Football Finals 2026: ಹೋಟೆಲ್ ಮಾಲೀಕರೇ ಗಮನಿಸಿ, ಸರ್ಕಾರದ ಹೊಸ ಆದೇಶ!

bengaluru diaries | July 19, 2026 - 7:05 pm
ಫುಟ್‌ಬಾಲ್ ಫೀವರ್ ಇಡೀ ಜಗತ್ತನ್ನು ಆವರಿಸಿದ್ದು, ಇಂದು ಮೆಸ್ಸಿ ಆಡುವ ದೇಶ ಅರ್ಜೆಂಟಿನಾ & ಯುರೋಪ್ ಖಂಡದ ಸ್ಪೇನ್ ದೇಶಗಳ ನಡುವೆ 2026 ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯ ನಡೆಯುತ್ತಿದೆ. ಇದೇ ಕಾರಣಕ್ಕೆ ಇಡೀ ಜಗತ್ತು ಇಂದು ನಿದ್ದೆಗೆಟ್ಟು, ಕೆಲಸ ಬಿಟ್ಟು 2026 ಫುಟ್‌ಬಾಲ್ ವಿಶ್ವಕಪ್ ಫೈನಲ್ ಮ್ಯಾಚ್ ನೋಡೋದಕ್ಕೆ ಕಾಯುತ್ತಾ ಕೂತಿದೆ. ಇದೇ ರೀತಿ ನಮ್ಮ ಕರ್ನಾಟಕ ಅದರಲ್ಲೂ ನಮ್ಮ ಬೆಂಗಳೂರಿನಲ್ಲೂ ಲಕ್ಷ ಲಕ್ಷ ಫುಟ್‌ಬಾಲ್ ಅಭಿಮಾನಿಗಳು ಇದ್ದು, ಅವರೆಲ್ಲಾ ಇಂದು ಬೆಂಗಳೂರಿನಲ್ಲಿ ಒಂದೇ ಕಡೆ ಸೇರಿ ಎಂಜಾಯ್ ಮಾಡೋದಕ್ಕೆ ಭಾರಿ ದೊಡ್ಡ ಮಟ್ಟದಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇದೇ ಕಾರಣಕ್ಕೆ ಹೋಟೆಲ್ ಮಾಲೀಕರೇ ಗಮನಿಸಿ, ಸರ್ಕಾರದ ಹೊಸ ಆದೇಶ ತಿಳಿಯಿರಿ!

ಅಂದಹಾಗೆ ನಿಮಗೆಲ್ಲಾ ಗೊತ್ತಿರುವಂತೆ ಫುಟ್‌ಬಾಲ್ ಫ್ಯಾನ್ಸ್ ಕಾತರದಿಂದ ಕಾಯುತ್ತಾ ಇರುವ ಫಿಫಾ ವಿಶ್ವಕಪ್-26 ಫೈನಲ್ ಪಂದ್ಯ ಅಮೆರಿಕದಲ್ಲಿ ನಡೆಯುತ್ತಿದೆ. ಈ ಮೂಲಕ ದೊಡ್ಡಣ್ಣ ಅಮೆರಿಕದ ವಾಣಿಜ್ಯ ರಾಜಧಾನಿ ಎಂದು ಕರೆಸಿಕೊಳ್ಳುವ ನ್ಯೂಯಾರ್ಕ್‌ನ ನ್ಯೂಜೆರ್ಸಿ ಫುಟ್‌ಬಾಲ್ ಮೈದಾನ ಎಲ್ಲಾ ರೀತಿಯಲ್ಲೂ ಈಗ ಸಜ್ಜಾಗಿದೆ. ಕೋಟಿ ಕೋಟಿ ರೂಪಾಯಿ ಹಣ ಕೊಟ್ಟು 2026 ಫುಟ್‌ಬಾಲ್ ವಿಶ್ವಕಪ್ ಫೈನಲ್ ಪಂದ್ಯ ನೋಡಲು ಅಭಿಮಾನಿಗಳು ಈಗ ಸಜ್ಜಾಗಿದ್ದಾರೆ. ಕಡಿಮೆ ಕಡಿಮೆ ಎಂದರೂ ಲಕ್ಷ ಲಕ್ಷ ರೂಪಾಯಿ ಬೆಲೆಗೆ ಟಿಕೆಟ್ ಸೇಲ್ ಆಗಿವೆ. ಇಂತಹ ಸಮಯ ಎದುರಾಗಿರುವಾಗ ನಮ್ಮ ಬೆಂಗಳೂರಿನಲ್ಲಿ ಕೂಡ ಫುಟ್‌ಬಾಲ್ ಹಬ್ಬದ ವಾತಾವರಣ ಮೇಳೈಸಿದೆ. ಹಾಗಾದ್ರೆ ಈಗ ಸರ್ಕಾರ ಜಾರಿಗೆ ತಂದಿರುವ ಹೊಸ ರೂಲ್ಸ್ ಏನು? ಬನ್ನಿ ತಿಳಿಯೋಣ.



ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ!
ಮೊದಲೇ ಹೇಳಿದಂತೆ ಇಂದು ರಾತ್ರಿ ಅರ್ಥಾತ್ 20 ಜುಲೈ 2026ರ ನಸುಕಿನಲ್ಲಿ ಫೈನಲ್ ಮ್ಯಾಚ್ ನಡೆಯಲಿದೆ, ಈ ಹಿನ್ನೆಲೆ ಲಕ್ಷಾಂತರ ಫುಟ್‌ಬಾಲ್ ಅಭಿಮಾನಿಗಳಿಗೆ ಅಂತಾ ಫೈನಲ್ ಪಂದ್ಯ ವೀಕ್ಷಣೆಗಾಗಿ ಕರ್ನಾಟಕ ಸರ್ಕಾರ ವಿಶೇಷ ಆದೇಶ ಹೊರಡಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಪಂದ್ಯವನ್ನು ಸಾರ್ವಜನಿಕರು ಒಟ್ಟಾಗಿ ವೀಕ್ಷಿಸಲು ಅನುಕೂಲ ಆಗುವಂತೆ ಹೋಟೆಲ್‌ & ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳು ಮುಂಜಾನೆ 3.30 ಗಂಟೆಯವರೆಗೆ ಕೂಡ ಕಾರ್ಯನಿರ್ವಹಿಸಲು ತಾತ್ಕಾಲಿಕ ಅನುಮತಿ ನೀಡಲಾಗಿದೆ.

ಹೋಟೆಲ್ ಮಾಲೀಕರು ಖುದ್ದು ಈ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರ ಬಳಿ ಮನವಿ ಮಾಡಿದ್ದರು, ಸಿಎಂ ಅನುಮತಿ ನೀಡಿ ಹೋಟೆಲ್ ಮಾಲೀಕರು ಮತ್ತು ಅಭಿಮಾನಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಹಿನ್ನೆಲೆ, ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ಮೂಲೆ ಮೂಲೆಯಿಂದ ಫುಟ್‌ಬಾಲ್ ಅಭಿಮಾನಿಗಳು ಇದೀಗ ಕನ್ನಡ ನಾಡಿನ ರಾಜಧಾನಿ ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ. ಆ ಮೂಲಕ ದೊಡ್ಡ ದೊಡ್ಡ ಹೋಟೆಲ್ಸ್ ಸೇರಿದಂತೆ & ಹಲವು ಕಡೆ ಫುಟ್‌ಬಾಲ್ ಪಂದ್ಯದ ಸ್ಕ್ರೀನಿಂಗ್ ಮಾಡಲು ಸಿದ್ಧತೆ ಸಾಗಿದೆ. ಹೀಗಾಗಿ ಪೊಲೀಸರು ಕೂಡ ಅಲರ್ಟ್ ಆಗಿ ಎಲ್ಲವನ್ನೂ ಗಮನಿಸುತ್ತಿದ್ದಾರೆ.

ಹದ್ದು ಮೀರದಂತೆ ಸರ್ಕಾರದ ಸೂಚನೆ
ಫುಟ್‌ಬಾಲ್ ಅಭಿಮಾನಿಗಳು ಯಾವುದೇ ತಂಡ ಗೆದ್ದರು ಅಥವಾ ಸೋತರೂ ಕ್ರೀಡಾ ಮನೋಭಾವ ತೋರಿಸಬೇಕು ಆ ಮೂಲಕ ಫಲಿತಾಂಶ ಸ್ವೀಕರಿಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದ್ದಾರೆ. ಈ ನಡುವೆ ಯಾರಾದರೂ ಸುಖಾ ಸುಮ್ಮನೆ ಎಗರಾಡಿ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡಿದರೆ ಸೂಕ್ತ ಕ್ರಮಕ್ಕೂ ಈಗ ಸೂಚನೆ ನೀಡಲಾಗಿದೆ. ಇನ್ನು ಬೆಂಗಳೂರು ನಗರದ ಎಂಜಿ ರಸ್ತೆ, ವಿಧಾನಸೌಧ ಸುತ್ತಮುತ್ತ, ಮಡಿವಾಳ, ಕೋರಮಂಗಲ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ವಿಶೇಷ ಭದ್ರತೆ ಒದಗಿಸಲಾಗಿದೆ. ಸೂಕ್ಷ್ಮ ಜಾಗಗಳಲ್ಲಿ ಈಗಾಗಲೇ ಸಿಸಿ ಕ್ಯಾಮೆರಾ ಹಾಗೂ ಇತರ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.