ಕನ್ನಡ ಸಿನಿಮಾ ರಂಗದ ಜೊತೆ ಆತ್ಮೀಯ ನಂಟು ಹೊಂದಿರುವ, ಕರ್ನಾಟಕದ ಕರಾವಳಿ ಮೂಲದ ತಾಯಿಯ ಮಗ ಜೂನಿಯರ್ ಎನ್‌ಟಿಆರ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಭಾರತದಿಂದ ಹೋಗಿ ಆಸ್ಕರ್ ಅವಾರ್ಡ್ ಗೆದ್ದ ಸಿನಿಮಾದಲ್ಲಿ ನಟಿಸಿ, ಜಗತ್ತಿನಾದ್ಯಂತ ಹೆಸರು ಮಾಡಿರುವ ಜೂನಿಯರ್ ಎನ್‌ಟಿಆರ್ ಅವರು ಈಗ ತಮ್ಮ ಹೊಸ ಸಿನಿಮಾ ಡ್ರ್ಯಾಗನ್ ರಿಲೀಸ್ ಮಾಡಲು ಸಜ್ಜಾಗಿದ್ದರು. ಆದರೆ ಇಂತಹ ಸಮಯದಲ್ಲೇ ದಿಢೀರ್ ದೊಡ್ಡ ಆಘಾತವೇ ಎದುರಾಗಿದೆ. ಹಾಗಾದರೆ ತೆಲುಗು ಚಿತ್ರರಂಗದ ಟೈಗರ್ ಜೂನಿಯರ್ ಎನ್‌ಟಿಆರ್ ಫ್ಯಾನ್ಸ್‌ಗೆ ದಿಢೀರ್ ಆಘಾತ ಎದುರಾಗಿದ್ದು ಏಕೆ? ಬನ್ನಿ ತಿಳಿಯೋಣ...
ಹೌದು, ಟಾಲಿವುಡ್ ಅಂದ್ರೆ ತೆಲುಗು ಸಿನಿಮಾ ರಂಗದ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ ಇಂದು. ಅಷ್ಟಕ್ಕೂ ಪ್ರಶಾಂತ್ ನೀಲ್ ಡೈರೆಕ್ಷನ್ ಮಾಡುತ್ತಿರುವ ಬಹುನಿರೀಕ್ಷಿತ ಡ್ರ್ಯಾಗನ್ ಸಿನಿಮಾ ಶೂಟಿಂಗ್ ಅಬ್ಬರದಿಂದ ಸಾಗುತ್ತಿದೆ. ಇನ್ನೇನು ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗುತ್ತಿದ್ದು, ಈಗಾಗಲೇ ಈ ಸಿನಿಮಾ ಅಂದ್ರೆ ಜೂನಿಯರ್ ಎನ್‌ಟಿಆರ್ ಅಭಿನಯಿಸಿ ಮತ್ತು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ಡ್ರ್ಯಾಗನ್ ಸಿನಿಮಾ ಟ್ರೇಲರ್ ಹಲ್‌ಚಲ್ ಎಬ್ಬಿಸಿತ್ತು. ಟ್ರೇಲರ್ ನೋಡಿದ ಅಭಿಮಾನಿಗಳು ಖುಷಿಯಿಂದ ಫುಲ್ ಕುಣಿದಾಡಿ ಸಿನಿಮಾ ನೋಡಲು ಕಾಯುತ್ತಿದ್ದರು, ಹೀಗಿದ್ದಾಗಲೇ ನಟ ಜೂನಿಯರ್ ಎನ್‌ಟಿಆರ್ ಅವರಿಗೆ ದೊಡ್ಡ ಅಪಘಾತ ಸಂಭವಿಸಿದೆ.4
ಜೂನಿಯರ್ ಎನ್‌ಟಿಆರ್ ಅವರಿಗೆ ಅಪಘಾತ
ಹೌದು, ಡ್ರ್ಯಾಗನ್ ಸಿನಿಮಾದ ಶೂಟಿಂಗ್ ಸಮಯದಲ್ಲೇ ಸಮಸ್ಯೆ ಅಗಿದೆ ಎನ್ನಲಾಗಿದೆ. ಅಂದಹಾಗೆ ಸಂಜೆಯ ಸಮಯದಲ್ಲಿ ಶೂಟಿಂಗ್ ಸ್ಥಳದಲ್ಲಿ ಈ ಅನಿರೀಕ್ಷಿತ ಘಟನೆ ನಡೆದಿದ್ದು ನಟ ಜೂನಿಯರ್ ಎನ್‌ಟಿಆರ್ ಅವರ ಭುಜ ಹಾಗೂ ಕೈಗೆ ಸಾಕಷ್ಟು ಪೆಟ್ಟಾಗಿದೆ ಎನ್ನಲಾಗಿದೆ. ಘಟನೆ ನಡೆದ ತಕ್ಷಣವೇ ಜೂನಿಯರ್ ಎನ್‌ಟಿಆರ್ ಅವರನ್ನು ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದೆ. ಈ ಘಟನೆ ಬಗ್ಗೆ ಸ್ವತಃ ಎನ್.ಟಿ.ಆರ್ ಅವರ ಕಚೇರಿ ಅಧಿಕೃತ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಅಭಿಮಾನಿಗಳಲ್ಲಿ ಮೂಡಿರುವ ಆತಂಕ ದೂರಗೊಳಿಸಲು ಸ್ಪಷ್ಟನೆ ನೀಡಲಾಗಿದೆ. ಹಾಗೇ ಹೆಚ್ಚಿನ ಸಮಸ್ಯೆ ಆಗಿಲ್ಲ, ಹೀಗಾಗಿ ಟಾಲಿವುಡ್ ಸ್ಟಾರ್‌ಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎನ್ನಲಾಗಿದೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆತಂಕ ಸೃಷ್ಟಿ ಮಾಡಿ, ದೊಡ್ಡ ಚರ್ಚೆಗೂ ಕಾರಣವಾಗಿತ್ತು.
ಮತ್ತೊಂದು ಕಡೆ ನಟ ಜೂನಿಯರ್ ಎನ್‌ಟಿಆರ್ ಅವರು ಚೇತರಿಸಿಕೊಳ್ಳುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರಂತೆ. ಖ್ಯಾತ ವೈದ್ಯ ಡಾ. ಜೆ. ಮಧುಸೂಧನ್ ರಾವ್, ಡಾ. ಆರ್.ಎ. ಪೂರ್ಣಚಂದ್ರ ತೇಜಸ್ವಿ ಅವರ ವೈದ್ಯಕೀಯ ತಂಡ ತಾರಕ್ ಅವರಿಗೆ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿದೆ. ಭುಜ ಗಾಯದ ಪರಿಣಾಮ ಅವರು ಶೀಘ್ರವೇ ಮತ್ತು ಸಂಪೂರ್ಣ ಚೇತರಿಸಿಕೊಳ್ಳಲು ವಿಶ್ರಾಂತಿ ಅಗತ್ಯ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಹಿನ್ನೆಲೆ ಮುಂದಿನ 7 ರಿಂದ 8 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಕಟ್ಟುನಿಟ್ಟಿನ ಸಲಹೆ ನೀಡಿದ್ದಾರಂತೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದು ಎನ್‌ಟಿಆರ್ ಕಚೇರಿ ಸ್ಪಷ್ಟಪಡಿಸಿದೆ.
ಭಾರಿ ಕುತೂಹಲ ಕೆರಳಿಸಿರುವ ಡ್ರ್ಯಾಗನ್!
ಪ್ರಶಾಂತ್ ನೀಲ್ ನಿರ್ದೇಶನದ ಮತ್ತೊಂದು ತೆಲುಗು ಸಿನಿಮಾ ಡ್ರ್ಯಾಗನ್ ಆಗಿದ್ದು, ಇದೇ ಕಾರಣಕ್ಕೆ ಕೋಟಿ & ಕೋಟಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಆಂಧ್ರ ಮತ್ತು ತೆಲಂಗಾಣ ಮಾತ್ರವಲ್ಲದೇ ಇದೀಗ, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಉತ್ತರ ಭಾರತದಲ್ಲೂ ಈ ಸಿನಿಮಾಗಾಗಿ ಜನರು ಕಾಯುತ್ತಿದ್ದಾರೆ. ಜಗತ್ತಿನಾದ್ಯಂತ ಇರುವ ಜೂನಿಯರ್ ಎನ್‌ಟಿಆರ್ ಅಭಿಮಾನಿಗಳು ಡ್ರ್ಯಾಗನ್ ಸಿನಿಮಾ ನೋಡಲು ಈಗ ಇನ್ನಷ್ಟು ದಿನಗಳ ಕಾಲ ಕಾಯಬೇಕಿದೆ. ಈಗಿನ ಪರಿಸ್ಥಿತಿಯಲ್ಲಿ ಇನ್ನೂ ಹಲವು ವಾರಗಳ ಕಾಲ ಡ್ರ್ಯಾಗನ್ ಶೂಟಿಂಗ್‌ಗೆ ಬ್ರೇಕ್ ಬೀಳಲಿದ್ದು, ಆದಷ್ಟು ಬೇಗ ನಟ ಜೂನಿಯರ್ ಎನ್‌ಟಿಆರ್ ಅವರು ಚೇತರಿಸಿಕೊಳ್ಳಲಿ ಅಂತಿದ್ದಾರೆ ಅವರ ಫ್ಯಾನ್ಸ್.