನಬಹುದು. 2023ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ಕಾಟೇರ ಸಿನಿಮಾ, ಸುಮಾರು 3 ವರ್ಷಗಳ ಹಿಂದೆಯೇ ನೂರಾರು ಕೋಟಿ ರೂಪಾಯಿ ಹಣ ಬಾಚಿತ್ತು ಅನ್ನೋ ಮಾತು ಇದೆ. ಅದರಲ್ಲೂ ಸಿಂಗಲ್ ಸ್ಕ್ರೀನ್‌ಗಳಿಗೆ ಮರುಜೀವ ನೀಡಿರುವ ಕೀರ್ತಿ ಕೂಡ ಕಾಟೇರ ಸಿನಿಮಾಗೆ ಸಲ್ಲುತ್ತದೆ. ಇಷ್ಟೆಲ್ಲಾ ಸಂಭ್ರಮದ ನಡುವೆ, ನಟ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಆಘಾತ ಎದುರಾಗಿತ್ತು.
ಹೌದು, ಸರಿಯಾಗಿ 2 ವರ್ಷಗಳ ಹಿಂದೆ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಎಂಬ ಚಕ್ರವ್ಯೂಹದ ಒಳಗೆ ಸಿಲುಕಿಬಿಟ್ಟರು. ಒಂದು ಕಡೆ ಈ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಅವರ ಪಾತ್ರ ಇಲ್ಲ ಎಂದು ಅವರ ಕೋಟ್ಯಂತರ ಅಭಿಮಾನಿಗಳು ವಾದ ಮಾಡುತ್ತಿದ್ದಾರೆ. ಹಾಗೇ ಇನ್ನೊಂದು ಕಡೆ ದರ್ಶನ್ ಅವರನ್ನು ಬೇಕು ಅಂತಲೇ ಈ ಕೇಸ್‌ನಲ್ಲಿ ಸಿಲುಕಿಸಲಾಗಿದೆ ಎಂಬ ಆರೋಪ ಕೂಡ ಮಾಡಲಾಗಿದೆ. ಇಷ್ಟೆಲ್ಲಾ ವಾದ & ವಿವಾದದ ನಡುವೆ ಕಳೆದ 1 ವರ್ಷದಿಂದ ನಿರಂತರವಾಗಿ ಜೈಲಿನಲ್ಲೇ ಪರದಾಡುತ್ತಿದ್ದಾರೆ ನಟ ದರ್ಶನ್ ಅವರು. ಇಂತಹ ಸೂಕ್ಷ್ಮ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳಿಂದ ಸಿಎಂ ಎದುರು ಅದೊಂದೇ ಬೇಡಿಕೆ! ಏನದು ಡಿಮ್ಯಾಂಡ್? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ.
ಡಿ-ಬಾಸ್ ದರ್ಶನ್ ಬಿಡುಗಡೆಗೆ ಫ್ಯಾನ್ಸ್ ಒತ್ತಾಯ
ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕಳೆದ 1 ವರ್ಷದಿಂದ ಕೂಡ ನಿರಂತರವಾಗಿ ಒತ್ತಾಯಿಸುತ್ತಾ ಬರ್ತಿದ್ದಾರೆ, ಅದೇನೆಂದರೆ ನಟ ದರ್ಶನ್ ಅವರನ್ನು ಕರ್ನಾಟಕ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿಸಬೇಕು ಎಂದು. ಆದರೆ ಇದು ಅಭಿಮಾನಿಗಳು ಮನವಿ ಮಾಡಿದಷ್ಟು ಸುಲಭ ಅಲ್ಲ, ಹೀಗಿದ್ದಾಗ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆದ ಕರಗ ಮಹೋತ್ಸವ ಸಮಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುವ ಘಟನೆ ನಡೆದಿದೆ. ಖುದ್ದು ಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ, ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ನಿರಂತರವಾಗಿ ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಎಂದು ಕೂಗಿದ್ದಾರೆ. ಈ ಮೂಲಕ ತಮ್ಮ ನೆಚ್ಚಿನ ನಟನಿಗೆ ಜೈಲು ವಾಸದಿಂದ ಮುಕ್ತಿ ಕೊಡಿಸಿ ಎಂದು ಆಗ್ರಹಿಸಿದ್ದಾರೆ.
ಕರಗ ಮಹೋತ್ಸವದಲ್ಲಿ ಡಿ-ಬಾಸ್.. ಡಿ-ಬಾಸ್..
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ, ಕರಗ ಮಹೋತ್ಸವದಲ್ಲಿ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳನ್ನ ಸಮಾಧಾನ ಮಾಡಿದ್ದಾರೆ. ಅಲ್ಲದೆ ನಟ ದರ್ಶನ್ ತೂಗುದೀಪ್ ಫ್ಯಾನ್ಸ್ ಬೆಂಬಲಕ್ಕೆ ನಿಂತಿದ್ದು, ನಂತರ ಈ ಬಗ್ಗೆ ಮಾತನಾಡೋಣ ಎಂದಿದ್ದಾರೆ. ಹೀಗಿದ್ದರೂ ಘೋಷಣೆ ನಿಲ್ಲಿಸದ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಡಿ-ಬಾಸ್, ಡಿ-ಬಾಸ್ ಅಂತಲೇ ಇದ್ದರು. ಕೊನೆಗೆ ಸಿಎಂ ಕೂಡ ಈ ವಿಚಾರದಲ್ಲಿ ಸ್ವಲ್ಪ ಮುನಿಸು ತೋರಿದರೂ ನಂತರ ಡಿ-ಬಾಸ್ ಅಭಿಮಾನಿಗಳನ್ನು ಸಮಾಧಾನ ಮಾಡಿದ್ದಾರೆ. ಈ ಮೂಲಕ ಆದಷ್ಟು ಬೇಗ ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರುವ ನಿರೀಕ್ಷೆಯಲ್ಲೇ ಕೋಟಿ, ಕೋಟಿ ಅಭಿಮಾನಿಗಳು ಇದ್ದಾರೆ. ಆದರೆ ಕನ್ನಡದ ನಟ ದರ್ಶನ್ ಅವರ ಅಭಿಮಾನಿಗಳ ಈ ಆಸೆಯು ಯಾವಾಗ ಈಡೇರಲಿದೆ? ಈ ಆಸೆ ಈಡೇರಲು ಇನ್ನು ಎಷ್ಟು ಸಮಯ ಬೇಕು? ಎಂಬುದನ್ನ ಕಾದು ನೋಡಬೇಕಿದೆ.