Darshan Thoogudeepa: ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿ ಸ್ಫೋಟಕ ಸತ್ಯ?

bengaluru diaries | July 9, 2026 - 10:30 am

ದರ್ಶನ್ ತೂಗುದೀಪ್ ಅಂದ್ರೆ ಕೋಟಿ ಕೋಟಿ ಅಭಿಮಾನಿಗಳ ನೆಚ್ಚಿನ ನಟ, ದರ್ಶನ್ ತೂಗುದೀಪ್ ಅವರಿಗೆ ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲಿ ಅಭಿಮಾನಿಗಳ ಬಳಗವಿದೆ. ಅದರಲ್ಲೂ ಸಿನಿಮಾಗಳ ಮೂಲಕ ನೂರಾರು ಕೋಟಿ ರೂಪಾಯಿ ಬಾಕ್ಸ್ ಆಫಿಸ್ ಕಲೆಕ್ಷನ್ ಮಾಡಿ ದಾಖಲೆ ಮೇಲೆ ದಾಖಲೆ ಕೂಡ ನಿರ್ಮಾಣ ಮಾಡಿದ್ದರು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರು. ಹೀಗೆ ಎಲ್ಲವೂ ತುಂಬಾ ಚನ್ನಾಗಿದೆ ಅನ್ನುವಾಗಲೇ ದೊಡ್ಡ ಆಘಾತ ಎದುರಾಗಿತ್ತು, ದಿಢೀರ್ ನಟ ದರ್ಶನ್ ತೂಗುದೀಪ್ ಅವರು ಜೈಲು ಸೇರುವ ಪರಿಸ್ಥಿತಿ ಎದುರಾಗಿತ್ತು. ಹೀಗಿದ್ದಾಗಲೇ ರೇಣುಕಾಸ್ವಾಮಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿ ಸ್ಫೋಟಕ ಸತ್ಯ?

ಹೌದು, ನಟ ದರ್ಶನ್ ಹೆಸರು ಕೇಳಿಬಂದಿರುವ ರೇಣುಕಾಸ್ವಾಮಿ ಪ್ರಕರಣದ ತನಿಖೆ ಮತ್ತೊಂದು ಮಹತ್ವದ ಹಂತವನ್ನ ಈಗ ತಲುಪಿದೆ. ಪ್ರಕರಣದಲ್ಲಿ ಸಾಕ್ಷಿದಾರನಿಗೆ ಬೆದರಿಕೆ ಹಾಕಿರುವ ಆರೋಪದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ಈ ಕೃತ್ಯದ ಹಿಂದೆ ನಿಜವಾಗಿ ಯಾರು ಇದ್ದಾರೆ?? ಎನ್ನುವ ಯಕ್ಷ ಪ್ರಶ್ನೆಗೆ ಉತ್ತರ ಸಿಗುವ ಸಮಯ ಬಂದೇ ಬಿಟ್ಟಿದೆ. ತನಿಖಾಧಿಕಾರಿಗಳು ನಿರೀಕ್ಷಿಸುತ್ತಿರುವ ಮೊಬೈಲ್ ತಾಂತ್ರಿಕ ವಿಶ್ಲೇಷಣಾ ವರದಿ ಹಲವು ಮಹತ್ವದ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆ ಇದ್ದು, ಈ ಸಮಯದಲ್ಲೇ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಆತಂಕ ಶುರುವಾಗಿಬಿಟ್ಟಿದೆ. ಅಲ್ಲದೆ ಈ ವಿಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಿನ್ನಡೆ ಆಗಬಹುದಾ? ಬನ್ನಿ ತಿಳಿಯೋಣ.


ಕಾಮಾಕ್ಷಿಪಾಳ್ಯ ಪೊಲೀಸರಿಂದ ತೀವ್ರ ವಿಚಾರಣೆ

ಅಂದಹಾಗೆ ರೇಣುಕಾಸ್ವಾಮಿ ಪ್ರಕರಣದ 49ನೇ ಸಾಕ್ಷಿದಾರ ಸಂದೀಪ್‌ಗೆ ಕೋರ್ಟ್‌ನಲ್ಲಿ ಹೇಳಿಕೆ ನೀಡದಂತೆ ಒತ್ತಡ ಹೇರಿದ್ದು, ವಾಟ್ಸಾಪ್ ಕರೆಗಳ ಮೂಲಕ ಹಾಗೂ ಖುದ್ದಾಗಿ ಭೇಟಿ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಮೂವರು ಶಂಕಿತರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ವಿಚಾರಣೆ ನಡೆಸುವಾಗ ಆರೋಪಿಗಳು ತನಿಖೆಗೆ ಅಗತ್ಯವಾಗಿರುವ ಯಾವುದೇ ಮಹತ್ವದ ಮಾಹಿತಿ ಬಹಿರಂಗಪಡಿಸಿಲ್ಲ ಎನ್ನಲಾಗಿದೆ. ಈ ಸಮಯದಲ್ಲೇ ಬೆದರಿಕೆ ಹಾಕಲು ಪ್ರಚೋದನೆ ನೀಡಿದ ವ್ಯಕ್ತಿಯ ಮಾಹಿತಿ ಬಗ್ಗೆ ಪ್ರಶ್ನಿಸಿದಾಗ, ಆರೋಪಿಗಳು ಫುಲ್ ಸೈಲೆಂಟ್ ಆಗಿದ್ದರು ಎನ್ನಲಾಗಿದೆ. ಆದರೆ ಇದೇ ಸಮಯದಲ್ಲಿ ಆರೋಪಿಗಳ ಬಳಿಯಿದ್ದ 03 ಮೊಬೈಲ್ ಫೋನ್‌ಗಳನ್ನ ಪೊಲೀಸರು ಸಿಐಡಿ ತಾಂತ್ರಿಕ ವಿಭಾಗಕ್ಕೆ ಕಳುಹಿಸಿದ್ದರು.

ಮೊಬೈಲ್‌ನಲ್ಲಿ ಇರುವ ಡೇಟಾ, ಕಾಲ್ ಡೀಟೇಲ್ಸ್ ಮತ್ತು ವಾಟ್ಸಾಪ್ ಮೆಸೇಜ್ ಅಳಿಸಿ ಹಾಕಿರುವ ಹಿನ್ನೆಲೆ ಡಿಜಿಟಲ್ ಮಾಹಿತಿ ಮರುಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅದರ ವರದಿ ಕಾಮಾಕ್ಷಿಪಾಳ್ಯ ಪೊಲೀಸರ ಕೈ ಸೇರುವ ನಿರೀಕ್ಷೆಯಿದೆ. ಇದೇ ಕಾರಣಕ್ಕೆ ತಾಂತ್ರಿಕ ದಾಖಲೆಗಳಲ್ಲಿ ಪ್ರಕರಣದ ದಿಕ್ಕು ಬದಲಾಯಿಸುವ ಮಾಹಿತಿಗಳು ಇರುವ ಸಾಧ್ಯತೆ ತಳ್ಳಿಹಾಕುವಂತೆ ಇಲ್ಲ. ಬೆದರಿಕೆ ಹಿಂದಿರುವ ಸಂಚುಕೋರ ಅಥವಾ ಸೂಚನೆ ನೀಡಿದ ವ್ಯಕ್ತಿ ಗುರುತು ಈ ವರದಿಯಿಂದ ಪತ್ತೆಯಾಗುವ ವಿಶ್ವಾಸ ತನಿಖೆ ನಡೆಸುತ್ತಿರುವ ತಂಡದಲ್ಲಿದೆ. ಪ್ರಮುಖ ಆರೋಪಿಯನ್ನ ಪೊಲೀಸರು ಇನ್ನೂ ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಬೆದರಿಕೆ ಘಟನೆ ಹಿನ್ನೆಲೆ ಏನು?

ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆತಂದಿರಲಿಲ್ಲ ಎಂದು ಹೇಳಲು ಸಾಕ್ಷಿದಾರ ಸಂದೀಪ್ ಮೇಲೆ ಒತ್ತಡವನ್ನು ಹೇರಿದ್ದರು ಎಂಬ ಆರೋಪ ಹೊರಿಸಲಾಗಿದೆ. ಈ ಬಗ್ಗೆ ಸಂದೀಪ್ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು. ಅದರ ಆಧಾರದಲ್ಲಿಯೇ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಈ ಪ್ರಕರಣದಲ್ಲಿ ಮೂವರನ್ನ ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಇಷ್ಟೇ ಅಲ್ಲದೇ ಆರೋಪಿಗಳ ಹಿಂದೆ ಯಾರೆಲ್ಲಾ ಇದ್ದಾರೆ? ಎಂಬುದನ್ನು ಪೊಲೀಸರು ಇದೀಗ ಹುಡುಕುತ್ತಿದ್ದು, ತನಿಖೆಯ ನಂತರ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗುವ ಸಾಧ್ಯತೆ ದಟ್ಟವಾಗಿದೆ.