Kaveri Water: ಕಾವೇರಿ ನದಿಗೆ ಭಾರಿ ಪ್ರಮಾಣದ ನೀರು, ವಾಟರ್ ಫೈಟ್ ಮುಕ್ತಾಯ?

bengaluru diaries | August 1, 2026 - 10:31 am

ಮುಂಗಾರು ಮಳೆ ಕೈಕೊಟ್ಟು ತೀವ್ರ ನರಳಾಟ ಎದುರಾಗಿ, ಕನ್ನಡಿಗರು ಒದ್ದಾಡುವ ಸಮಯದಲ್ಲಿ ನೆರೆಯ ರಾಜ್ಯ ತಮಿಳುನಾಡು ಸರ್ಕಾರ ನೀರಿಗಾಗಿ ಫೈಟಿಂಗ್ ಶುರು ಮಾಡಿತ್ತು. ಇದೇ ಕಾರಣಕ್ಕೆ ಕರ್ನಾಟಕ ಕೂಡ ಆಕ್ರೋಶ ಹೊರಹಾಕಿ, ತಮಿಳುನಾಡು ವಿರುದ್ಧ ನೀರಿಗಾಗಿ ಕದನ ಶುರುವಾಗಿತ್ತು. ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಸದ್ದು ಮಾಡುತ್ತಿರುವ ಸಮಯದಲ್ಲೇ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಅಂದಹಾಗೆ ಕಾವೇರಿಯ ಕೊಳ್ಳದಲ್ಲಿ ಭಾರಿ ಪ್ರಮಾಣದ ಮಳೆ ಆಗುತ್ತಿರುವ ಕಾರಣಕ್ಕೆ ಈ ತಿಕ್ಕಾಟಕ್ಕೆ ಬಿಗ್ ಬ್ರೇಕ್ ಸಿಕ್ಕಂತೆ ಆಗಿದೆ ಈಗ. ಅದರಲ್ಲೂ ಕೆಆರ್‌ಎಸ್ ಸೇರಿದಂತೆ ಜೀವನದಿ ಕಾವೇರಿ ಹರಿಯುವ ಕೊಳ್ಳದಲ್ಲಿ ಕಟ್ಟಿರುವ ದೊಡ್ಡ, ದೊಡ್ಡ ಡ್ಯಾಂಗಳಿಗೆ ಭಾರಿ ಪ್ರಮಾಣದ ನೀರು ಇದೀಗ ಹರಿದು ಬರುತ್ತಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯ & ಎಚ್.ಡಿ. ಕೋಟೆ ತಾಲೂಕಿನ ಬೀಚನ ಹಳ್ಳಿ ಗ್ರಾಮದ ಕಬಿನಿ ಜಲಾಶಯಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಳ ಕಂಡಿದೆ. ಇದರಿಂದ ಕಾವೇರಿ ನೀರು ಹಂಚಿಕೆ ವಿವಾದ & ತಮಿಳುನಾಡಿಗೆ ನೀರು ಬಿಡುವ ಆದೇಶದಿಂದ ಆತಂಕಗೊಂಡಿದ್ದ ರಾಜ್ಯದ ರೈತರು ಹಾಗೇ ಜನ ಸಾಮಾನ್ಯರು ತುಸು ನಿಟ್ಟುಸಿರು ಬಿಡುವಂತಾಗಿದೆ. ಹಾಗೇ ಈ ಸಮಯದಲ್ಲೇ ಮೇಕೆದಾಟು ಡ್ಯಾಂ ನಿರ್ಮಾಣ ಕೂಡ ಪಕ್ಕಾ? ಎಂಬ ಪ್ರಶ್ನೆ ಮೂಡಿದೆ. ಅದರಲ್ಲೂ ಬೇಕು ಬೇಕು ಅಂತಾ ಕರ್ನಾಟಕದ ಜೊತೆ ನೀರಿಗಾಗಿ ಕಿರಿಕ್ ಮಾಡುವ ತಮಿಳುನಾಡಿನ ರಾಜಕಾರಣಿಗಳಿಗೆ ಸೂಕ್ತವಾಗಿ ಪಾಠ ಕಲಿಸಲು ಇದೊಂದು ಪಕ್ಕಾ ಅವಕಾಶ ಎನ್ನಬಹುದು.


ಕಾವೇರಿ ನದಿಯಲ್ಲಿ ಭರ್ಜರಿ ನೀರು!

ಕೆಆರ್‌ಎಸ್ ಡ್ಯಾಂ ನೀರು ದಿನಕ್ಕೆ ಏರಿಕೆ ಆಗುತ್ತಿದ್ದು, ಈ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಪ್ರಸ್ತುತ ನೀರಿನ ಮಟ್ಟ 94.40 ಅಡಿಗಳಷ್ಟಿದೆ. ಒಟ್ಟು 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಈ ಡ್ಯಾಂನಲ್ಲಿ ಈಗ 18.733 ಟಿಎಂಸಿ ನೀರು ಸಂಗ್ರಹವಾಗಿದೆ. ಇದೇ ವೇಳೆ ಜಲಾಶಯಕ್ಕೆ ಒಳಹರಿವು 13,522 ಕ್ಯೂಸೆಕ್‌ಗೆ ಏರಿಕೆಯಾಗಿದ್ದು, ಹೊರಹರಿವು 1,565 ಕ್ಯೂಸೆಕ್ ಇದೆ. ಹೀಗಿದ್ದಾಗ ಮತ್ತೊಂದು ಸಿಹಿಸುದ್ದಿಯು ಕೂಡ ಸಿಕ್ಕಿದೆ. ಅದೇನು ಗೊತ್ತೆ? ಮಾಹಿತಿ ತಿಳಿಯಲು ಮುಂದೆ ಓದೋಣ ಬನ್ನಿ...

ಸಾಂಸ್ಕೃತಿಕ ನಗರಿ ಎಂಬ ಬಿರುದು ಪಡೆದಿರುವ ನಮ್ಮ ಮೈಸೂರು ಜಿಲ್ಲೆ, ಎಚ್.ಡಿ.ಕೋಟೆಯ ಬೀಚನಹಳ್ಳಿ ಸಮೀಪ ಇರುವ ಕಬಿನಿ ಜಲಾಶಯವೂ ಭರ್ತಿಯಾಗುತ್ತಿದೆ. ಇನ್ನು ಈ ಡ್ಯಾಂ ಗರಿಷ್ಠ ಎತ್ತರ 84 ಅಡಿ, ಇದೀಗ ಇಲ್ಲಿನ ನೀರಿನ ಮಟ್ಟ 80 ಅಡಿ ತಲುಪಿದೆ. ಅಂದರೆ ಪೂರ್ಣ ಸಾಮರ್ಥ್ಯ ತಲುಪಲು ಅಲ್ಪ ಪ್ರಮಾಣದ ನೀರು ಮಾತ್ರ ಬೇಕು. ಮತ್ತೊಂದು ಕಡೆ ಕಬಿನಿ ಡ್ಯಾಂನಲ್ಲಿ 11,500 ಕ್ಯೂಸೆಕ್ ಒಳಹರಿವು ಇದ್ದು, ಮತ್ತಷ್ಟು ಖುಷಿ ಕೊಟ್ಟಿದೆ. ಹಾಗೇ ಕಾವೇರಿ ಕಣಿವೆಯಲ್ಲಿ ಇನ್ನಷ್ಟು ಪ್ರಮಾಣದ ಮಳೆ ಬೀಳುವ ಮುನ್ಸೂಚನೆ ಇರುವುದು ಖುಷಿ ಇನ್ನಷ್ಟು ಹೆಚ್ಚಿಸಿದೆ.

ಭಾರಿ ಮಳೆಯಿಂದ ಮೂಡಿದ ನೆಮ್ಮದಿ

ಅಂದಹಾಗೆ ಮಳೆ ಪ್ರಭಾವದಿಂದ ಕೆಆರ್‌ಎಸ್ ಡ್ಯಾಂಗೆ ಒಳಹರಿವು ಹೆಚ್ಚಾಗಿ, CWMA ಆದೇಶದ ಆತಂಕದಲ್ಲಿದ್ದ ರೈತರ ಮುಖದಲ್ಲಿ ಇದೀಗ ಮಂದಹಾಸವೂ ಮೂಡಿಸಿದೆ. ಮೈಸೂರು ಜಿಲ್ಲೆ ಜೀವನಾಡಿ ಕಬಿನಿ ಜಲಾಶಯವು ಪ್ರಕೃತಿ ಮಾತೆ ಕೃಪೆಯಿಂದ ಭರ್ತಿಯಾಗಲು ಕೇವಲ 2 ಟಿಎಂಸಿ ನೀರು ಮಾತ್ರ ಬಾಕಿ ಇದೆ. ಕರ್ನಾಟಕದಲ್ಲಿ ಈಗ ಮೊದಲು ಭರ್ತಿ ಆಗುವ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಡ್ಯಾಂ, ಕಾವೇರಿ ಕೊಳ್ಳದಿಂದ ತಮಿಳುನಾಡಿಗೆ ನೇರವಾಗಿ ನೀರು ಹರಿಸುವ ಪ್ರಮುಖ ಅಣೆಕಟ್ಟೆ. ಹೀಗಾಗಿಯೇ ಈಗಿನ ಪರಿಸ್ಥಿತಿಯಲ್ಲಿ ಕರ್ನಾಟಕ ರಾಜ್ಯವು ಒಂದಷ್ಟು ಖುಷಿಪಡುವ ಸುದ್ದಿ ಸಿಕ್ಕಂತೆ ಆಗಿದೆ. ಇಂತಹ ಸಮಯದಲ್ಲೇ ತಮಿಳುನಾಡಿನ ಸೊಕ್ಕು ಕರಗಿಸಿ, ಮೇಕೆದಾಟು ಡ್ಯಾಂ ನಿರ್ಮಾಣ ಮಾಡಿ ಎಂಬ ಕೂಗು ಇದೀಗ ಹೆಚ್ಚಾಗಿದೆ.