Kaveri River: ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಎಂಟ್ರಿ?

bengaluru diaries | July 24, 2026 - 2:26 pm

ಮಳೆ ಬಂದಿಲ್ಲ, ನೀರು ಇಲ್ಲದೆ ಒದ್ದಾಡುತ್ತಿದೆ ಇಡೀ ಕರ್ನಾಟಕ. ಅದರಲ್ಲೂ ಕಾವೇರಿ ನೀರಿನ ವಿಚಾರದಲ್ಲಿ, ಮತ್ತೊಮ್ಮೆ ಕಾವೇರಿದ ಚರ್ಚೆ ಶುರುವಾಗಿದೆ. ಯಾವಾಗ ಕಾವೇರಿ ಗಲಾಟೆ ಇನ್ನೊಮ್ಮೆ ಭುಗಿಲೇಳುತ್ತೋ? ಈ ರೀತಿ ಭುಗಿಲೆದ್ದ ಗಲಾಟೆ ಮತ್ತೆಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತೋ? ಎಂಬ ಚಿಂತೆಯಲ್ಲಿ ಕರ್ನಾಟಕ ಮತ್ತು ನೆರೆ ರಾಜ್ಯ ತಮಿಳುನಾಡು ಜನರು ಚಿಂತೆ ಮಾಡುವಂತೆ ಆಗಿದೆ. ಇಂತಹ ಸಮಯದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಕೂಡ ಕರ್ನಾಟಕಕ್ಕೆ ಬಂಪರ್ ಸುದ್ದಿ ಕೊಟ್ಟು, ಯಾವುದೇ ಕಾರಣಕ್ಕೆ ನೀರು ಬಿಡುವುದು ಬೇಡ ಎಂಬ ನಿರ್ಧಾರ ಕೈಗೊಂಡಿದೆ. ಇನ್ನು ಹೀಗಿದ್ದಾಗಲೇ, ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಎಂಟ್ರಿ? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.

ಹೌದು, ಇಡೀ ಭಾರತದಲ್ಲೇ ಅತಿದೊಡ್ಡ ಜಲವಿವಾದ ಆಗಿರುವ ಕರ್ನಾಟಕ ಮತ್ತು ತಮಿಳುನಾಡು ಜಲವಿವಾದ ಇಂದಿಗೂ ಬಗೆಹರಿಯದ ವಿಚಾರವಾಗಿದೆ. ಹೀಗಿದ್ದಾಗ ಈ ವರ್ಷ ಮುಂಗಾರು ಮಳೆ ಬೇರೆ ಕೈಕೊಟ್ಟ ಕಾರಣ, ಜನ ಸಾಮಾನ್ಯರು ಈಗ ನರಳಾಡುತ್ತಿದ್ದಾರೆ. ಮುಂದಿನ ಪರಿಸ್ಥಿತಿ ಏನಪ್ಪಾ? ಎಂಬ ಚಿಂತೆಯೂ ಶುರುವಾಗಿದೆ. ಇಷ್ಟೆಲ್ಲದರ ನಡುವೆ ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಎಂಟ್ರಿ? ಅಂದಹಾಗೆ ಈಗ ಕಾವೇರಿ ನೀರಿನ ವಿಚಾರ ಸೇರಿ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಆಗಸ್ಟ್ 3 ಸೋಮವಾರ ನಮ್ಮ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿವೆ. ಹೀಗೆ ಕಾವೇರಿ ನೀರು ಹಂಚಿಕೆ ಕಿರಿಕ್ ಮತ್ತೊಂದು ತಿರುವು ಪಡೆಯುವ ಸಾಧ್ಯತೆ ದಟ್ಟವಾಗಿದೆ, ಈಗಾಗಲೇ ತಮಿಳುನಾಡು ಈ ಬಗ್ಗೆ ಕರ್ನಾಟಕಕ್ಕೆ ಪತ್ರ ಬರೆದಿದೆ.


ಆಗಸ್ಟ್ 3 ಸೋಮವಾರ ಗಂಭೀರ ಚರ್ಚೆ?

ಅಂದಹಾಗೆ ಕಾವೇರಿ ನೀರು ಹಂಚಿಕೆ ಸೇರಿ ಹಲವು ವಿಚಾರಗಳ ಚರ್ಚೆಗೆ ಸಭೆ ನಡೆಸಲು ಈಗಾಗಲೇ ದಿನಾಂಕ ನಿಗದಿಗೆ ಪತ್ರ ಬರೆದಿದ್ದಾರೆ ತಮಿಳುನಾಡು ಸಿಎಂ ವಿಜಯ್ ಅವರು. ಈ ಮೂಲಕ ಉಭಯ ರಾಜ್ಯಗಳ ನಡುವಿನ ದ್ವಿಪಕ್ಷೀಯ ವಿಚಾರ ಸೇರಿದಂತೆ ಕಾವೇರಿ ನೀರು ಹಂಚಿಕೆ & ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ಸಮಯ ನಿಗದಿ ಮಾಡುವಂತೆ ಕೋರಿದ್ದರು. ವಾರದ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು, ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ನೆರೆ ರಾಜ್ಯ ತಮಿಳುನಾಡು ಮುಖ್ಯಮಂತ್ರಿಗೆ ಮರುಪತ್ರ ಬರೆದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಆಗಸ್ಟ್ 3ರಂದು ಬೆಂಗಳೂರಿಗೆ ಆಗಮಿಸಿ ನನ್ನನ್ನು ಭೇಟಿಯಾಗಬಹುದು ಎಂದು ತಿಳಿಸಿದ್ದಾರೆ. ಈ ಆಹ್ವಾನಕ್ಕೆ ತಮಿಳುನಾಡಿನ ಸಿಎಂ ಕಚೇರಿಯಿಂದ ಇಷ್ಟರಲ್ಲೇ ಅಧಿಕೃತ ಸಮ್ಮತಿ ಲಭಿಸುವ ನಿರೀಕ್ಷೆಯಿದೆ.

ಮೇಕೆದಾಟು ಡ್ಯಾಂ ಕಟ್ಟಲು ಸಿದ್ಧತೆ?

2026 ಮುಂಗಾರು ಮಳೆ ಕೈಕೊಟ್ಟ ಕಾರಣಕ್ಕೆ ಈಗಾಗಲೇ ಕಾವೇರಿ ಕೊಳ್ಳದ ರೈತರ ಜಮೀನಿಗೆ ನೀರು ಬಿಟ್ಟು, ಬೆಳೆ ಬೆಳೆಯಲು ಅನುಕೂಲ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಆಕ್ರೋಶ ವ್ಯಕ್ತವಾಗಿದೆ. ಇದೇ ಪರಿಸ್ಥಿತಿಯಲ್ಲಿ ಮತ್ತೊಂದು ಕಡೆ ಪ್ರಸ್ತುತ ಮಳೆ ಕೊರತೆ ಎದುರಾಗಿರುವ ಹಿನ್ನೆಲೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಕುರಿತ ಸವಾಲುಗಳು ಎದುರಾಗಿವೆ. ಇದರ ಜೊತೆಗೆ ಮೇಕೆದಾಟು ಸಮತೋಲನಾ ಜಲಾಶಯ ಯೋಜನೆಯ ಅನುಷ್ಠಾನದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತೆ ಎನ್ನಲಾಗ್ತಿದೆ. ಉಭಯ ರಾಜ್ಯಗಳ ಗಡಿ ಭಾಗದಲ್ಲಿ ಜಂಟಿಯಾಗಿ ಮೇಕೆದಾಟು ಜಲಾಶಯವನ್ನು ಕಟ್ಟವ ಬಗ್ಗೆ ಎರಡೂ ರಾಜ್ಯಗಳ ಸಿಎಂ ಸಭೆಯಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಹಾಗೇ ಎರಡೂ ರಾಜ್ಯಗಳು ಅಕ್ಕಪಕ್ಕ ಇದ್ದು, ಎರಡೂ ರಾಜ್ಯಗಳ ಸೌಹಾರ್ದತೆ ದೃಷ್ಟಿಯಿಂದ ಕೂಡ ಈ ಸಭೆ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ.