Karnataka Cabinet: ಸಚಿವ ಸ್ಥಾನ ಸಿಗದವರ ಆಕ್ರೋಶ ಸ್ಫೋಟ, ಕಾಂಗ್ರೆಸ್ ಸರ್ಕಾರಕ್ಕೆ ಆಪತ್ತು?

bengaluru diaries | August 3, 2026 - 12:58 pm

ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತೊಂದು ಸವಾಲು ಎದುರಿಸಲು ಸಜ್ಜಾಗಿದ್ದು, ಕೊನೆಗೂ ಸಚಿವ ಸಂಪುಟದ ವಿಸ್ತರಣೆ ಮಾಡಲಾಗಿದೆ. ಆದರೆ ಹೀಗೆ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ಅಸಮಾಧಾನದ ಕಿಚ್ಚು ಕೂಡ ಭಾರಿ ದೊಡ್ಡದಾಗಿ ಸ್ಫೋಟಗೊಂಡು ಕರ್ನಾಟಕ ಸರ್ಕಾರವನ್ನೇ ಅಲ್ಲಾಡುವಂತೆ ಮಾಡಿದೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಒಳಗೆ ಶಾಸಕರ ಅಸಮಾಧಾನ ಕೊತ ಕೊತ ಕುದಿಯುವಂತೆ ಮಾಡಿದೆ. ಅದರಲ್ಲೂ ಇನ್ನೇನು ಕೇವಲ 20 ತಿಂಗಳಲ್ಲಿ ವಿಧಾನಸಭೆ ಚುನಾವಣೆ ಎದರಿಸಲಿರುವ ಕಾಂಗ್ರೆಸ್ ಪಕ್ಷಕ್ಕೆ ಸಾಲು, ಸಾಲು ಸವಾಲುಗಳು ಇದೀಗ ಎದುರಾಗುತ್ತಿವೆ. ಅದರಲ್ಲೂ ಇದೀಗ ಸಚಿವ ಸ್ಥಾನ ಸಿಗದೆ, ಮಂಟ್ರಿ ಪಟ್ಟ ಪಡೆಯಲು ಒದ್ದಾಡಿದವರ ಆಕ್ರೋಶ ಸ್ಫೋಟಗೊಂಡಿದೆ.

ಕರ್ನಾಟಕ ರಾಜಕಾರಣ ಪಡಸಾಲೆಯಲ್ಲಿ ಕುತೂಹಲ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಕೊನೆಗೂ ಮುಗಿದು ಹೋಗಿದೆ. ಸಿಎಂ ಡಿ.ಕೆ. ಶಿವಕುಮಾರ್‌ ನೇತೃತ್ವದ ನೂತನ ಸಂಪುಟ ಸೇರದ 20 ಸಚಿವರು ಹೊಸ ಹುಮ್ಮಸ್ಸಿನಲ್ಲಿ ಈಗ ಅಧಿಕಾರ ಪಡೆದಿದ್ದಾರೆ. ಅಂದಹಾಗೆ 5.00 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ನಡೆಯಲಿದ್ದು ಅಲ್ಲಿಯವರೆಗೂ ದೊಡ್ಡ ಮಟ್ಟದಲ್ಲಿ ತಿಕ್ಕಾಟಗಳು ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಮೂಲಕ ಅಂತಿಮ ಹಂತದಲ್ಲಿ ಸಂಪುಟ ವಿಸ್ತರಣೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಹಾಗಾದ್ರೆ ಈಗ ಪಟ್ಟಿ ನೋಡುವುದಾದರೆ ಯಾರೆಲ್ಲಾ ಶಾಸಕರು ನೂತನ ಸಚಿವರಾಗಿ ಅಧಿಕಾರ ಪಡೆಯುತ್ತಿದ್ದಾರೆ?? ಮುಂದೆ ಓದಿ.


ನೂತನ ಸಚಿವರ ಸಂಭಾವ್ಯ ಪಟ್ಟಿ

 1. ಲಕ್ಷ್ಮಣ ಸವದಿ (ಅಥಣಿ)

 2. ಮಾಗಡಿ ಬಾಲಕೃಷ್ಣ (ಮಾಗಡಿ)

 3. ವಿಜಯಾನಂದ ಕಾಶಪ್ಪನವರ್ (ಹುನಗುಂದ)

 4. ಶಿವರಾಜ್ ತಂಗಡಗಿ(ಕನಕಗಿರಿ)

 5. ಪುಟ್ಟರಂಗಶೆಟ್ಟಿ (ಚಾಮರಾಜನಗರ)

 6. ಸಂತೋಷ್ ಲಾಡ್ (ಕಲಘಟಗಿ)

 7. ಡಾ. ಅಜಯ್ ಸಿಂಗ್ (ಜೇವರ್ಗಿ)

 8. ಗಾಯತ್ರಿ ಶಾಂತೇಗೌಡ (ಮೇಲ್ಮನೆ ಸದಸ್ಯೆ)

 9. ರಿಜ್ವಾನ್ ಅರ್ಷದ್ (ಶಿವಾಜಿನಗರ)

 10. ಜಮೀರ್ ಅಹಮ್ಮದ್ ಖಾನ್ (ಚಾಮರಾಜಪೇಟೆ)

 11. ರುದ್ರಪ್ಪ ಲಮಾಣಿ

 12. ಶಿವಲಿಂಗೇಗೌಡ (ಅರಸೀಕೆರೆ)

 13. ಚೆಲುವರಾಯಸ್ವಾಮಿ (ನಾಗಮಂಗಲ)

 14. ಬಸವರಾಜ ರಾಯರೆಡ್ಡಿ (ಯಲಬುರ್ಗಾ)

 15. ಟಿ. ರಘುಮೂರ್ತಿ (ಚಳ್ಳಕೆರೆ)

 16. ಬಿ. ನಾಗೇಂದ್ರ (ಬಳ್ಳಾರಿ ಗ್ರಾಮೀಣ)

 17. ಎಸ್.ಎಸ್. ಮಲ್ಲಿಕಾರ್ಜುನ್ (ದಾವಣಗೆರೆ)

 18. ಬಸವಂತಪ್ಪ (ಮಾಯಕೊಂಡ)

 19. ಮಧು ಬಂಗಾರಪ್ಪ (ಸೊರಬ)

 20. ನರೇಂದ್ರ ಸ್ವಾಮಿ (ಮಳವಳ್ಳಿ)