Kaveri Water: ಕನ್ನಡಿಗರಿಗೆ ಭರ್ಜರಿ ಸುದ್ದಿ, ಭಾರಿ ಮಳೆಗೆ ತುಂಬಿದ ಜಲಾಶಯಗಳು

bengaluru diaries | August 4, 2026 - 11:04 am
2 ತಿಂಗಳ ಹಿಂದೆ ಕನ್ನಡಿಗರು ಚಿಂತೆಯಲ್ಲಿ ಒದ್ದಾಡುವ ಪರಿಸ್ಥಿತಿ ಎದುರಾಗಿತ್ತು, ಮುಂಗಾರು ಮಳೆ ಬಹುತೇಕ ಕೈಕೊಟ್ಟು ಹೋದ ಕಾರಣ ಈ ವರ್ಷ ಭೀಕರ ಬರ ಸ್ಥಿತಿ ಎದುರಾಗಬಹುದು ಎಂಬ ಚಿಂತೆ ಜೋರಾಗಿತ್ತು. ಈ ಕಾರಣಕ್ಕೆ ಸರ್ಕಾರ ಕೂಡ ಬರ ಎದುರಿಸಲು ಸಜ್ಜಾಗಿತ್ತು. ಆದರೆ ಹಂಗೋ & ಹಿಂಗೋ ಮಳೆರಾಯನಿಗೆ ಕರುಣೆ ಮೂಡಿದೆ ಅಂತಾ ಕಾಣುತ್ತದೆ, ಇದೇ ಕಾರಣಕ್ಕೆ ಮಳೆ ಆರ್ಭಟ ಜೋರಾಗಿದೆ. ಕರ್ನಾಟಕದ ಪಶ್ಚಿಮ ಘಟ್ಟಗಳ ತುಂಬಾ ಆವರಿಸಿದ ಭಾರಿ ಮಳೆ ಮೋಡಗಳು ಭರ್ಜರಿ ಮಳೆ ಸುರಿಸುತ್ತಿವೆ. ಈ ಕಾರಣಕ್ಕೆ ಇದೀಗ ಕರ್ನಾಟಕದ ದೊಡ್ಡ ದೊಡ್ಡ ಡ್ಯಾಂಗಳಿಗೆ ಭಾರಿ ಭರ್ಜರಿ ನೀರಿನ ಎಂಟ್ರಿ ಆಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರುವ ಬಿಟ್ಟು ಕೃಷಿ ಚಟುವಟಿಕೆ ಶುರು ಮಾಡಿದ್ದಾರೆ.

ಹೌದು, ಮಳೆರಾಯ ಅಬ್ಬರಿಸಿ ಬೊಬ್ಬಿರಿದ ಕಾರಣ ಈಗ ಕರ್ನಾಟಕದ ಕಾವೇರಿ ಕೊಳ್ಳದ ಡ್ಯಾಂಗಳು ಸೇರಿದಂತೆ ಅತ್ತ ಮಲೆನಾಡು ಭಾಗದ ತುಂಗಾ, ಭದ್ರಾ ಜಲಾಶಯಗಳು ಹಾಗೂ ಉತ್ತರ ಕರ್ನಾಟಕ ಭಾಗದ ಆಲಮಟ್ಟಿ ಡ್ಯಾಂ ಸೇರಿ ಕರ್ನಾಟಕದ ಬಹುತೇಕ ಜಲಾಶಯಗಳು ಮುಕ್ಕಾಲು ಭಾಗದಷ್ಟು ಇದೀಗ ಭರ್ತಿ ಆಗಿವೆ. ಈ ಮೂಲಕವೇ ಕನ್ನಡಿಗರ ನೀರಿನ ದಾಹ ಬಗೆಹರಿದಿದ್ದು, ನೋಡ ನೋಡುತ್ತಲೇ ಮಂದಹಾಸ ಮೂಡಿದೆ ಕನ್ನಡ ನಾಡಿನ ರೈತರ ಮೊಗದಲ್ಲಿ. ಪ್ರಮುಖವಾಗಿ ಬೆಂಗಳೂರು ಮಹಾನಗರಕ್ಕೆ ನೀರು ಪೂರೈಕೆ ಮಾಡುವ ಕಾವೇರಿ ಕೊಳ್ಳದ ಕೆಆರ್‌ಎಸ್ ಸೇರಿ ಪ್ರಮುಖ 4 ಜಲಾಶಗಳು ಇನ್ನೇನು ಬತ್ತಿ ಹೋಗುವ ಹಂತಕ್ಕೆ ತಲುಪಿದ್ದವು. ಆದರೆ ದಿಢೀರ್ ಭರ್ಜರಿ ಮಳೆ  ಶುರುವಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯು ಸುಧಾರಣೆ ಕಂಡಿದೆ. ಅದರಲ್ಲೂ, ಮುಂದಿನ 4 ದಿನಗಳ ಕಾಲ ಮತ್ತಷ್ಟು ಮಳೆ ಸುರಿದು ಇನ್ನಷ್ಟು ನೀರು ಹರಿಯುವ ಮುನ್ಸೂಚನೆ ಸಿಕ್ಕಿದೆ.



ಕೆಆರ್‌ಎಸ್ ಜಲಾಶಯಕ್ಕೆ ಭರ್ಜರಿ ನೀರು!
ಕನ್ನಂಬಾಡಿ ಕಟ್ಟೆ ಎಂದು ಕೂಡ ಕರೆಯಲಾಗುವ ಕಾವೇರಿ ಕೊಳ್ಳದ ಕೆಆರ್‌ಎಸ್ ಜಲಾಶಯಕ್ಕೆ ಈಗ ಭರ್ಜರಿ, ಭೋರ್ಗರೆಯುತ್ತಾ ನೀರು ಹರಿದು ಬರುತ್ತಿದೆ. ಕೇರಳ ರಾಜ್ಯದ ವಯನಾಡು ಭಾಗದಲ್ಲಿ ನಿರಂತರವಾಗಿ ಮಳೆಯ ಆರ್ಭಟ ಮುಂದುವರಿದ ಕಾರಣ ಈಗ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಭಾರಿ ಏರಿಕೆ ಕಾಣುತ್ತಿದೆ. ಈ ನಡುವೆ ಕಾವೇರಿ ನದಿಯ ಉಪನದಿಗಳಾದ ಕಪಿಲಾ, ಹೇಮಾವತಿ ಸೇರಿ ಸಣ್ಣಪುಟ್ಟ ನದಿಗಳಲ್ಲೂ ಇದೀಗ ನೀರಿನ ಆರ್ಭಟ ಹೆಚ್ಚಾಗಿದೆ. ಕೃಷಿಗೆ ನೀರು ಸಿಗುವುದಿಲ್ಲ ಈ ವರ್ಷ, ಎಂದು ಚಿಂತೆಯಲ್ಲಿದ್ದ ರೈತರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣ ಆಗಿದೆ.

ನೋಡ ನೋಡುತ್ತಲೇ ದಕ್ಷಿಣ ಕರ್ನಾಟಕದ ನೀರಿನ ಪ್ರಮುಖ ಮೂಲ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 104 ಅಡಿ ತಲುಪುತ್ತಿದ್ದು, ಇನ್ನೇನು ಕೆಲವು ದಿನಗಳ ಕಾಲ ಇದೇ ರೀತಿಯಾಗಿ ನೀರು ಹರಿದು ಬಂದರೆ ಕೆಆರ್‌ಎಸ್ ಡ್ಯಾಂ ಭರ್ತಿಯಾಗುವ ಮುನ್ಸೂಚನೆ ಕೂಡ ಇದೀಗ ಮೂಡಿದೆ. ಕೆಆರ್‌ಎಸ್ ಡ್ಯಾಂ 26 ಟಿಎಂಸಿ ಅಡಿಗೆ ತಲುಪಿದ್ದು, ಬರೋಬ್ಬರಿ 30 ಸಾವಿರ ಕ್ಯುಸೆಕ್ ನೀರು ಹರಿದು ಬರ್ತಿದೆ. ಹೀಗೆ ನೋಡಿದರೆ ಅತ್ತ ಕಬಿನಿ ಡ್ಯಾಂ ಮೂಲಕ 27 ಸಾವಿರ ಕ್ಯುಸೆಕ್ ನೀರು ಹರಿದು ತಮಿಳುನಾಡು ಸೇರುತ್ತಿದ್ದು, ಕಾವೇರಿ ವಿವಾದಕ್ಕೆ ಕೂಡ ಮುಕ್ತಿ ಸಿಕ್ಕಂತಾಗಿದೆ. ಮುಂಗಾರು ಮಳೆ ತಡವಾಗಿ ಬಂದರೂ ಕನ್ನಡಿಗರ ಕೈಹಿಡಿದು, ಬರ ಪರಿಸ್ಥಿತಿಯಿಂದ ಮುಕ್ತಿ ಕೊಟ್ಟಿದೆ.

ಆಲಮಟ್ಟ ಡ್ಯಾಂಗೆ ಭಾರಿ ನೀರು
ಕಾವೇರಿ ಕೊಳ್ಳ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಜೀವನಾಡಿ ಎಂದೇ ಕರೆಯಲಾಗುವ ಆಲಮಟ್ಟಿಯು ಕೂಡ ಇದೀಗ ಭರ್ತಿಯಾಗಿದೆ. ಅಲ್ಲದೆ ಹೆಚ್ಚಿನ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಆಲಮಟ್ಟಿ ಡ್ಯಾಂನಿಂದ ಸುಮಾರು 1,50,000 ಕ್ಯುಸೆಕ್ ನೀರು ಕೃಷ್ಣ ನದಿಗೆ ಹರಿದು ಹೋಗುತ್ತಿದೆ. ಹಾಗೇ ಮಲಪ್ರಭಾ & ಘಟಪ್ರಭಾ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಲಾಶಯಗಳು ತುಂಬುತ್ತಿವೆ. ಇನ್ನೊಂದು ಕಡೆ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಡ್ಯಾಂಗಳು ಕೂಡ ಬಹುತೇಕ ಭರ್ತಿಯಾಗಿದ್ದು, ರೈತರಿಗೆ ಬರದ ಪರಿಸ್ಥಿತಿ ಹಾಗೂ ಆತಂಕ ದೂರಾಗಿದೆ. ಪ್ರಮುಖವಾಗಿ ಕನ್ನಡಿಗರ ಜೊತೆಗೆ ನೀರಿಗಾಗಿ ಕಿರಿಕ್ ತೆಗೆದ ತಮಿಳುನಾಡು ರಾಜ್ಯಕ್ಕೆ ಮುಖಭಂಗ ಆಗಿದ್ದು, ನೋಡ ನೋಡುತ್ತಲೇ ಕಾವೇರಿ ನೀರಿನ ವಿವಾದವು ಕೂಡ ಅಂತ್ಯ ಕಂಡಿದೆ ಈ ವರ್ಷ.