ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಹೆಣ್ಣು ಮಕ್ಕಳಿಗೆ ಚಿನ್ನ ಆಭರಣವಾಗಿ ಮೈಮೇಲೆ ಧರಿಸಲು ಇಷ್ಟವಾಗುತ್ತೆ ಹಾಗೇ ಮತ್ತೊಂದೆಡೆ ಗಂಡು ಮಕ್ಕಳಿಗೆ ಚಿನ್ನದ ಮೇಲೆ ಹೂಡಿಕೆಯನ್ನು ಮಾಡಿ, ಲಾಭ ಗಳಿಸುವುದು ಸಖತ್ ಇಷ್ಟ ಎನ್ನಬಹುದು. ಹೀಗಿದ್ದಾಗ ಭರ್ಜರಿ 2,00,000 ರೂಪಾಯಿ ಪ್ರತಿ 10 ಗ್ರಾಂಗೆ ಚಿನ್ನ ಬೆಲೆ ಏರಿಕೆ ಆಗುವ ಭಾರಿ ಆತಂಕ ಆವರಿಸಿತ್ತು. ಅಲ್ಲದೆ ನೋಡ ನೋಡುತ್ತ ಚಿನ್ನದ ಬೆಲೆ ಒನ್ ಟು ಡಬಲ್ ಕೂಡ ಆಗಿತ್ತು. ಈ ಎಲ್ಲಾ ಭಯದ ನಡುವೆ ದಿಢೀರ್ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬಂದು ಕಳೆದ 1 ವಾರದಿಂದ ನಿರಂತರವಾಗಿ ಕುಸಿತ ಕಂಡಿದೆ ಹಳದಿ ಲೋಹ. ನೋಡ ನೋಡುತ್ತಲೇ ಸುಮಾರು 1,50,000 ರೂಪಾಯಿ ಒಳಗಡೆ ಕುಸಿದಿದ್ದ ಚಿನ್ನ ಬೆಲೆಯು ಇದೀಗ ಒಂದೇ ದಿನ ಭರ್ಜರಿ ಏರಿಕೆ ಕಂಡಿದೆ!
ಬಂಗಾರ, ಚಿನ್ನ.. ಹಿಂಗೆಲ್ಲಾ ಹೇಳುತ್ತಾ ಮುನಿಸಿಕೊಂಡ ಹೆಂಡತಿಯನ್ನು ಸಮಾಧಾನ ಮಾಡಲು ಗಂಡಂದಿರು ಪೂಸಿ ಹೊಡೆದು ಸೈಲೆಂಟ್ ಮಾಡಲು ಪ್ರಯತ್ನ ಮಾಡುತ್ತಾರೆ. ಆದರೆ ಪರಿಸ್ಥಿತಿ ಹೀಗಿದ್ದಾಗಲೇ ನಿಜವಾದ ಚಿನ್ನ ಖರೀದಿಗೆ, ಬಡವರು & ಮಧ್ಯಮ ವರ್ಗದ ಜನ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅದರಲ್ಲೂ ಗಡಿ ಮೀರಿ ಏರಿಕೆ ಹಾದಿ ಹಿಡಿದಿರುವ ಚಿನ್ನದ ಬೆಲೆ ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ನೋಡ ನೋಡ್ತಾ ಚಿನ್ನ & ಬೆಳ್ಳಿ ಬೆಲೆ ಮುಗಿಲು ಮುಟ್ಟಿತ್ತು. ಆದ್ರೆ ಇನ್ನೇನು ಒಂದಷ್ಟು ಕುಸಿತ ಕಾಣುತ್ತಿದೆ ಬಿಡು ಚಿನ್ನ ಎಂಬ ನಿರೀಕ್ಷೆ ಹಾಗೂ ಆಸೆ ಮೂಡಿರುವ ಸಮಯದಲ್ಲೇ ಮತ್ತೆ ದಿಢೀರ್ ಚಿನ್ನದ ಬೆಲೆಯು ಇದೀಗ ಭರ್ಜರಿ ಏರಿಕೆ ಕಂಡುಬಿಟ್ಟಿದೆ.
ಚಿನ್ನದ ಬೆಲೆ ದಿಢೀರ್ 22,900 ರೂಪಾಯಿ ಏರಿಕೆ...
ಹೌದು, ಬಂಗಾರ ಅಂದ್ರೆ ಹಳದಿ ಲೋಹ ಚಿನ್ನದ ಬೆಲೆ ಬರೋಬ್ಬರಿ 22,900 ರೂಪಾಯಿ ಇಂದು ಏರಿಕೆ ಕಂಡಿದೆ. ಅದರಲ್ಲೂ 24 ಕ್ಯಾರೆಟ್ ಎಂದು ಕರೆಯಲಾಗುವ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ ಬರೋಬ್ಬರಿ 22,900 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಇದೀಗ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ, ಬರೋಬ್ಬರಿ 14,65,100 ರೂಪಾಯಿಗೆ ತಲುಪಿದೆ. ಹಾಗೇ, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,46,510 ರೂಪಾಯಿ ತಲುಪಿ ಆಭರಣ ಪ್ರಿಯರಿಗೆ ಚಿಂತೆ ಹೆಚ್ಚಿಸಿದೆ. ಆಭರಣಗಳ ತಯಾರಿಕೆಗೆ ಬಳಸುವ 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಇಂದು ದಿಢೀರ್ 2,100 ರೂಪಾಯಿ ಪ್ರತಿ 10 ಗ್ರಾಂಗೆ ಏರಿಕೆ ಕಂಡು, ಇದೀಗ 22 ಕ್ಯಾರೆಟ್‌ನ ಆಭರಣ ಚಿನ್ನದ ಬೆಲೆ ಬರೋಬ್ಬರಿ 1,34,300 ರೂಪಾಯಿ ಗಡಿಗೆ ಬಂದು ನಿಂತಿದೆ.
ಬೆಳ್ಳಿ ಬೆಲೆ 5,000 ರೂಪಾಯಿ ಹೆಚ್ಚಳ
ಚಿನ್ನದ ಬೆಲೆ ಮಾತ್ರವಲ್ಲ ಬೆಳ್ಳಿ ಬೆಲೆ ಕೂಡ ನೋಡ ನೋಡುತ್ತಲೇ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದೆ ಈಗ ಎಂಬುದು ಆಭರಣ ಪ್ರಿಯರಿಗೆ ಮತ್ತಷ್ಟು ಶಾಕ್ ಕೊಟ್ಟಿದೆ. ಅಷ್ಟಕ್ಕೂ ಬರೋಬ್ಬರಿ 4 ಲಕ್ಷ ರೂಪಾಯಿ ಗಡಿಗೆ ತಲುಪಿದ್ದ ಬೆಳ್ಳಿ ಬೆಲೆ ಮತ್ತೆ ಭಾರಿ ಕುಸಿತ ಕಂಡಿತ್ತು. ಹೀಗಿದ್ದಾಗ, ಪ್ರತಿ ಕೆಜಿ ಬೆಳ್ಳಿ ಬೆಲೆ 2 ಲಕ್ಷ ರೂಪಾಯಿಗೆ ಕುಸಿತ ಕಾಣುವ ನಿರೀಕ್ಷೆ ಮೂಡಿತ್ತು. ಆದರೆ ಇಂದು ಒಂದೇ ದಿನ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 5,000 ರೂಪಾಯಿ ಹೆಚ್ಚಳ ಕಂಡಿದೆ. ಹೀಗಿದ್ದಾಗ ನಿನ್ನೆ ಪ್ರತಿ 1 ಕೆಜಿಗೆ 2,35,000 ರೂಪಾಯಿ ಇದ್ದ ಬೆಳ್ಳಿ ಬೆಲೆ ಇಂದು ದಿಢೀರ್ ಅಂತಾ ಭಾರಿ ಏರಿಕೆ ಕಂಡಿದ್ದು, 5,000 ರೂಪಾಯಿ ಏರಿಕೆ ಕಾಣುವ ಮೂಲಕ ಈಗ ಪ್ರತಿ 1 ಕೆಜಿ ಬೆಳ್ಳಿ ರೇಟ್ ಬರೋಬ್ಬರಿ 2,40,000 ರೂಪಾಯಿಗೆ ತಲುಪಿದೆ.