ಕನ್ನಡ ಸಿನಿಮಾ ರಂಗ ಇಡೀ ಜಗತ್ತನ್ನು ಆಳುವ ಸಮಯ ಬಂದಿದೆ, ಕನ್ನಡಿಗರ ಸಿನಿಮಾ ರಂಗದ ಅಬ್ಬರ ಕಂಡು ಸ್ವತಃ ಹಾಲಿವುಡ್ & ಬಾಲಿವುಡ್ ಮಾತ್ರವಲ್ಲ ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವ ಸಿನಿಮಾ ರಂಗಗಳು ಕೂಡ ಶೇಕ್ ಆಗುತ್ತಿವೆ. 100 ಕೋಟಿ, 200 ಕೋಟಿ ರೂಪಾಯಿ ಮಾತ್ರ ಅಲ್ಲ, 1000 ಕೋಟಿ & 1500 ಕೋಟಿ ರೂಪಾಯಿ ದುಡಿಯುವ ಹಂತಕ್ಕೆ ಕನ್ನಡ ಸಿನಿಮಾಗಳು ಮುಂದೆ ನುಗ್ಗುತ್ತಿವೆ. ಅದರಲ್ಲೂ ಇನ್ನೇನು ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಟಾಕ್ಸಿಕ್ 2000 ಕೋಟಿ ಅಂದ್ರೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಟಾರ್ಗೆಟ್ ಇಟ್ಟುಕೊಂಡು ಬರ್ತಿದೆ. ಇಂತಹ ಸಮಯದಲ್ಲೇ ಧ್ರುವ ಸರ್ಜಾ ಅಭಿಮಾನಿಗಳಿಗೆ ಆಘಾತ, ಕಾಗೆ ಬಂಗಾರ ಹುಡುಕಲು ದುನಿಯಾ ಸೂರಿ ತಯಾರಿ?
ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯ ಮೂಡಿಸಿದ್ದ, ನಟ ಧ್ರುವ ಸರ್ಜಾ & ನಿರ್ದೇಶಕ ದುನಿಯಾ ಸೂರಿ ಒಂದಾಗಿ ಮಾಡುತ್ತಿದ್ದ ಬಹು ನಿರೀಕ್ಷಿತ ಸಿನಿಮಾಗೆ ದಿಢೀರ್ ಬ್ರೇಕ್ ಬಿದ್ದಿದೆ. ಕನ್ನಡ ಸಿನಿಮಾ ರಂಗದಲ್ಲಿ ದುನಿಯಾ ಸೂರಿಗೆ ಒಂದು ದೊಡ್ಡ ಹೆಸರು ಇದ್ದು, ಯಾವ ಸಿನಿಮಾ ಹೆಂಗೆ ತೆಗೆಯಬೇಕು? ಹಂಗೆ ತಾವು ಮಾಡಿದ ಸಿನಿಮಾ ಹೆಂಗೆಲ್ಲಾ ಮಾರ್ಕೆಟಿಂಗ್ ಮಾಡಬೇಕು? ಎಂಬುದು ಸ್ಪಷ್ಟವಾಗಿ ಗೊತ್ತಿದೆ. ಇದೇ ಕಾರಣಕ್ಕೆ ದುನಿಯಾ ಸೂರಿ ಹಲವು ವರ್ಷ ಒದ್ದಾಡಿ ಒಂದೇ ಸಿನಿಮಾ ತೆಗೆಯುತ್ತಾರೆ, ದುಡ್ಡಿಗಿಂತ ನನಗೆ ಸಿನಿಮಾ ಹಾಗೂ ಅದನ್ನು ನೋಡುವ ಪ್ರೇಕ್ಷಕ ಪ್ರಭುವೇ ಮುಖ್ಯ ಅನ್ನೋದು ಕನ್ನಡಿಗ ದುನಿಯಾ ಸೂರಿ ಇಟ್ಟುಕೊಂಡಿರುವ ಮೌಲ್ಯ. ಹಾಗಾದರೆ ದಿಢೀರ್ ನಟ ಧ್ರುವ ಸರ್ಜಾ & ನಿರ್ದೇಶಕ ದುನಿಯಾ ಸೂರಿ ಒಟ್ಟಾಗಿ ಮಾಡಬೇಕಿದ್ದ ಸಿನಿಮಾ ನಿಂತಿದ್ದು ಏಕೆ? ಮುಂದೆ ಓದಿ...
ಧ್ರುವ ಸರ್ಜಾ ಅಭಿಮಾನಿಗಳಿಗೆ ಬೇಸರ...
ಸ್ಯಾಂಡಲ್‌ವುಡ್ ಎಂಬ ಖ್ಯಾತಿ ಪಡೆದಿರುವ ನಮ್ಮ ಕನ್ನಡ ಸಿನಿಮಾರಂಗ ಗಂಧದ ರೀತಿಯಲ್ಲೇ ಸುಗಂಧ ಭರಿತ & ಇಡೀ ಜಗತ್ತಿನಲ್ಲಿ ಉತ್ತಮ ಹೆಸರು ಪಡೆದಿರುವ ಚಿತ್ರರಂಗ. ಇನ್ನೇನು ಕನ್ನಡ ಸಿನಿಮಾ ರಂಗಕ್ಕೆ 100 ವರ್ಷ ಕೂಡ ತುಂಬಲಿದ್ದು, ಕೋಟಿ ಕೋಟಿ ಅಭಿಮಾನಿಗಳು ಈ ಸಂತಸದ ಕ್ಷಣಕ್ಕಾಗಿ ಕಾಯುತ್ತಾ ಕೂತಿದ್ದಾರೆ. ಆದರೆ ಹೀಗೆಲ್ಲಾ ಖುಷಿ ಖುಷಿಯಾದ ವಾತಾವಣರದಲ್ಲಿ ಕನ್ನಡ ಚಿತ್ರರಂಗದಲ್ಲಿ ಕೆಲವು ವಿವಾದಗಳು ಹಾಗೂ ವಿಚಿತ್ರ ಘಟನೆಗಳೆಲ್ಲಾ ನಡೆಯುತ್ತಾ ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ. ಅದೇ ರೀತಿಯಾಗಿ ಈಗ ನಿರ್ದೇಶಕ ದುನಿಯಾ ಸೂರಿ ಡೈರೆಕ್ಷನ್ ಮಾಡಬೇಕಿದ್ದ & ಧ್ರುವ ಸರ್ಜಾ ಹೀರೋ ಆಗಿ ನಟಿಸಬೇಕಿದ್ದ ಸಿನಿಮಾ ಆರಂಭಕ್ಕೂ ಮೊದಲೇ ನಿಂತು ಹೋಗಿದೆ. ಇದಕ್ಕೆ ಕಾರಣ ಏನಪ್ಪಾ ಅಂದ್ರೆ...
ದಿಢೀರ್ ಸಿನಿಮಾ ನಿಲ್ಲಲು ಕಾರಣ?
ಹೌದು, ದುನಿಯಾ ಸೂರಿ ಡೈರೆಕ್ಷನ್ ಮಾಡಬೇಕಿದ್ದ & ಧ್ರುವ ಸರ್ಜಾ ನಟಿಸಬೇಕಿದ್ದ ಸಿನಿಮಾ ನಿಂತು ಹೋಗಲು ಕಾರಣ ಹಲವು. ಅದ್ರಲ್ಲಿ ಪ್ರಮುಖವಾಗಿ ಈ ಸಿನಿಮಾಗೆ ನಿರ್ಮಾಪಕ ಮನೀಶ್ ಶಾ ಅವರ ಗೋಲ್ಡ್‌ಮೈನ್ಸ್ ಟೆಲಿಫಿಲಮ್ಸ್ ಸಂಸ್ಥೆ ನಿರ್ಮಾಣ ಹೊಣೆ ಹೊರುವ ನಿರೀಕ್ಷೆ ಇತ್ತು. ಮತ್ತೊಂದು ಕಡೆ ಇದೇ ಸಂಸ್ಥೆ ಈಗ ಧ್ರುವ ಸರ್ಜಾ ಅಭಿನಯದ 'ಕ್ರಿಮಿನಲ್' ಸಿನಿಮಾಗೆ ಕೂಡ ಸಾಥ್ ಕೊಟ್ಟಿದ್ದು, ಇದರ ಜೊತೆಗೆ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಗೆ ಕೂಡ ಗೋಲ್ಡ್‌ಮೈನ್ಸ್ ಟೆಲಿಫಿಲಮ್ಸ್ ನಿರ್ಮಾಣ ಹೊಣೆ ಹೊರಲಿದೆ ಎನ್ನಲಾಗಿತ್ತು.
ಇದೇ ಕಾರಣಕ್ಕೆ ನಿರ್ದೇಶಕ ದುನಿಯಾ ಸೂರಿ ಅವರ ತಂಡ ಹಲವು ತಿಂಗಳು ಸಿಕ್ಕಾಪಟ್ಟೆ ಶ್ರಮ ವಹಿಸಿ ಕಥೆ, ಚಿತ್ರಕಥೆ, ಪಾತ್ರಗಳ ವಿನ್ಯಾಸ, ಬಜೆಟ್ ಸೇರಿದಂತೆ ಶೂಟಿಂಗ್ ನಡೆಸಲು ವೇಳಾಪಟ್ಟಿ ಸಿದ್ಧಪಡಿಸಿತ್ತು ಅಂತಾ ಹೇಳಲಾಗುತ್ತಿದೆ. ಈ ರೀತಿ ಧ್ರುವ ಸರ್ಜಾ ಸಿನಿಮಾಗೆ ಅಂತಾ ದುನಿಯಾ ಸೂರಿ ಅವರ ತಂಡ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರೂ ಅತ್ತ ಏನೋ ಮಿಸ್ಟೇಕ್ ಹೊಡೆದಿದೆ. ಸಿನಿಮಾ ವೇಗ ಪಡೆಯದ ಕಾರಣಕ್ಕೆ ದಿಢೀರ್ ಅಂತಾ ಧ್ರುವ ಸರ್ಜಾ ನಟಿಸಬೇಕಿದ್ದ ಸಿನಿಮಾ ಡೈರೆಕ್ಷನ್ ಹೊಣೆಯಿಂದ ಹಿಂದೆ ಸರಿದಿದ್ದಾರೆ ನಿರ್ದೇಶಕ ದುನಿಯಾ ಸೂರಿ ಅವರು ಎನ್ನಲಾಗಿದೆ.
ಕಾಗೆ ಬಂಗಾರಕ್ಕೆ ಸೂರಿ ಸಿದ್ಧತೆ?
ಕನ್ನಡಿಗರ ಬಾಯಲ್ಲಿ ಸುಕ್ಕಾ ಸೂರಿ ಅಂತಾನೇ ಕರೆಸಿಕೊಳ್ಳುವ ನಿರ್ದೇಶಕ ದುನಿಯಾ ಸೂರಿ ಅವರು ತಮ್ಮ ತಂಡದಲ್ಲಿ ಅತ್ಯುತ್ತಮ ಬರಹಗಾರರು ಹಾಗೂ ಸಿನಿಮಾ ಬಗ್ಗೆ ಅದ್ಭುತ ಕನಸು ಹೊಂದಿರುವ ಪಡೆಯನ್ನೇ ಕಟ್ಟಿಕೊಂಡಿದ್ದಾರೆ. ಹೀಗಿದ್ದಾಗ ಒಂದೇ ಸಿನಿಮಾಗಾಗಿ ಅವರನ್ನು ಕಾಯಿಸುವುದು ಸರಿಯಲ್ಲ ಎಂಬ ನಿರ್ಧಾರ ಅವರದ್ದು ಎನ್ನಲಾಗಿದ್ದು, ಇದೀಗ ಗಟ್ಟಿ ನಿರ್ಧಾರ ಮಾಡಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ದುನಿಯಾ ಸೂರಿ. ಇಷ್ಟು ಮಾತ್ರವಲ್ಲ ಬರೋಬ್ಬರಿ 10 ವರ್ಷಗಳಿಂದ ತಮ್ಮ ಅಭಿಮಾನಿಗಳನ್ನು 'ಕಾಗೆ ಬಂಗಾರ' ಸಿನಿಮಾಗಾಗಿ ಕಾಯಿಸುತ್ತಲೇ ಇರುವ ಕನ್ನಡಿಗರ ಪಾಲಿನ ಸುಕ್ಕಾ ಸೂರಿ, ಗಟ್ಟಿ ನಿರ್ಧಾರಕ್ಕೆ ಬಂದಂತೆ ಕಾಣಿಸುತ್ತಿದೆ. ಅದು ಏನಪ್ಪಾ ಅಂದ್ರೆ, ಇದೀಗ ಧ್ರುವ ಸರ್ಜಾ ಅವರ ಸಿನಿಮಾ ಪಕ್ಕಕ್ಕೆ ಇಟ್ಟು 'ಕಾಗೆ ಬಂಗಾರ'ಕ್ಕೆ ಕೈಹಾಕಿ ಕೆಲಸ ಶುರು ಮಾಡುವುದು ಅಂತೆ. ಈ ಬಗ್ಗೆ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಹಲ್‌ಚಲ್ ಎದ್ದಿದೆ. ಇಷ್ಟಾದರೂ ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ, ಹೀಗಾಗಿ ಅಭಿಮಾನಿಗಳ ಕುತೂಹಲ ಡಬಲ್ ಆಗಿದೆ...
ಸೂರಿ ಸಿನಿಮಾಗೆ ಕಾಯುತ್ತಿರುವ ಅಭಿಮಾನಿಗಳು!
ನಿಮಗೆಲ್ಲಾ ಗೊತ್ತಿರುವಂತೆ ಒಂದು ಸಿನಿಮಾ ಕಥೆಯನ್ನು ಎರಡು ಅಥವಾ ಅದಕ್ಕಿಂತ ಹೆಚ್ಚು ಸಿನಿಮಾಗಳ ಜೊತೆಗೆ ಕೊಂಡಿ ಮಾಡಿ ಬೆರೆತುಕೊಳ್ಳುವಂತೆ ಮಾಡಿದರೆ ಅದು ಸಿನಿಮಾ ಯೂನಿವರ್ಸ್ ಆಗುತ್ತದೆ. ಅದರಲ್ಲೂ ಈ ರೀತಿಯ ಸಿನಿಮಾ ಯೂನಿವರ್ಸ್ ಈಗಾಗಲೇ ಇಂಗ್ಲಿಷ್ ಸಿನಿಮಾ ರಂಗ ಹಾಲಿವುಡ್ ಹಾಗೂ ನಮ್ಮ ದೇಶದ ತಮಿಳು ಸಿನಿಮಾ ರಂಗ ಕಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಆದರೆ ನಿಮ್ಮೆಲ್ಲರಿಗೂ ತಿಳಿಯದೇ ಇರುವ ಮತ್ತೊಂದು ವಿಚಾರ ಕೂಡ ಇದೇ ಕಣ್ರೀ, ಅದು ಏನಂದ್ರೆ ನಮ್ಮ ಸುಕ್ಕಾ ಮ್ಯಾನ್ ಸೂರಿ ಅವರು ಕನ್ನಡಿಗರಿಗೆ ಗುಟ್ಟು ಬಿಟ್ಟು ಕೊಡದಂತೇ ಒಂದು ಸಿನಿಮಾ ಯೂನಿವರ್ಸ್ ರೂಪಿಸಿದ್ದಾರೆ. ಇದರಲ್ಲಿ ಕಡ್ಡಿಪುಡಿ, ಕೆಂಡ ಸಂಪಿಗೆ, ಪಾಪ್ ಕಾರ್ನ್ ಮಂಕಿ ಟೈಗರ್ ಜೊತೆಗೆ ಕಾಗೆ ಬಂಗಾರ ಕಥೆ ಬೆರೆತುಕೊಳ್ಳುವ ಚರ್ಚೆ ಶುರುವಾಗಿದೆ. ಅಂದಹಾಗೆ 99 ಪರ್ಸೆಂಟ್ ಈ ಮಾತು ನಿಜ ಕೂಡ, ಆದರೆ ನಮ್ಮ ದುನಿಯಾ ಸೂರಿ ಅವರು ಇದನ್ನ ಕನ್ಫರ್ಮ್ ಮಾಡಬೇಕಿದೆ ಅಷ್ಟೇ.