ಅಮೆರಿಕ ಜಗತ್ತಿನ ದೊಡ್ಡಣ್ಣ ಅನ್ನೋ ಬಿರುದು ಪಡೆದಿದೆ, ಏಕೆಂದರೆ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ದೇಶ ಎಂಬ ಬಿರುದು ಅಮೆರಿಕಗೆ ಇದೆ. ಮಿಲಿಟರಿ ವಿಚಾರವೇ ಇರಬಹುದು & ಆರ್ಥಿಕತೆಯ ವಿಚಾರ ಇರಬಹುದು, ಒಟ್ನಲ್ಲಿ ಅಮೆರಿಕ ಎಲ್ಲಾ ವಿಚಾರದಲ್ಲೂ ನಂಬರ್ 1 ಆಗಿರಬೇಕು ಅಂತಾ ಬಯಸುತ್ತದೆ. ತಾನೇ ಬಾಸ್, ತನ್ನನ್ನು ಬಿಟ್ಟರೆ ಯಾರೂ ಮುಂದೆ ಹೋಗಬಾರದು ಅಂತಾ ಅಮೆರಿಕ ತಡೆಯುತ್ತದೆ ಎಂಬ ಆರೋಪಗಳು ಕೂಡ ಇವೆ. ಇಷ್ಟೆಲ್ಲಾ ಚರ್ಚೆಗಳ ನಡುವೆಯೇ ಇರಾನ್ ಎಂಬ ಒಂದು ಬಡ ದೇಶ ಹಾಗೂ ಮಧ್ಯಪ್ರಾಚ್ಯ ಭಾಗದ ನಿರ್ಲಕ್ಷಿತ ಪ್ರದೇಶ ಅಮೆರಿಕ ಸೇನೆಗೆ ದೊಡ್ಡ ಪೆಟ್ಟು ಕೊಡುತ್ತಿದೆ. ಇದಕ್ಕೆ ಸರಿಯಾಗಿ ಪಾಠವನ್ನ ಕಲಿಸಲು ಇದೀಗ ಅಮೆರಿಕ ಮುಂದಾಗಿದ್ದು, ಬರೋಬ್ಬರಿ 58 ಬಿಲಿಯನ್ ಡಾಲರ್ ಅಸ್ತ್ರಗಳು ರೆಡಿಯಾಗಿವೆ ಈಗ...
ಹೌದು, ಇರಾನ್ ವಿರುದ್ಧ ಮತ್ತೊಮ್ಮೆ ಸೇನಾ ಕಾರ್ಯಾಚರಣೆ ಶುರು ಮಾಡಿರುವ ಅಮೆರಿಕ ಈಗ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಅಂದಹಾಗೆ ಅಮೆರಿಕ ತನ್ನ ವಾಯು ರಕ್ಷಣೆ ಸಾಮರ್ಥ್ಯ ಇನ್ನಷ್ಟು ಮತ್ತಷ್ಟು ಬಲಪಡಿಸಲು ಲಕ್ಷ ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಲು ಸಜ್ಜಾಗಿದೆ. ಇದಕ್ಕಾಗಿ ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ವಿಶ್ವದ ದೊಡ್ಡಣ್ಣ ಅಮೆರಿಕ, ಜಗತ್ತಿನ ಪ್ರಮುಖ ರಕ್ಷಣಾ ಉಪಕರಣಗಳ ಉತ್ಪಾದನಾ ಸಂಸ್ಥೆ ಲಾಕ್‌ಹೀಡ್ ಮಾರ್ಟಿನ್‌ಗೆ ಭರ್ಜರಿ ಮಿಲಿಟರಿ ಅಸ್ತ್ರಗಳ ಆರ್ಡರ್ ಕೊಟ್ಟಿದೆ. ಅಂದಹಾಗೆ ಬರೋಬ್ಬರಿ 58.6 ಬಿಲಿಯನ್ ಅಮೆರಿಕನ್ ಡಾಲರ್, ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 55 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಡೀಲ್ ಕುದುರಿಸಿದೆ. ಹಾಗಿದ್ರೆ ಇಷ್ಟು ದೊಡ್ಡ ಮೊತ್ತದ ಹಣದಲ್ಲಿ ಈಗ ಅಮೆರಿಕ ಏನೆಲ್ಲಾ ಖರೀದಿ ಮಾಡುತ್ತಿದೆ? ಮುಂದೆ ಓದಿ.
ಅಮೆರಿಕ ಸೇನೆ ಮತ್ತಷ್ಟು ಬಲಿಷ್ಠ!
ಪ್ರಪಂಚದ ಯಾವುದೇ ದೇಶದ ಮಿಲಿಟರಿ ಕೂಡ ಅಮೆರಿಕದಷ್ಟು ಖರ್ಚು ಮಾಡಲ್ಲ, ಹೀಗೆ ಇಡೀ ಜಗತ್ತಿನ ಯಾವುದೇ ದೇಶ ಸುರಿಯದಷ್ಟು ಹಣವನ್ನು ಅಮೆರಿಕ ತನ್ನ ಸೇನೆಗೆ ಸುರಿಯುತ್ತೆ. ಹೀಗಿದ್ದಾಗ ಇರಾನ್ ಎಂಬ ಪುಟಾಣಿ & ಬಟಾಣಿ ದೇಶದ ಎದುರು ಅಮೆರಿಕ ಕೆಲವು ಸಮಯದಲ್ಲಿ ಭಾರಿ ಹಿನ್ನಡೆ ಅನುಭವಿಸಿತ್ತು. ಈ ಕಾರಣಕ್ಕೆ ಎಲ್ಲವನ್ನೂ ಸರಿ ಮಾಡಲು ಇದೀಗ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಅಮೆರಿಕ ಮುಂದಾಗಿದೆಯಂತೆ. ಹೀಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 55 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣವನ್ನು ಸುರಿದು ಪೇಟ್ರಿಯಟ್ ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನ ಖರೀದಿ ಮಾಡಲು ಮುಂದಾಗಿದೆ. ತನ್ನದೇ ಕ್ಷಿಪಣಿಗಳ ಗುತ್ತಿಗೆ ಆಧಾರದಲ್ಲಿ ಉತ್ಪಾದಿಸಲು ಈ ಒಪ್ಪಂದ ಮಾಡಿಕೊಂಡಿರುವ ಜಗತ್ತಿನ ಬಾಸ್ ಅಮೆರಿಕ, ರಕ್ಷಣಾ ಇಲಾಖೆ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ಪೂರ್ಣಗೊಳಿಸಿದೆ ಈಗ.