Karnataka Rain: ಮಳೆ ಅಬ್ಬರ ಜೋರು, ಮುಂದಿನ 3 ದಿನಗಳ ಕಾಲ ಈ ಭಾಗದಲ್ಲಿ ಮಳೆ!

bengaluru diaries | July 21, 2026 - 8:51 pm
ಮಳೆ ಅಬ್ಬರಿಸಬೇಕಿದ್ದ ಜೂನ್ ತಿಂಗಳಲ್ಲಿ ಮುಂಗಾರು ಮಳೆ ಕೈಕೊಟ್ಟು ದೊಡ್ಡ ಸಮಸ್ಯೆ ಎದುರಾಗಿತ್ತು, ಹೀಗಾಗಿ ಆತಂಕದ ವಾತಾವರಣ ನಿರ್ಮಾಣ ಆಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗುತ್ತಾ? ಎಂಬ ಪ್ರಶ್ನೆ ಮೂಡಿತ್ತು. ಹೀಗಿದ್ದಾಗ ಇನ್ನೇನು ಮಳೆ ಮೋಡಗಳು ಮಾಯವಾಗಿವೆ ಅಂತಾ ರೈತರು ತಮ್ಮ ತಮ್ಮ ಜಮೀನಿನಲ್ಲಿ ಒಣಗುತ್ತಿದ್ದ ಬೆಳೆಯನ್ನು ತಮ್ಮ ಕೈಯಾರೆ ನಾಶ ಮಾಡುವ ಚಿಂತನೆ ನಡೆಸಿದ್ದರು. ಆದರೆ ಇಂತಹ ಸಮಯದಲ್ಲೇ ಮಳೆರಾಯ ದಯೆ ತೋರಿಸಿದ್ದು, ಕರ್ನಾಟಕ ಸೇರಿದಂತೆ ಇಡೀ ಭಾರತದ ಹಲವು ಭಾಗದಲ್ಲಿ ಭರ್ಜರಿ ಮಳೆ ಆರಂಭ ಆಗಿದೆ. ಈ ಮೂಲಕ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕರಾವಳಿ ಕರ್ನಾಟಕ ಮಾತ್ರವಲ್ಲ ಮಲೆನಾಡು ಭಾಗದಲ್ಲೂ ಜನರು ಫುಲ್ ಖುಷಿ ಖುಷಿಯಾಗಿ ಕುಣಿದಾಡುತ್ತಿದ್ದಾರೆ.

ಮುಂಗಾರು ಮಳೆ ಕರ್ನಾಟಕದ ರೈತರು & ದಕ್ಷಿಣ ಭಾರತದ ರೈತರು ಮಾತ್ರವಲ್ಲ ಇಡೀ ಭಾರತದ ರೈತರ ಪಾಲಿಗೆ ಅಮೃತ ಇದ್ದಂತೆ. ಹೀಗಾಗಿ ಮುಂಗಾರು ಮಳೆಯನ್ನೇ ನಂಬಿಕೊಂಡು ರೈತರು ಬೆಳೆ ಬೇಳೆಯುತ್ತಾರೆ. ಭಾರತದಲ್ಲಿ ಬಹುತೇಕ ಕೃಷಿ ಜಮೀನು ಮಳೆ ನೀರನ್ನೇ ಆಶ್ರಯಿಸಿದೆ. ಆದರೆ ಇಂತಹ ಸಮಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಆತಂಕ ಹೆಚ್ಚಾಗಿತ್ತು, ಇಷ್ಟೆಲ್ಲದರ ನಡುವೆ ಕರ್ನಾಟಕದ ಹಲವು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದುಕೊಳ್ಳುವ ಲಕ್ಷಣ ಗೋಚರಿಸಿದೆ. ಮುಂದಿನ ಕೆಲ ದಿನಗಳ ಕಾಲ ಮಳೆ & ಬಿರುಗಾಳಿ ವಾತಾವರಣ ಮುಂದುವರಿವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜುಲೈ 22ಕ್ಕೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳು ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರಿ ಮಳೆ ನಿರೀಕ್ಷೆ ಇದೆ.



ಶೇಕಡಾ 70ರಷ್ಟು ಮೋಡಗಳ ಅಬ್ಬರ!
ಭಾರತದಲ್ಲಿ ಮುಂಗಾರು ಮಳೆ ಕೃಪೆ ಇಲ್ಲದೇ ಏನೂ ನಡೆಯುವುದಿಲ್ಲ, ಏಕೆಂದರೆ ಮುಂಗಾರು ಮಳೆ ಕೈಕೊಟ್ಟರೆ ದೊಡ್ಡ ಅಲ್ಲೋಲ ಕಲ್ಲೋಲವೇ ಸೃಷ್ಟಿ ಆಗಲಿದೆ. ಇದರ ಜೊತೆಗೆ ಆಹಾರ ಅಭಾವ ಹಾಗೂ ಬರ ಕೂಡ ಸಾಲಾಗಿ ಅಪ್ಪಳಿಸಲಿದೆ. ಹೀಗಿದ್ದಾಗ ಮುಂಗಾರು ಮಳೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದು, ಇದೀಗ ದಿಢೀರ್ ಮುಂಗಾರು ಮಳೆ ಚುರುಕಾಗಿದೆ. ಜುಲೈ 21ರ ಮಂಗಳವಾರ ಕೂಡ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ, ಆ ಬಳಿಕ ಜುಲೈ 22 ಬುಧವಾರ ಕೂಡ ಮಳೆರಾಯ ಅಬ್ಬರಿಸುವ ಎಲ್ಲಾ ಲಕ್ಷಣ ಗೋಚರಿಸಿದೆ. ಗುಡುಗು & ಮಿಂಚು ಸಹಿತ ಭಾರಿ ಗಾಳಿಯೊಂದಿಗೆ ಮಳೆ ಬೀಳುವ ಸಾಧ್ಯತೆ ಇದ್ದು, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ಹಾಗಾದರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ? ಮಾಹಿತಿ ಇಲ್ಲಿದೆ ಮುಂದೆ ಓದಿ.

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ...
ಕರಾವಳಿ ಜಿಲ್ಲೆಗಳಾದ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ ಇದೆ. ಇದರ ಜೊತೆಗೆ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆ ಹಾಗೂ ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಕೊಪ್ಪಳ, ಗದಗ ಜಿಲ್ಲೆ, ಧಾರವಾಡ & ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ. ಮಳೆ ಮಾತ್ರ ಅಲ್ಲದೇ ಈ ಸಮಯದಲ್ಲಿ ಭಾರಿ ಜೋರಾಗಿ ಗಾಳಿ ಕೂಡ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮಳೆ & ಗಾಳಿ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇದರ ಜೊತೆಗೆ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಸುತ್ತಮುತ್ತ ಇರುವ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಹಾಗೂ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ನೀಡಲಾಗಿದೆ.