ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ, ಕೆಲ ವಾರಗಳಿಂದ ನಿರಂತರ ಇಳಿಕೆ ಕಡೆಗೆ ಮುಖ ಮಾಡಿದ್ದ ಬಂಗಾರ ಬೆಲೆ ಮತ್ತೆ ಜಿಗಿತ ಕಾಣುವ ಮೂಲಕ ಆಭರಣ ಪ್ರಿಯರಲ್ಲಿ ಚಿಂತೆ ತರಿಸಿದೆ. ಜಾಗತಿಕ ಮಟ್ಟದಲ್ಲಿ ಯುದ್ಧಗಳ ಪರಿಣಾಮ ಚಿನ್ನದ ಬೆಲೆ ಕಳೆದ 1 ವರ್ಷದಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡು ಗ್ರಾಹಕರಿಗೆ ಚಿಂತೆ ತರಿಸಿತ್ತು, ಅದ್ರಲ್ಲೂ ಚಿನ್ನ ಇಲ್ಲದೇ ಶುಭಕಾರ್ಯ ಮಾಡೋದಿಲ್ಲ ಎನ್ನುವ ಭಾರತೀಯರಿಗೆ ಚಿನ್ನದ ಬೆಲೆ ಏರಿಕೆ ಬಿಸಿ ದೊಡ್ಡದಾಗಿ ತಾಗಿತ್ತು. ಇಷ್ಟೆಲ್ಲದರ ನಡುವೆ, ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಕುಸಿತ ಕಾಣುತ್ತಿದೆ ಬಿಡು ಅಂತಾ ನಿಟ್ಟುಸಿರು ಬಿಡುವ ಒಳಗೇ ಮತ್ತೆ ಚಿನ್ನ ಬೆಲೆ ಏರಿಕೆ ಕಂಡಿದೆ. ಹಾಗಿದ್ರೆ ಈಗ ಎಷ್ಟಿದೆ ಚಿನ್ನ & ಬೆಳ್ಳಿಯ ಬೆಲೆ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಚಿನ್ನ & ಮನುಷ್ಯರ ನಡುವೆ ಬರೋಬ್ಬರಿ 5000 ವರ್ಷಗಳ ಗಟ್ಟಿಯಾದ ಸಂಬಂಧ ಬೆಳೆದುಕೊಂಡು ಬಂದಿದೆ. ಚಿನ್ನ ಎಂಬ ಹಳದಿ ಲೋಹದ ಮೇಲೆ ಮನುಷ್ಯರಿಗೆ ವಿಪರೀತ ವ್ಯಾಮೋಹ, ಭಾರತದಲ್ಲಿ ಚಿನ್ನ ಆಭರಣಗಳ ರೂಪದಲ್ಲಿ ಮೈಮೇಲೆ ಧರಿಸಲು ಭಾರತೀಯರು ಇಷ್ಟಪಡುತ್ತಾರೆ. ವಿದೇಶಗಳಲ್ಲಿ ಚಿನ್ನವನ್ನ ಬೇರೆ ಬೇರೆ ರೂಪದಲ್ಲಿ ಶ್ರೀಮಂತಿಕೆ ಪ್ರದರ್ಶನಕ್ಕೆ ಬಂಗಾರ ಬಳಸುತ್ತಾರೆ. ಹೀಗಿದ್ದಾಗ ಚಿನ್ನದ ಮೇಲೆ ಹೂಡಿಕೆ ಮಾಡುವುದು ಬುದ್ಧಿವಂತರ ಲಕ್ಷಣ ಎಂಬ ಕಾಲ ಒಂದಿತ್ತು, ಆದ್ರೆ ಈಗ ಚಿನ್ನದ ಬೆಲೆಯಲ್ಲಿ ಭಾರಿ ಏರುಪೇರು ಆಗುತ್ತಿರುವ ಕಾರಣಕ್ಕೆ ಬಂಗಾರದ ಮೇಲೆ ಸದ್ಯಕ್ಕೆ ಹೂಡಿಕೆ ಬೇಡ. ಸ್ವಲ್ಪ ದಿನಗಳ ಕಾಲ ಕಾದು ನೋಡಿ ಅಂತಿದ್ದಾರೆ ಚಿನ್ನ ಮಾರುಕಟ್ಟೆ ತಜ್ಞರು, ಹೀಗಿದ್ದಾಗಲೇ ಇಂದು ಚಿನ್ನದ ಬೆಲೆ ಭಾರಿ ಏರಿಕೆ ಕಂಡಿದೆ.
ಚಿನ್ನದ ಬೆಲೆ ಎಷ್ಟಿದೆ ಈಗ?
ಇಂದು ಒಂದೇ ದಿನ ಚಿನ್ನದ ಬೆಲೆಯು ಭರ್ಜರಿ 1,750 ರೂಪಾಯಿ ಪ್ರತಿ 10 ಗ್ರಾಂಗೆ ಏರಿಕೆ ಕಾಣುವ ಮೂಲಕ ಇದೀಗ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,45,750 ರೂಪಾಯಿಗೆ ತಲುಪಿದೆ. ಹಾಗೆಯೇ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,600 ರೂಪಾಯಿ ಏರಿಕೆ ಕಂಡು 1,33,600 ರೂಪಾಯಿಗೆ ತಲುಪಿದೆ ಈಗ. ಹೀಗೆ ಚಿನ್ನದ ಬೆಲೆ ಇಂದು ಒಂದೇ ದಿನ ಭಾರಿ ಏರಿಕೆ ಕಂಡಿದ್ದು ಆಭರಣ ಪ್ರಿಯರಿಗೆ ಒಂದಷ್ಟು ಜಾಸ್ತಿ ಟೆನ್ಷನ್ ತರಿಸಿದೆ. ಯಾಕಂದ್ರೆ ಇನ್ನೇನು ಆಷಾಢ ಮಾಸ ಮುಗಿದು, ಶ್ರಾವಣ ಮಾಸವು ಶುರುವಾಗುತ್ತಿದ್ದಂತೆ ಶುಭಕಾರ್ಯ ಕೂಡ ಸಾಲು ಸಾಲಾಗಿ ಬರಲಿವೆ. ಹೀಗಿದ್ದಾಗಲೇ ಮದುವೆ ಮತ್ತಿತರ ಕಾರ್ಯಕ್ರಮಕ್ಕೆ ಚಿನ್ನ ಖರೀದಿ ಮಾಡಲೇಬೇಕು ಅಂತಾ ಜನರು ಕೂಡ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲಿ ಚಿನ್ನ ಬೆಲೆ ಏರಿಕೆ ಕಂಡಿರುವುದು ಚಿಂತೆಯನ್ನು ತರಿಸಿದೆ ಬಡ & ಮಧ್ಯಮ ವರ್ಗದ ಜನರಿಗೆ.
ಬೆಳ್ಳಿ ಬೆಲೆ ಎಷ್ಟು ಏರಿಕೆ?
ಚಿನ್ನ ಬೆಲೆ ಏರಿಕೆ ಕಂಡಂತೆ ಇದೀಗ ಬೆಳ್ಳಿ ಬೆಲೆ ಕೂಡ ಒಂದೇ ದಿನ ಭಾರಿ ಏರಿಕೆ ಕಂಡಿದೆ. ಅಂದಹಾಗೆ ಈಗ ಬೆಳ್ಳಿ ಬೆಲೆ ಪ್ರತಿ 1 ಕೆಜಿಗೆ 5,000 ರೂಪಾಯಿ ಏರಿಕೆ ಕಾಣುವ ಮೂಲಕ ಬರ್ಜರಿ 2,40,000 ರೂಪಾಯಿಗೆ ತಲುಪಿದೆ ಬೆಳ್ಳಿ. ಚಿನ್ನದ ರೀತಿ ಬೆಳ್ಳಿ ಬೆಲೆ ಕೂಡ ಕಳೆದ ಕೆಲ ದಿನಗಳಿಂದ ನಿರಂತರ ಇಳಿಕೆ ಕಾಣುತ್ತಲೇ ಇತ್ತು, ಆದರೆ ಇದೀಗ ಬೆಳ್ಳಿ ಬೆಲೆ ಕೂಡ ಏರಿಕೆ ಕಂಡಿದೆ. ಒಟ್ನಲ್ಲಿ ಚಿನ್ನ & ಬೆಳ್ಳಿ ಬೆಲೆ ಏರಿಕೆ ಕಾಣುತ್ತಿದ್ದು, ಈ ರೀತಿ ಹಳದಿ ಲೋಹ & ಶ್ವೇತ ಲೋಹದ ಬೆಲೆ ಇನ್ನಷ್ಟು ಏರಿಕೆ ಕಾಣುತ್ತಾ? ಅಥವಾ ಶ್ರಾವಣ ಮಾಸ ಶುರುವಾಗುವ ಒಳಗೇ ಇಳಿಕೆ ಕಂಡು ಜನರಿಗೆ ಖುಷಿ ಕೊಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.