Karnataka Cabinet: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ, ಇವರಿಗೆಲ್ಲಾ ಮಂತ್ರಿ ಪಟ್ಟ ಫಿಕ್ಸ್?

bengaluru diaries | July 29, 2026 - 10:04 pm

ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವು ತರಿಸಿರುವುದು ಇದೇ ಸಂಪುಟ ವಿಸ್ತರಣೆ ವಿಚಾರ. ಯಾಕಂದ್ರೆ ಇನ್ನು ಉಳಿದಿರುವ ಕೇವಲ 20 ತಿಂಗಳ ಅಧಿಕಾರ ಅವಧಿಯಲ್ಲಿ ತಮಗೂ ಒಂದು ಅವಕಾಶ ಸಿಗಲಿ ಅನ್ನೋದು ಶಾಸಕರ ಆಸೆ. ಇದೇ ಕಾರಣಕ್ಕೆ ಕಳೆದ 2 ತಿಂಗಳಿಂದಲೂ ಕಾದು, ಕಾದು ಸಾಕಾಗಿ ಹೋಗಿರುವ ಕಾಂಗ್ರೆಸ್ ಶಾಸಕರು ರೊಚ್ಚಿಗೆದ್ದಿದ್ದಾರೆ. ಹೀಗಿದ್ದಾಗ ಪಕ್ಷದ ಮೇಲೆ ಎಫೆಕ್ಟ್ ಆಗಬಾರದು ಅನ್ನೋ ಉದ್ದೇಶದಿಂದ ಕರ್ನಾಟಕದ ಕಾಂಗ್ರೆಸ್ ನಾಯಕರು ಸಂಪುಟ ವಿಸ್ತರಣೆ ಮಾಡಲು ಒದ್ದಾಡುತ್ತಿದ್ದಾರೆ. ಆದರೆ ಈ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಥ ಆಗಿರುವಂತೆ ಕಾಣುತ್ತಿಲ್ಲ, ಇದರ ಪರಿಣಾಮ ಪದೇ ಪದೇ ಸಂಪುಟದ ವಿಸ್ತರಣೆ ವಿಚಾರ ಮುಂದೂಡಿಕೆ ಆಗುತ್ತಿದೆ.

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ನಂತರ ದೊಡ್ಡ ಬಿರುಗಾಳಿ ಎದ್ದೇಳುವ ಮುನ್ಸೂಚನೆ ಇದ್ದು, ಅದನ್ನು ಸರಿ ಮಾಡಲು ಕಾಂಗ್ರೆಸ್ ನಾಯಕರು ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಿದ್ದಾಗ ಕೇಂದ್ರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಡೆದ ವಿದ್ಯಾರ್ಥಿ ಹೋರಾಟಕ್ಕೆ ಕಾಂಗ್ರೆಸ್ ಸಾಥ್ ನೀಡಿತ್ತು, ಈ ಕಾರಣಕ್ಕೆ ಸಂಪುಟ ವಿಸ್ತರಣೆ ಹಲವು ದಿನಗಳ ಕಾಲ ಮುಂದೂಡಿಕೆ ಆಗಿದೆ. ಅದೆಲ್ಲಾ ಮುಗಿದು ಈಗ ಸಂಪುಟ ವಿಸ್ತಣೆ ಆಗಬಹುದು ಎನ್ನುವಾಗಲೇ ಇಂದು ಕೂಡ ರಾಹುಲ್ ಗಾಂಧಿ ಬ್ಯುಸಿ ಆಗಿಬಿಟ್ಟರು. ಇಂದು ರಾತ್ರಿ ಹೈಕಮಾಂಡ್ ನಾಯಕರ ಜೊತೆಗೆ ನಡೆಯಬೇಕಿದ್ದ ಪ್ರಮುಖ ಸಭೆ ಮತ್ತೆ ನಾಳೆಗೆ ಅಂದ್ರೆ ಜುಲೈ 30 ಗುರುವಾರಕ್ಕೆ ಮುಂದೂಡಿಕೆ ಆಗಿದೆ. ಹಾಗಾದ್ರೆ ಯಾರಿಗೆಲ್ಲಾ ಸಚಿವ ಸ್ಥಾನ ಸಿಗಬಹುದು? ಈ ಸಂಪುಟ ವಿಸ್ತರಣೆ ಯಾವ ರೀತಿ ನಡೆಯಲಿದೆ? ಮುಂದೆ ಓದಿ.


ಜುಲೈ 30 ಸಂಪುಟ ವಿಸ್ತರಣೆ ಫೈನಲ್?

ಅಂದಹಾಗೆ ಶತಾಯ ಗತಾಯ ಹೇಗಾದರೂ ಮಾಡಿ ಜುಲೈ 30ಕ್ಕೆ ಸಂಪುಟ ವಿಸ್ತರಣೆ ಮಾಡಲೇಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ ಕರ್ನಾಟಕದ ಕಾಂಗ್ರೆಸ್ ನಾಯಕರು. ಇದೇ ಕಾರಣಕ್ಕೆ 20 ಸಚಿವ ಸ್ಥಾನಗಳನ್ನು ತುಂಬುವ, ಆ ಮೂಲಕ ಮಂತ್ರಿ ಪಟ್ಟದ ಆಕಾಂಕ್ಷಿಗಳ ಆಸೆ ಈಡೇರಿಸಲು ನಾಯಕರು ಸಜ್ಜಾಗಿದ್ದಾರೆ. 2028ರ ಕರ್ನಾಟಕ ವಿಧಾನಸಭೆ ಗೆಲುವಿಗೆ ಸಂಪುಟ ವಿಸ್ತರಣೆ ಅನಿವಾರ್ಯ ಕೂಡ ಎನ್ನಲಾಗುತ್ತಿದೆ. ಹಾಗಾದರೆ ಯಾರಿಗೆಲ್ಲಾ ಈಗ ಸಚಿವ ಸ್ಥಾನ ಸಿಗಲಿದೆ? ಯಾರ ಯಾರ ಹೆಸರು ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ಇರಬಹುದು? ಮುಂದೆ ಓದಿ.

ಯಾರಿಗೆ ಸಿಗಲಿದೆ ಮಂತ್ರಿ ಪಟ್ಟ?

ಲಿಂಗಾಯತ ಸಮುದಾಯದಿಂದ ಇವರಿಗೆ ಸ್ಥಾನ?

1). ಲಕ್ಷ್ಮಣ ಸವದಿ

2). ಲಕ್ಷ್ಮಿ ಹೆಬ್ಬಾಳ್ಕರ್

3). ಶಿವಾನಂದ ಪಾಟೀಲ್

4). ಯಶವಂತ ರಾಯಗೌಡ ಪಾಟೀಲ್

5). ಅಪ್ಪಾಜಿ ನಾಡಗೌಡ

6). ಜಿ.ಎಸ್. ಪಾಟೀಲ್

7). ಎಸ್.ಎಸ್. ಮಲ್ಲಿಕಾರ್ಜುನ


ಒಕ್ಕಲಿಗ ಸಮುದಾಯದಿಂದ ಇವರಿಗೆ ಸ್ಥಾನ?

1). ಶರತ್ ಬಚ್ಚೇಗೌಡ

2). ಎಚ್.ಸಿ. ಬಾಲಕೃಷ್ಣ

3). ಎನ್. ಚಲುವರಾಯಸ್ವಾಮಿ

4). ಕೆ.ಎಂ. ಶಿವಲಿಂಗೇಗೌಡ


ಪರಿಶಿಷ್ಟ ಜಾತಿ ಸಮುದಾಯದಿಂದ ಇವರಿಗೆ ಸ್ಥಾನ?

1). ರೂಪಕಲಾ ಶಶಿಧರ್

2). ರುದ್ರಪ್ಪ ಲಮಾಣಿ

3). ಬಸವರಾಜ್

4). ಆನೇಕಲ್‌ ಶಿವಣ್ಣ

5). ಶಿವರಾಜ್ ತಂಗಡಗಿ


ಪರಿಶಿಷ್ಟ ಪಂಗಡ ಸಮುದಾಯದಿಂದ ಇವರಿಗೆ ಸ್ಥಾನ?

1). ಟಿ. ರಘು ಮೂರ್ತಿ

2). ಬಿ. ನಾಗೇಂದ್ರ

3). ಜೆ.ಎನ್. ಗಣೇಶ್


ಮುಸ್ಲಿಂ ಸಮುದಾಯದಿಂದ ಇವರಿಗೆ ಸ್ಥಾನ?

1). ರಿಜ್ವಾನ್ ಅರ್ಷದ್

2). ಎನ್.ಎ. ಹ್ಯಾರಿಸ್

3). ಜಮೀರ್ ಅಹಮ್ಮದ್

4). ತನ್ವಿರ್ ಸೇಟ್ 

5). ಖನೀಜ್ ಫಾತಿಮಾ


ಹಿಂದುಳಿದ ವರ್ಗದಿಂದ ಇವರಿಗೆ ಸ್ಥಾನ?

1). ಬೇಳೂರು ಗೋಪಾಲಕೃಷ್ಣ

2). ರಾಘವೇಂದ್ರ ಹಿಟ್ನಾಳ್

3). ಶ್ರೀನಿವಾಸ್ ಮಾನೆ

4). ಎನ್.ಎಸ್. ಬೋಸರಾಜು

5). ಮಂಕಾಳು ವೈದ್ಯ


ಸರ್ಪ್ರೈಸ್ ಎಂಟ್ರಿ ಕೊಡ್ತಾರಾ ಇವರು?

1). ಬಸವರಾಜ ರಾಯರೆಡ್ಡಿ

2). ಎ.ಎಸ್. ಪೊನ್ನಣ್ಣ

3). ಆರತಿ ಕೃಷ್ಣ

4). ಎಂ. ಕೃಷ್ಣಪ್ಪ