ಡೊನಾಲ್ಡ್ ಟ್ರಂಪ್ ಅವರು ಇದೀಗ ಇರಾನ್ ವಿರುದ್ಧ ಎಲ್ಲಾ ಅಸ್ತ್ರಗಳನ್ನೂ ಬಳಸಿದ್ದಾರೆ, ಇಷ್ಟಾದರೂ ಅತ್ತ ಇರಾನ್ ನಾಯಕರು ತಲೆಬಾಗಿ ಶರಣಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಿದ್ದಾಗ ಇರಾನ್ ಜೊತೆಗೆ ಅಮೆರಿಕ ತಿಕ್ಕಾಟ ದೊಡ್ಡದಾಗಿದ್ದು, ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೆ ಮತ್ತೆ ಪರಿಸ್ಥಿತಿ ಸೂಕ್ಷ್ಮವಾಗಿದೆ. ಇದು ಜಾಗತಿಕ ಆರ್ಥಿಕ ಸ್ಥಿತಿ ಹಾಗೂ ಶಾಂತಿ ಸ್ಥಾಪನೆ ವಿಚಾರದಲ್ಲಿ ಕೂಡ ತೊಡಕು ಉಂಟು ಮಾಡುತ್ತಿದೆ. ಅಮೆರಿಕ & ಇರಾನ್ ಜಗಳದಲ್ಲಿ ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಭಾರಿ ತೊಂದರೆ ಉಂಟಾಗುತ್ತಿದೆ. ಅದರಲ್ಲೂ ಅಮೆರಿಕ ಜೊತೆಯಲ್ಲೂ ಈ ದೇಶಗಳು ಮುನಿಸಿಕೊಂಡ ರೀತಿ ಕಾಣುತ್ತಿದ್ದು, ಇಂತಹ ಸಮಯದಲ್ಲೇ ಒಂದೇ ಏಟಿಗೆ 3 ಹಕ್ಕಿ ಹೊಡೆಯಲು ಸಜ್ಜಾದ ಅಮೆರಿಕ ಅಧ್ಯಕ್ಷ ಟ್ರಂಪ್!
ಹೌದು, ಇರಾನ್ ನಾಯಕರನ್ನ ಫುಲ್ ಸೈಲೆಂಟ್ ಮಾಡಲು ಇದೀಗ ಡೊನಾಲ್ಡ್ ಟ್ರಂಪ್ ಅವರು ಹೊಸದಾದ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ನಡುವಿನ ಮಹತ್ವದ ಮುಖಾಮುಖಿ ಸಭೆ ಶ್ವೇತಭವನದಲ್ಲಿ ನಡೆದಿದೆ. ಇರಾನ್ ಯುದ್ಧದ ಬಳಿಕ ಉಭಯ ನಾಯಕರು ಮೊದಲ ಬಾರಿ ನೇರವಾಗಿ ಭೇಟಿಯಾಗಿ, ಮಧ್ಯಪ್ರಾಚ್ಯದ ಭದ್ರತೆ & ಇರಾನ್ ವಿರುದ್ಧ ಕೈಗೊಳ್ಳಬೇಕಾದ ಕ್ರಮ ಹಾಗೂ ಹಲವು ಪ್ರಮುಖ ಪ್ರಾದೇಶಿಕ ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮಣಿಸಲು ಹೊಸ ಹೊಸ ಅಸ್ತ್ರಗಳ ಪ್ರಯೋಗಕ್ಕೆ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರ್ಥಿಕವಾಗಿ ನಲುಗಿರುವ ಇರಾನ್ ದೇಶವನ್ನು ಯುದ್ಧದಲ್ಲೂ ಕೂಡ ಸೋಲಿಸಲು ಹೊಸ ರಣತಂತ್ರ ಸಿದ್ಧವಾಗಿದೆ ಅಮೆರಿಕ ಕಡೆಯಿಂದ.
ಪರಮಾಣು ಒಪ್ಪಂದಕ್ಕೆ ಒಪ್ಪಿಸಲು ಸಿದ್ಧತೆ
ಅಂದಹಾಗೆ ಅಮೆರಿಕ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ನಡುವೆ ಸುಮಾರು 90 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಇರಾನ್ ಮೇಲೆ ಸೇನಾ ಹಾಗೂ ಇತರ ಮಾರ್ಗಗಳ ಮೂಲಕವೂ ಒತ್ತಡ ಮತ್ತಷ್ಟು ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ. ಸಿರಿಯಾ ಬಗ್ಗೆ ಇಸ್ರೇಲ್ ನಿಲುವು, ಅಮೆರಿಕ ಹಾಗೂ ಸೌದಿ ಅರೇಬಿಯಾ ನಡುವೆ ಪ್ರಸ್ತಾಪ ಆಗಿರುವ ನಾಗರಿಕ ಪರಮಾಣು ಒಪ್ಪಂದ, ಭವಿಷ್ಯದಲ್ಲಿ ಅಮೆರಿಕ ಸೇನೆ ಕಡೆಯಿಂದ ಇಸ್ರೇಲ್‌ಗೆ ನೀಡಲಾಗುವ ನೆರವು ಸೇರಿ ಹಲವು ಮಹತ್ವದ ವಿಷಯಗಳು ಈ ಮಾತುಕತೆಯ ಕೇಂದ್ರಬಿಂದು ಆಗಿದ್ದವು. ಇದೇ ಸಮಯದಲ್ಲಿ ಇರಾನ್ ದೇಶವನ್ನು ಪರಮಾಣು ಒಪ್ಪಂದಕ್ಕೆ ಒಪ್ಪಿಸುವ ಹಾಗೂ ಸೇನಾ ಕಾರ್ಯಾಚರಣೆ ಮೂಲಕ ಇನ್ನಷ್ಟು ಒತ್ತಡ ಹೇರುವ ಬಗ್ಗೆ ಕೂಡ ಚರ್ಚೆ ನಡೆದಿದೆ.
ಒಂದೇ ಏಟಿಗೆ 3 ಹಕ್ಕಿಗೆ ಗುರಿ?
ಈ ಸಭೆಗೂ ಮೊದಲು ಟ್ರಂಪ್ ಹಾಗೂ ನೆತನ್ಯಾಹು ಅವರ ನಡುವೆ ಹಲವು ಬಾರಿ ಭಿನ್ನಾಭಿಪ್ರಾಯ ಮೂಡಿ, ಭಾರಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ ಈ ಸಭೆ ನಂತರ ಶ್ವೇತಭವನ ಈಗಿನ ಮಾತುಕತೆಯನ್ನು ಸಕಾರಾತ್ಮಕ & ಫಲಪ್ರದ ಎಂದು ಬಣ್ಣಿಸಲಾಗಿದೆ. ಎರಡೂ ದೇಶಗಳ ನಡುವಿನ ಭದ್ರತಾ ಸಹಕಾರ ಮತ್ತಷ್ಟು ಬಲಪಡಿಸಲು ಕೂಡ ಇದೀಗ ಮಹತ್ವದ ಚರ್ಚೆ ನಡೆಸಲಾಗಿದೆ. ಈ ಮೂಲಕ ಇರಾನ್ ಬಗ್ಗಿಸಲು ಒಂದೇ ಏಟಿಗೆ 3 ಹಕ್ಕಿ ಹೊಡೆದು ಉರುಳಿಸುವ ದಾಳಕ್ಕೆ ಟ್ರಂಪ್ ಅವರು ಮುಂದಾಗಿದ್ದಾರೆ. ಯುದ್ಧದ ಮೂಲಕ ಸೇನಾ ಕಾರ್ಯಾಚರಣೆಯಲ್ಲಿ, ಇರಾನ್ ಬಲ ನಾಶ ಮಾಡುವುದು & ಆರ್ಥಿಕವಾಗಿ ಕುಗ್ಗಿಸುವುದು ಹಾಗೂ ಪರಮಾಣು ಒಪ್ಪಂದದ ಮೂಲಕ ಇರಾನ್ ಅಣ್ವಸ್ತ್ರ ಹೊಂದುವುದನ್ನು ತಪ್ಪಿಸಲು ಇದೀಗ ಟ್ರಂಪ್ ಅವರು ರಣತಂತ್ರ ರೂಪಿಸಿದ್ದಾರೆ. ಈಗಾಗಲೇ ನ್ಯಾಟೋ ಒಕ್ಕೂಟ ಸೇರಿದಂತೆ ಹಲವು ಸೇನಾ ಕೂಟಗಳ ಬೆಂಬಲ ಟ್ರಂಪ್ ಅವರಿಗೆ ಸಿಗುವ ನಿರೀಕ್ಷೆ ಇದೆ.