Donald Trump: ಇರಾನ್ ಹುಚ್ಚು ಬಿಡಿಸಲು ಹೊಸ ಪ್ಲಾನ್ ಮಾಡಿದ ದೊಡ್ಡಣ್ಣ ಅಮೆರಿಕ!

bengaluru diaries | July 22, 2026 - 8:46 pm

ಅಮೆರಿಕ ಮತ್ತು ಇರಾನ್ ನಡುವೆ ಯಾವುದೇ ಕಾರಣಕ್ಕೂ ಯುದ್ಧ ನಿಲ್ಲುವ ಲಕ್ಷಣ ಇದೀಗ ಕಾಣುತ್ತಿಲ್ಲ, ಈ ಸಮಯದಲ್ಲೇ ಸಂಧಾನ ಮಾಡುವವರು ಕೂಡ ಇಲ್ಲದಂತಹ ವಾತಾವರಣ ನಿರ್ಮಾಣ ಆಗಿದೆ. ಅಮೆರಿಕದಲ್ಲಿ ಇದೀಗ ಇರಾನ್ ವಿರುದ್ಧ ಇನ್ನಷ್ಟು ಆಕ್ರೋಶ ಮೊಳಗುತ್ತಿದ್ದು, ಅಮೆರಿಕ ಸೇನೆ ನೇರವಾಗಿ ಇರಾನ್ ಒಳಗಡೆಗೆ ನುಗ್ಗಿ ಕಾರ್ಯಾಚರಣೆ ಮಾಡುವ ಚಿಂತನೆ ಕೂಡ ಆರಂಭಿಸಿದೆ. ಹಾಗೇ ಇಂತಹ ಸಮಯದಲ್ಲೇ ಇರಾನ್ ತನ್ನ ಒಳಗೇ ಆಂತರಿಕ ಕಿಚ್ಚು ಎದುರಿಸುವ ಹಂತಕ್ಕೆ ಬಂದಿದೆ. ರಾಜಕೀಯ ತಿಕ್ಕಾಟದಲ್ಲಿ ನಲುಗುತ್ತಿರುವ ಇರಾನ್‌ಗೆ ಇನ್ನೊಂದು ಕಡೆ ಅಮೆರಿಕ ದೊಡ್ಡ ಮಟ್ಟದಲ್ಲಿ ಸೇನಾ ಏಟು ನೀಡುತ್ತಿದೆ. ಇಂತಹ ಸೂಕ್ಷ್ಮ ಸಮಯದಲ್ಲೇ, ಇರಾನ್ ಹುಚ್ಚು ಬಿಡಿಸಲು ಹೊಸ ಪ್ಲಾನ್ ಮಾಡಿದ ದೊಡ್ಡಣ್ಣ ಅಮೆರಿಕ!

ಇರಾನ್ ಸೇನೆಯನ್ನ ಬುಡದ ಸಮೇತ ಅಲ್ಲಾಡಿಸಲು ಅಮೆರಿಕ ಸೇನೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತಿದ್ದು, ಭಾರಿ ದೊಡ್ಡ ಪೆಟ್ಟು ನೀಡುತ್ತಿದೆ. ಅದರಲ್ಲೂ ಇರಾನ್ ಆರ್ಥಿಕತೆಯ ಶಕ್ತಿಯಾಗಿರುವ ತೈಲ ಸಂಗ್ರಹ ಹಾಗೂ ತೈಲ ಸರಬರಾಜು ದಾರಿಯನ್ನೇ ನಾಶ ಮಾಡುತ್ತಿದೆ ಅಮೆರಿಕ. ಹೀಗಿದ್ರೂ, ಇರಾನ್ ಮಾತ್ರ ಅಮೆರಿಕ ಎದುರು ಶರಣಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ನೋಡ ನೋಡುತ್ತಲೇ ಇರಾನ್ ಕೂಡ ಅಮೆರಿಕ ವಿರುದ್ಧ ಮತ್ತೆ ಇಸ್ರೇಲ್ ವಿರುದ್ಧ ದಾಳಿ ನಡೆಸುತ್ತಿದೆ. ಅದರಲ್ಲೂ ಅಮೆರಿಕದ ಸೇನಾ ನೆಲೆಗಳು ಇರುವ ಸೌದಿ ಅರೇಬಿಯಾ & ಯುಎಇ ಸೇರಿದಂತೆ ಕತಾರ್ ಮತ್ತಿತರ ಭಾಗದ ಮೇಲೆ ದಾಳಿ ಹೆಚ್ಚಾಗಿದೆ. ಇದೇ ಕಾರಣಕ್ಕೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಚಿಂತನೆ ನಡೆಸಿದ್ದಾರೆ.


ಇರಾನ್ ವಿರುದ್ಧ ಭೂಕಾರ್ಯಾಚರಣೆ ಫಿಕ್ಸ್?

ಅಮೆರಿಕ ನಮಗೆ ಏನೂ ಮಾಡಲು ಆಗಲ್ಲ ಬಿಡು, ನಮ್ಮ ಹತ್ತಿರ ಸಾಕಷ್ಟು ಮಿಸೈಲ್ಸ್ ಇವೆ ಅಂತಾ ಇರಾನ್ ಉದ್ಧಟತನ ಮೆರೆಯುತ್ತಾ ದಾಳಿ ಮಾಡುತ್ತಿದೆ. ಆದರೆ ಇದನ್ನು ನೋಡಿ ನೋಡಿ ರೊಚ್ಚಿಗೆದ್ದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಹೇಗಾದ್ರೂ ಮಾಡಿ ಇರಾನ್ ಸೇನೆ ಅಮೆರಿಕದ ಎದುರು ಮಂಡಿಯೂರಿ ಕೂರುವಂತೆ ಮಾಡಲು ಸರ್ವ ಪ್ರಯತ್ನ ಶುರು ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಇರಾನ್ ಸೋಲಿಸಲು ಈಗ ಇರುವ ಮಹತ್ವದ ಮಾರ್ಗ ಎಂದರೆ ಅದು ಭೂಕಾರ್ಯಾಚರಣೆ, ಈ ಕಾರಣಕ್ಕೆ ಈಗ ಇರಾನ್‌ನ ವಿರುದ್ಧ ಭೂಕಾರ್ಯಾಚರಣೆ ಫಿಕ್ಸ್? ಎಂಬ ಚರ್ಚೆ ಶುರುವಾಗಿದೆ. ಆದರೆ ಇದು ಅತ್ಯಂತ ಸವಾಲಿನ ಕೆಲಸ ಅಂತಲೂ, ಅಮೆರಿಕ ಸೇನೆ ಇದನ್ನು ಮಾಡಿದರೆ ಸಮಸ್ಯೆ ಗ್ಯಾರಂಟಿ ಅಂತಲೂ ಚರ್ಚೆ ನಡೆಯುತ್ತಿದೆ.

ಇರಾನ್ ಒಳಗಡೆ ನುಗ್ಗುವುದೇ ಸವಾಲು

ಹೌದು, ಮಧ್ಯಪ್ರಾಚ್ಯದ ದೊಡ್ಡ ದೇಶವಾಗಿರುವ ಇರಾನ್ ಇರುವುದು ಮರುಭೂಮಿ ಪ್ರದೇಶದಲ್ಲಿ. ಈ ದೇಶ ಬಹುತೇಕ ಮರುಭೂಮಿ ಹಾಗೂ ತುಂಬಾ ಕಷ್ಟದ ವಾತಾವರಣ ಹೊಂದಿದೆ. ಆದರೆ ಉತ್ತರ ಭಾಗದಲ್ಲಿ ಇದೇ ದೇಶದ ರಾಜಧಾನಿ ತೆಹ್ರಾನ್ ಇದ್ದು, ಇರಾನ್ ದೇಶದ ಶೇಕಡಾ 99 ರಷ್ಟು ಜನರು ರಾಜಧಾನಿ ಸುತ್ತಮುತ್ತಲೇ ವಾಸ ಮಾಡುತ್ತಾರೆ. ಇಂತಹ ವಾತಾವರಣ ಇರುವಾಗ ನೇರವಾಗಿ ಅಮೆರಿಕ ಸೇನೆ ಇರಾನ್ ಒಳಗೆ ನುಗ್ಗಲು & ಭೂಕಾರ್ಯಾಚರಣೆ ನಡೆಸುವುದು ಕಷ್ಟ ಎಂಬ ಮಾತು ಈ ಮೊದಲಿನಿಂದ ಕೂಡ ಕೇಳಿಬರುತ್ತಲೇ ಇದೆ.

ಅಕಸ್ಮಾತ್ ಈ ಸಾಹಸಕ್ಕೆ ಅಮೆರಿಕ ಕೈಹಾಕಿದರೆ, ಆಗ ಸುಲಭವಾಗಿ ಇರಾನ್ ತನ್ನ ಸೈನಿಕರ ಮೂಲಕ ನುಗ್ಗಿ ಅಮೆರಿಕ ಸೇನೆಯನ್ನು ಸೋಲಿಸುವ ಆತಂಕ ಇದೆ ಎಂದು ತಜ್ಞರು ಹೇಳುತ್ತಾರೆ. ಅದರಲ್ಲೂ ಇರಾನ್ ಬತ್ತಳಿಕೆ ಒಳಗೆ ಇರುವ ಅಪಾಯಕಾರಿ ಕ್ಷಿಪಣಿಗಳು ದೊಡ್ಡ ವಿನಾಶ ಉಂಟುಮಾಡುವ ಹಾಗೂ ಸೈನಿಕರಿಗೆ ಅಪಾಯದ ಹಾದಿ ತಂದೊಡ್ಡುವ ಸಾಧ್ಯತೆ ಕೂಡ ಇದೆ ಎಂಬುದು ತಜ್ಞರ ಮಾತು. ಇಷ್ಟಾದ್ರೂ ಅಮೆರಿಕ ಮಾತ್ರ ಇರಾನ್ ವಿರುದ್ಧ ಭೂಕಾರ್ಯಾಚರಣೆ ಅವಕಾಶವನ್ನು ಮರೆತಿಲ್ಲ, ಬದಲಾಗಿ ಇರಾನ್ ಅಕ್ಕಪಕ್ಕದ ದೇಶಗಳ ಮೂಲಕ ದಾಳಿ ಮಾಡಬಹುದಾ? ಎಂಬ ಚರ್ಚೆ ಈಗಲೂ ನಡೆಯುತ್ತಿದೆ. ಅದರಲ್ಲೂ ಅಮೆರಿಕ ಅಧ್ಯಕ್ಷರು ಈ ಕುರಿತು ಯಾವಾಗ ಬೇಕಾದರೂ ಆದೇಶ ನೀಡಬಹುದು ಎಂಬ ಚರ್ಚೆ ಶುರುವಾಗಿದೆ.