ಕರ್ನಾಟಕ ಇನ್ನೇನು ಮಳೆ ಇಲ್ಲದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣ ಆಗಲಿದೆ, ಅಂತಾ ರೈತರು & ಸಾಮಾನ್ಯ ಜನರು ಚಿಂತೆ ಮಾಡುತ್ತಿದ್ದರು. ಅದರಲ್ಲೂ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ, ಮೈಸೂರು ಮತ್ತು ಕರ್ನಾಟಕದ ಪ್ರಮುಖ ನಗರಗಳು ಮಳೆ ಇಲ್ಲದೆ ಈ ಬಾರಿ ಕುಡಿಯುವ ನೀರಿಗೆ ಕೂಡ ಚಿಂತೆ ಮಾಡುವ ಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಇದೀಗ ದಿಢೀರ್ ಮಳೆಯ ಮೋಡಗಳು ಕರ್ನಾಟಕ ಸೇರಿದಂತೆ ಇಡೀ ಭಾರತವನ್ನೇ ಮುತ್ತಿಕೊಂಡಿವೆ. ಹೀಗಿದ್ದಾಗ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಇದೇ ಸಮಯದಲ್ಲಿ ಭಾರಿ ಮಳೆ ಕಾರಣಕ್ಕೆ ಇದೀಗ ಈ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಕೂಡ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ...
ಮುಂಗಾರು ಮಳೆ ಕೈಕೊಟ್ಟ ಭೀತಿಯಲ್ಲಿ ಚಿಂತಿತರಾಗಿದ್ದ ಜನರಿಗೆ ಇದೀಗ, ನೆಮ್ಮದಿ ನೀಡುವ ಸುದ್ದಿ ಸಿಕ್ಕಿದೆ. ಈಗ ಜುಲೈ 25 ಶನಿವಾರ ಶುರುವಾಗುವ ಭರ್ಜರಿ ಮಳೆ, ಕರ್ನಾಟಕದಲ್ಲಿ ಜುಲೈ 28 ಮಂಗಳವಾರ ತನಕ ತನ್ನ ಅಬ್ಬರ ತೋರಿಸಲಿದೆ. ಈ ಮೂಲಕ ಒಟ್ಟಾರೆ 17 ಜಿಲ್ಲೆಗಳಲ್ಲಿ ಹಳದಿ ಎಚ್ಚರಿಕೆ ಅಂದ್ರೆ ಯೆಲ್ಲೋ ಅಲರ್ಟ್ ಕೂಡ ಘೊಷಣೆ ಆಗಿದೆ. ಬೀದರ್, ಕಲಬುರಗಿ, ವಿಜಯಪುರ, ರಾಯಚೂರು, ಯಾದಗಿರಿ, ಬೆಳಗಾವಿ, ಧಾರವಾಡ & ಹಾವೇರಿ ಸೇರಿದಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಭರ್ಜರಿ ಮಳೆ ಮುನ್ಸೂಚನೆ ಇದೆ. ಬಿರುಗಾಳಿ ಸಹಿತ ಭರ್ಜರಿ ಮಳೆ ಗುಡುಗು & ಸಿಡಿಲು ಅಬ್ಬರಿಸುವ ಮುನ್ನೆಚ್ಚರಿಕೆ ಕೂಡ ನೀಡಲಾಗಿದೆ.
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ
ಮಳೆ ಅಬ್ಬರ ಹೆಚ್ಚಾದ ಕಾರಣಕ್ಕೆ ಇದೀಗ ಕರ್ನಾಟಕದ ಕರಾವಳಿ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 25 ಶನಿವಾರಕ್ಕೆ ಅನ್ವಯ ಆಗುವಂತೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ ಟು 2ನೇ ಪಿಯುಸಿ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು ಇದೀಗ ಆದೇಶ ಹೊರಡಿಸಿದ್ದಾರೆ.
ಹಾಗೇ ಇನ್ನೊಂದು ಕಡೆ ಉತ್ತರ ಕನ್ನಡ ಜಿಲ್ಲೆಯ ಹಲೆವೆಡೆ ಭಾರಿ ಮಳೆ ಬೀಳುತ್ತಿರುವ ಕಾರಣಕ್ಕೆ, ಉತ್ತರ ಕನ್ನಡದ ಹಲವು ತಾಲೂಕುಗಳಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ. ಅಂದಹಾಗೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಹಾಗೂ ಜೊಯಿಡಾ ತಾಲೂಕುಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಇದರ ಜೊತೆ ಕರ್ನಾಟಕ ರಾಜ್ಯದ ಮಲೆನಾಡು ಭಾಗದಲ್ಲೂ ಮಳೆರಾಯ ಮತ್ತಷ್ಟು ಅಲರ್ಟ್ ಆಗಿದ್ದು, ಮಳೆಯ ಮೋಡಗಳ ಆರ್ಭಟ ಮುಂದುವರಿದಿದೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ವಾತಾವರಣ ಹೇಗೆ ಇರಲಿದೆ? ಮುಂದೆ ಓದಿ...
ಬೆಂಗಳೂರು ನಗರದಲ್ಲಿ ಮಳೆ ಇದೆಯಾ?
ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಈಗಾಗಲೇ ಹಲವು ದಿನಗಳಿಂದ ಮಳೆ ಆರ್ಭಟ ನಿಧಾನವಾಗಿ ಶುರುವಾಗಿ ಮತ್ತೆ ತಂಪೆರದಿದೆ. ಹೀಗಿದ್ದಾಗ ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯಾಗಿ ಮಳೆರಾಯ ಅಬ್ಬರಿಸುವ ಬಗ್ಗೆ ಮುನ್ಸೂಚನೆ ಇದೀಗ ಸಿಗುತ್ತಿದ್ದು, ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಭಾಗದಲ್ಲಿ ಸಾಮಾನ್ಯ ಮಳೆ ಹಾಗೂ ಮೋಡ ಕವಿದ ವಾತಾವರಣ ಎದುರಾಗುವ ಮುನ್ಸೂಚನೆ ಇದೆ. ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಜಿಲ್ಲೆ ಮತ್ತು ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು & ಚಾಮರಾಜನಗರ ಜಿಲ್ಲೆಗಳಲ್ಲಿ ಇನ್ನು ಕೆಲವು ದಿನಗಳ ಕಾಲ ಫುಲ್ ಕೂಲ್ ಕೂಲ್ ವಾತಾವರಣ ಇರಲಿದೆ.