Donald Trump: ಅಪ್ಪನ ಅಗಲಿಕೆಗೆ ಸೇಡು ತೀರಿಸಿಕೊಳ್ಳುವ ಮಾತನಾಡಿದ ಇರಾನ್ ಸರ್ವಾಧಿಕಾರಿ!

bengaluru diaries | July 11, 2026 - 7:15 pm
ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಕೋಳಿ ಜಗಳ ದೊಡ್ಡ ಹಂತಕ್ಕೆ ಹೋಗುತ್ತಿದೆ, ಇನ್ನೇನು ಯುದ್ಧದ ಕೆನ್ನಾಲಿಗೆ ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮತ್ತೆ ಮತ್ತೆ ಇಬ್ಬರ ಮಧ್ಯೆ ಕಿರಿಕ್ ಜೋರಾಗುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ಅಮೆರಿಕ & ಇರಾನ್ ಅಧಿಕಾರಿಗಳ ಮಧ್ಯೆ ಮಾತುಕತೆ ನಡೆದು, ಇನ್ನೇನು ಯುದ್ಧವು ನಿಂತೇ ಹೋಗುತ್ತಿದೆ ಎನ್ನುವಂಥ ವಾತಾವರಣ ಸೃಷ್ಟಿಯಾಗಿತ್ತು. ಆದರೆ ಕೆಲ ದಿನಗಳಲ್ಲಿ ಇಬ್ಬರೂ ಮತ್ತೊಮ್ಮೆ ತಿಕ್ಕಾಟ ಆರಂಭಿಸಿದ್ದು, ಇರಾನ್ ಸೇನೆ & ಅಮೆರಿಕದ ಸೇನೆ ನಡುವೆ ಮತ್ತೊಮ್ಮೆ ಘೋರ ಕಾಳಗ ಆರಂಭವಾಗಿದೆ. ಈ ಮೂಲಕ ಮಧ್ಯಪ್ರಾಚ್ಯ ಇನ್ನೊಮ್ಮೆ ಬೂದಿ ಮುಚ್ಚಿದ ಕೆಂಡವಾಗಿಬಿಟ್ಟಿದೆ. ಇದೇ ಸಮಯದಲ್ಲಿ ಇರಾನ್ ಸರ್ವಾಧಿಕಾರಿ ಸೇಡಿನ ಬಗ್ಗೆ ಮಾತನಾಡಿರುವುದು ಗಾಯದ ಮೇಲೆ ಉಪ್ಪು ಸವರಿದಂತೆ ಆಗಿದೆ.

ಹೌದು, ಮೊಜ್ತಾಬಾ ಖಮೇನಿ ಇದೀಗ ಇರಾನ್ ದೇಶದ ನೂತನ ಸರ್ವಾಧಿಕಾರಿ ಆಗಿದ್ದು ಅಮೆರಿಕದ ಕಣ್ಣು ಕೆಂಪಾಗಿಸಿ ಯುದ್ಧಕ್ಕೆ ಇನ್ನಷ್ಟು ಪ್ರಚೋದನೆ ನೀಡಿದಂತೆ ಕಾಣುತ್ತಿದೆ. ಅಲಿ ಖಮೇನಿ ಜೀವ ಬಿಟ್ಟ ನಂತರ ಮೊಜ್ತಾಬಾ ಖಮೇನಿಗೆ ಪಟ್ಟ ಕಟ್ಟಲಾಗಿದ್ದು, ಅಲಿ ಖಮೇನಿ ಮಗನದ್ದೇ ಇದೀಗ ದರ್ಬಾರ್ ಇರಾನ್ ತುಂಬಾ. ಹೀಗಿದ್ದಾಗ ನೂರಾರು ದಿನಗಳ ಕಾಲ ಅಲಿ ಖಮೇನಿ ದೇಹವನ್ನು ಇಟ್ಟುಕೊಂಡು ಕಾದಿದ್ದ ಇರಾನ್ ಇತ್ತೀಚೆಗಷ್ಟೇ ಸಮಯ ನೋಡಿ ಅಂತಿಮ ಸಂಸ್ಕಾರ ಮಾಡಿದೆ. ಹೀಗಿದ್ದಾಗ ಅಪ್ಪನ ಸಾವಿಗೆ ಮೊಜ್ತಾಬಾ ಖಮೇನಿ ಸೇಡು ತೀರಿಸಿಕೊಳ್ಳುವ ಮಾತನಾಡಿರುವುದು ಪ್ರಪಂಚದ ಮೂಲೆ ಮೂಲೆಯಲ್ಲೂ ಹಲ್‌ಚಲ್ ಎಬ್ಬಿಸಿದೆ.


ಇರಾನ್ & ಅಮೆರಿಕ ನಡುವೆ ರಣಕಾಳಗ?
ಮಧ್ಯಪ್ರಾಚ್ಯ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದ ರೀತಿ ಆಗಿದ್ದು, ಇರಾನ್ & ಅಮೆರಿಕ ಯುದ್ಧದಲ್ಲಿ ಅಪ್ಪಚ್ಚಿ ಆಗಿದೆ. ಅಂದಹಾಗೆ ತನ್ನ ತಂದೆಯ ಅಂತಿಮ ಸಂಸ್ಕಾರದ ಸಮಯದಲ್ಲಿ ಸೇಡಿನ ಬಗ್ಗೆ ಮಾತನಾಡಿರುವ ಮೊಜ್ತಾಬಾ ಖಮೇನಿ, ಹುತಾತ್ಮ ನಾಯಕನ ರಕ್ತ ಮತ್ತು ಎರಡೂ ಯುದ್ಧಗಳಲ್ಲಿ ಜೀವ ಬಿಟ್ಟು ಹುತಾತ್ಮರಾದವರ ಪರವಾಗಿ ಸೇಡು ತೀರಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡುತ್ತೇವೆ ಎಂದಿರುವ ಮೊಜ್ತಾಬಾ ಖಮೇನಿ, ಅಮೆರಿಕದ ವಿರುದ್ಧ ಮತ್ತೆ ತೊಡೆತಟ್ಟಿರುವುದು ಜಗತ್ತಿನ ಕುತೂಹಲ ಕೆರಳಿಸಿದೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮತ್ತಷ್ಟು ಕೋಪಗೊಳ್ಳುವಂತೆ ಮಾಡಿ ಹಲ್‌ಚಲ್ ಎಬ್ಬಿಸಿದೆ.

ನೋಡ ನೋಡುತ್ತಲೇ ಜಾಗತಿಕ ಮಟ್ಟದಲ್ಲಿ ಇರಾನ್ & ಅಮೆರಿಕ ಯುದ್ಧವು ಇನ್ನೊಮ್ಮೆ ಅಲ್ಲೋಲ, ಕಲ್ಲೋಲ ಸೃಷ್ಟಿ ಮಾಡುವ ಮುನ್ಸೂಚನೆ ನೀಡಿದೆ. ಅದರಲ್ಲೂ ಮಧ್ಯಪ್ರಾಚ್ಯ ಪ್ರದೇಶ ಈಗಿನ ಸ್ಥಿತಿಯಲ್ಲಿ, ಬೂದಿ ಮುಚ್ಚಿದ ಕೆಂಡವಾಗಿ ಬದಲಾಗಿ ಕುವೈತ್, ಸೌದಿ ಅರೇಬಿಯಾ & ಯುಎಇ ಮೇಲೆ ಯಾವಾಗ ಬೇಕಾದ್ರೂ ಇರಾನ್ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಅಮೆರಿಕ ಈ ದೇಶಗಳಲ್ಲಿ ತನ್ನ ಸೇನೆಯನ್ನು ದೊಟ್ಟ ಪ್ರಮಾಣದಲ್ಲಿ ಇರಿಸಿದ್ದು, ಅಮೆರಿಕ ಸೇನಾ ನೆಲೆ ಇರುವ ಜಾಗಗಳನ್ನೇ ಟಾರ್ಗೆಟ್ ಮಾಡುವ ಭೀತಿ ಆವರಿಸಿದೆ ದೊಡ್ಡಣ್ಣನಿಗೆ. ಈಗಾಗಲೇ ಜಾಗತಿಕ ಷೇರು ಮಾರುಕಟ್ಟೆ, ತೈಲ ಮಾರುಕಟ್ಟೆ, ಚಿನ್ನ & ಬೆಳ್ಳಿ ಮಾರುಕಟ್ಟೆ ಅಲ್ಲಾಡಿ ಹೋಗಿದೆ.

ಮಧ್ಯಪ್ರಾಚ್ಯ ಭಾಗಕ್ಕೆ ಇನ್ನಷ್ಟು ಸೇನೆ?
ಅಮೆರಿಕದ ಅಧ್ಯಕ್ಷ ಈಗಾಗಲೇ ಘೋಷಣೆ ಮಾಡಿರುವಂತೆ, ಇರಾನ್ ನಾಯಕರಿಗೆ ಬುದ್ಧಿ ಕಲಿಸಲು ದಾಳಿ ಮಾಡುವುದು ಪಕ್ಕಾ. ಈ ಕಾರಣಕ್ಕೇ ಇಸ್ರೇಲ್ ಕೂಡ ಸರ್ವ ಸನ್ನದ್ಧವಾಗಿ ಅಮೆರಿಕ ಸೇನೆಗೆ ಬೆಂಬಲ ನೀಡಲು ಕಾಯುತ್ತಾ ಕುಳಿತಿದೆ. ಮತ್ತೊಂದು ಕಡೆ ಅಮೆರಿಕ ಕೂಡ ಇನ್ನಷ್ಟು ಸೈನಿಕರು ಹಾಗೂ ಶಸ್ತ್ರಾಸ್ತ್ರಗಳನ್ನು ಇರಾನ್ ಬಳಿಗೆ ಕಳುಹಿಸುವ ಸಾಧ್ಯತೆ ಈಗ ದಟ್ಟವಾಗಿದೆ. ಈ ಬಾರಿ ಯುದ್ಧ ಮುಂದುವರಿದರೆ ಮತ್ತೊಮ್ಮೆ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆ ಇದೆ ಅಂತಿದ್ದಾರೆ ತಜ್ಞರು. ಇದು ಭಾರತದ ಮೇಲೂ ಪರಿಣಾಮ ಬೀರುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.