Iran Conflict: ಇರಾನ್ & ಅಮೆರಿಕ ತಿಕ್ಕಾಟ ಮತ್ತುಷ್ಟು ಜೋರು, ಪೆಟ್ರೋಲ್ ಬೆಲೆ ಹೆಚ್ಚಳ?

bengaluru diaries | July 17, 2026 - 11:29 pm
ಇರಾನ್ ಮತ್ತು ಅಮೆರಿಕ ನಡುವೆ ಹೊತ್ತಿಕೊಂಡ ಬೆಂಕಿಯ ಕಿಡಿ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳೂ ಈಗ ಕಾಣುತ್ತಿಲ್ಲ. ಬದಲಾಗಿ ಈ ಇಬ್ಬರ ನಡುವೆ ಹೊತ್ತಿಕೊಂಡ ಸೇಡಿನ ಕಿಡಿ ಇನ್ನಷ್ಟು ಸಮಸ್ಯೆ ಎದುರಾಗುವ ರೀತಿ ಮಾಡುತ್ತಿದೆ. ನೋಡ ನೋಡುತ್ತಲೇ ಮಧ್ಯಪ್ರಾಚ್ಯ ಭಾಗದಲ್ಲಿ ಭೀತಿಯ ಅಲೆ ಎಬ್ಬಿಸಿದ್ದ ಅಮೆರಿಕ ಮತ್ತು ಇರಾನ್ ತಿಕ್ಕಾಟ ಇದೀಗ ಮತ್ತೊಮ್ಮೆ ಭುಗಿಲೆದ್ದಿದೆ. ಅದರಲ್ಲೂ ಇರಾನ್ ಜೊತೆಗೆ ಅಮೆರಿಕ ಮಾಡಿಕೊಂಡಿದ್ದ ಒಪ್ಪಂದ ರದ್ದಾದ ನಂತರ ದೊಡ್ಡ ಬಿರುಗಾಳಿಯೇ ಎದ್ದಿದ್ದು, ಎರಡೂ ದೇಶಗಳ ನಡುವೆ ಕಿಚ್ಚು ಹೊತ್ತಿಬಿಟ್ಟಿದೆ ಈಗ. ಇಂತಹ ಸಮಯದಲ್ಲೇ ಇಡೀ ಜಗತ್ತಿಗೆ ತೈಲ ಸಂಕಷ್ಟ ಎದುರಾಗುವ ಆತಂಕ ಕಾಡುತ್ತಿದ್ದು, ಭಾರತದಲ್ಲಿ ಕೂಡ ಪೆಟ್ರೋಲ್ ಬೆಲೆ ಹೆಚ್ಚಳ?

ಮಧ್ಯಪ್ರಾಚ್ಯ ದೇಶಗಳಿಂದ ಇಡೀ ಜಗತ್ತಿಗೆ ಭಾರಿ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ & ಡೀಸೆಲ್ ಸೇರಿದಂತೆ ತೈಲ ಪೂರೈಕೆ ಆಗುತ್ತದೆ. ಈ ಪೈಕಿ ಇರಾನ್ ನೆಲದಲ್ಲಿ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ತೈಲ ನಿಕ್ಷೇಪ ಇದ್ದು, ಈ ತೈಲ ಭಾರತವೂ ಸೇರಿದಂತೆ ಅನೇಕ ದೇಶಗಳಿಗೆ ಸಪ್ಲೈ ಆಗುತ್ತಿದೆ. ಆದರೆ ಅಮೆರಿಕ ಮತ್ತು ಇರಾನ್ ಮಧ್ಯೆ ಯುದ್ಧ ಶುರುವಾದ ನಂತರ ಈ ತೈಲ ಪೂರೈಕೆಗೆ ಸಾಕಷ್ಟು ಸಮಸ್ಯೆ ಎದುರಾಗಿದ್ದು, ಇನ್ನೊಂದು ಕಡೆಯಲ್ಲಿ ತನ್ನ ಅಕ್ಕಪಕ್ಕದ ದೇಶಗಳು ತೈಲ ರಫ್ತು ಮಾಡುವುದಕ್ಕೂ ಇರಾನ್ ಅಡ್ಡಿ ಮಾಡುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಎದುರಾಗಿರುವ ಈ ತಿಕ್ಕಾಟ ಈಗ ಜಾಗತಿಕ ಮಟ್ಟದಲ್ಲಿ ಮತ್ತೊಮ್ಮೆ ಕಚ್ಚಾತೈಲ ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತಿದೆ. ವೇಗವಾಗಿ ಕಚ್ಚಾತೈಲ ಬೆಲೆ ಕೂಡ ಏರಿಕೆ ಕಾಣುತ್ತಿದೆ...


ಕಚ್ಚಾತೈಲ ಬ್ಯಾರಲ್‌ಗೆ 8,000 ರೂಪಾಯಿ!
ಹೌದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದೀಗ ಕಚ್ಚಾತೈಲ ಬೆಲೆ ಮತ್ತೊಮ್ಮೆ ದಿಢೀರ್ ಏರಿಕೆಯ ಹಾದಿ ಹಿಡಿದಿದೆ. ಇರಾನ್ ವಿರುದ್ಧ ಯಾವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುಡುಗಿದರೋ, ಹಾಗೇ ಆ ನಂತರ ಯುದ್ಧದ ಒಪ್ಪಂದ ಯಾವಾಗ ಮುರಿದು ಬಿತ್ತೋ ಅಲ್ಲಿಂದ ದೊಡ್ಡ ಸಮಸ್ಯೆ ಎದುರಾಗಿದೆ. ಇದೀಗ ಇರಾನ್ ವಿರುದ್ಧ ಅಮೆರಿಕ ಭಾರಿ ದೊಡ್ಡ ಮಟ್ಟದಲ್ಲೇ ದಾಳಿ ಮಾಡುತ್ತಿದೆ. ಹಾಗೇ ಇರಾನ್ ಕೂಡ ಅಮೆರಿಕ ವಿರುದ್ಧದ ಸೇಡಿಗೆ ಸೌದಿ ಅರೇಬಿಯಾ, ಯುಎಇ, ಕತಾರ್ ಸೇರಿದಂತೆ ಅಮೆರಿಕದ ಸೇನಾ ನೆಲಗಳು ಇರುವಂತಹ ಜಾಗಗಳ ಮೇಲೆ ದಾಳಿ ಮಾಡಲು ಶುರು ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ 1 ವಾರದಿಂದ ಮತ್ತೆ ಏರಿಕೆ ಹಾದಿ ಹಿಡಿದಿರುವ ಕಚ್ಚಾತೈಲ ಬೆಲೆ 1 ಬ್ಯಾರಲ್‌ಗೆ ಸುಮಾರು 8,000 ರೂಪಾಯಿ ಆಸುಪಾಸಿಗೆ ತಲುಪಿದೆ.