Donald Trump: ತೆರಿಗೆ ಬಾಣ ಬಿಟ್ಟ ಡೊನಾಲ್ಡ್ ಟ್ರಂಪ್, ತಿರುಗಿಬಿದ್ದ ಜಗತ್ತು!

bengaluru diaries | July 24, 2026 - 9:54 pm

ಟ್ರಂಪ್ ಈ ಕ್ಷಣಕ್ಕೆ ಏನು ಮಾಡ್ತಾರೆ? ಮುಂದಿನ ಗಂಟೆಯಲ್ಲಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಅನ್ನೋದು ಸ್ವತಃ ಅವರ ಜೊತೆಯಲ್ಲಿ ಕೆಲಸ ಮಾಡುವ ಸಚಿವರು & ಅಧಿಕಾರಿಗಳಿಗೆ ಕೂಡ ಗೊತ್ತಾಗುವುದಿಲ್ಲ. ಯಾಕಂದ್ರೆ ದಿಢೀರ್ ದೊಡ್ಡ ದೊಡ್ಡ ನಿರ್ಧಾರ ಘೋಷಣೆ ಮಾಡಿಬಿಡುವ ಟ್ರಂಪ್ ಅವರು, ಪದೇ ಪದೇ ಈ ವಿಚಾರದಲ್ಲಿ ಚರ್ಚೆಯ ಕೇಂದ್ರಬಿಂದು ಆಗಿದ್ದಾರೆ. ಅದರಲ್ಲೂ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ತೆರಿಗೆ ಹೇರಿಕೆ ವಿಚಾರ, ಯುದ್ಧದ ವಿಚಾರದಲ್ಲಿ ಏನೆಲ್ಲಾ ಆಗಿದೆ ಎಂಬುದನ್ನು ಇಡೀ ಜಗತ್ತು ಕಂಡಿದೆ. ಒಂದು ಕಡೆ ಇರಾನ್ ಜೊತೆ, ಭೀಕರ ಕದನದಲ್ಲಿ ಕಿತ್ತಾಡುತ್ತಿರುವ ಅಮೆರಿಕ ದಿಢೀರ್ ಜಗತ್ತಿನ ಹಲವು ದೇಶಗಳ ವಿರುದ್ಧ ತೆರಿಗೆ ಯುದ್ಧವನ್ನೇ ಘೋಷಿಸಿದಂತೆ ಕಾಣುತ್ತಿದೆ.

ಡೊನಾಲ್ಡ್ ಟ್ರಂಪ್ ಅವರು ಇದೀಗ ಮತ್ತೊಮ್ಮೆ ಭಾರಿ ದೊಡ್ಡ ಮೊತ್ತದ ತರಿಗೆ ಹೇರಿಕೆಗೆ ಮುಂದಾಗಿದ್ದು, ಈ ಮೂಲಕ ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಿಗೆ ಟ್ಯಾಕ್ಸ್ ಶಾಕ್ ಕೊಟ್ಟಿದ್ದಾರೆ. ಪ್ರಮುಖವಾಗಿ ಇದೀಗ ಯುರೋಪ್ ದೇಶಗಳು & ಕೆನಡಾ ಸೇರಿದಂತೆ ದಕ್ಷಿಣ ಅಮೆರಿಕದ ದೇಶಗಳಿಗೆ ದೊಡ್ಡಣ್ಣ ಅಮೆರಿಕ ಟ್ಯಾಕ್ಸ್ ಏರಿಕೆ ಮಾಡಿ ಆಘಾತ ನೀಡಿದೆ. ಈ ಬಗ್ಗೆ ಖಡಕ್ ಆಗಿ ರೀಪ್ಲೇ ಕೊಟ್ಟಿರುವ ಯುರೋಪಿಯನ್ ಆಯೋಗದ ಉಪಾಧ್ಯಕ್ಷೆ ಆಗಿರುವ ಕಾಜಾ ಕಲ್ಲಾಸ್, ಬಲವಂತದ ಕಾರ್ಮಿಕರ ವಿಚಾರ ಆಧಾರವಾಗಿ ಇಟ್ಟುಕೊಂಡು ಈಗ ಯುರೋಪಿಯನ್ ಒಕ್ಕೂಟದ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಯುರೋಪ್ ಒಕ್ಕೂಟ ಅಮೆರಿಕದ ಈ ನಿರ್ಧಾರಕ್ಕೆ ಸೆಡ್ಡು ಹೊಡೆಯುವ ಮುನ್ಸೂಚನೆ ನೀಡಿದೆ.


ಭಾರತದ ಮೇಲೆ ಕೂಡ ತೆರಿಗೆ ಹೊರೆ

ಅಮೆರಿಕ ಪದೇ ಪದೇ ತೆರಿಗೆ ವಿಚಾರ ಮುಂದೆ ಇಟ್ಟುಕೊಂಡು, ಹಲವು ದೇಶಗಳನ್ನು ನಿಯಂತ್ರಿಸಲು ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಕೇಳಿ ಬರ್ತಾ ಇದೆ. ಪ್ರಮುಖವಾಗಿ ಅಮೆರಿಕದ ಸ್ನೇಹಿತ ದೇಶಗಳು ಕೂಡ ಇದೇ ವಿಚಾರವಾಗಿ ಈಗ ದೊಡ್ಡಣ್ಣ ಅಮೆರಿಕ ಸಂಯುಕ್ತ ಸಂಸ್ಥಾನದ ವಿರುದ್ಧ ಆಕ್ರೋಶ ಹೊರ ಹಾಕುತ್ತಿವೆ. ಅತ್ತ ಅಮೆರಿಕದ ಪಕ್ಕದ ದೇಶ ಕೆನಡಾ ಕೂಡ ಈಗಾಗಲೇ ರೊಚ್ಚಿಗೆದ್ದು, ಕೆನಡಾ ಪ್ರಧಾನಿ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಸವಾಲು ಎಸೆದಿದ್ದಾರೆ. ಈ ಮೂಲಕ ಇರಾನ್ ಜೊತೆಗಿನ ಭೀಕರ ಯುದ್ಧದ ಸಮಯದಲ್ಲೇ ಟ್ರಂಪ್ ಅವರು ಮತ್ತೊಂದು ಬಾಣ ಬಿಟ್ಟಿದ್ದಾರೆ. ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಭಾರಿ ತಲ್ಲಣ ಸೃಷ್ಟಿಯಾಗಿ ಹಲವು ದೇಶಗಳು ರೊಚ್ಚಿಗೆದ್ದಿವೆ.

ಬ್ರೆಜಿಲ್ ಜೊತೆಯಲ್ಲೂ ಕಿರಿಕ್ ಜೋರು

ಡೊನಾಲ್ಡ್ ಟ್ರಂಪ್ ಆಡಳಿತದ ಜೊತೆಗೆ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇರುವ ಕಾರಣಕ್ಕೆ ಇದೀಗ ಬ್ರೆಜಿಲ್ ಸರ್ಕಾರಕ್ಕೆ ಕೂಡ ತೆರಿಗೆ ಶಾಕ್ ಕೊಡಲಾಗಿದೆ. ಈ ಬಗ್ಗೆ ಬ್ರೆಜಿಲ್ ಇದೀಗ ಪ್ರತಿಕ್ರಿಯೆ ನೀಡಿದ್ದು, ತನ್ನ ವಿರುದ್ಧ ದೊಡ್ಡ ಮೊತ್ತದ ತೆರಿಗೆ ಹಾಕಿರುವ ಟ್ರಂಪ್ ಅವರ ಸರ್ಕಾರಕ್ಕೆ ಸವಾಲು ಹಾಕಿದೆ, ಅಲ್ಲದೇ ಹೊಸದಾಗಿ ವಿಧಿಸಲಾದ ಸುಂಕಗಳಿಗೆ ಯಾವುದೇ ಕಾನೂನುಬದ್ಧ ಆಧಾರವಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಾನವ ಹಕ್ಕುಗಳು ಮತ್ತು ಕಾರ್ಮಿಕರ ಹಕ್ಕುಗಳ ವಿಚಾರವನ್ನು ತಮ್ಮ ಸಂರಕ್ಷಣಾತ್ಮಕ ವ್ಯಾಪಾರ ನೀತಿ ಸಮರ್ಥಿಸಿಕೊಳ್ಳಲು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಬ್ರೆಜಿಲ್ ಈಗ ಟ್ರಂಪ್ ಸರ್ಕಾರದ ವಿರುದ್ಧ ಆರೋಪಿಸಿದೆ. ಈ ಮೂಲಕ ಅಕ್ಕಪಕ್ಕದ ದೇಶಗಳ ಜೊತೆಯಲ್ಲೇ ದೊಡ್ಡಣ್ಣ ಅಮೆರಿಕ ಕಿರಿಕ್ ಇನ್ನಷ್ಟು ಜೋರಾಗಿದೆ.

ಒಟ್ನಲ್ಲಿ ಟ್ರಂಪ್ ಅವರ ತೆರಿಗೆ ವಾರ್ ಇನ್ನೊಂದು ಹಂತಕ್ಕೆ ತಲುಪಿದ್ದು, ನೋಡ್ತಾ ನೋಡ್ತಾ ಈ ಕಿರಿಕ್ ಭಾರಿ ಸದ್ದು ಮಾಡುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳಿಂದ ಹಿಡಿದು, ಈಗಿನ್ನೂ ಅಭಿವೃದ್ಧಿ ಹೊಂದುತ್ತಾ ಇರುವ ದೇಶಗಳ ತನಕ ಬಹುತೇಕರಿಗೆ ಇದರಿಂದ ಸಮಸ್ಯೆ ಎದುರಾಗಲಿದೆ. ಈಗಾಗಲೇ ಕೊರೊನಾ ಅಪ್ಪಳಿಸಿದ ನಂತರ ಜಾಗತಿಕ ಆರ್ಥಿಕ ವ್ಯವಸ್ಥೆ ಕುಸಿತ ಕಾಣುತ್ತಿದ್ದು, ಟ್ರಂಪ್ ಅವರ ನಿರ್ಧಾರ ಇನ್ನಷ್ಟು ಸಮಸ್ಯೆ ಸೃಷ್ಟಿ ಮಾಡುವ ಸಾಧ್ಯತೆ ದಟ್ಟವಾಗಿದೆ.