Kim Jong Un: ಉತ್ತರ ಕೊರಿಯಾ ಸರ್ವಾಧಿಕಾರಿ ಬಗ್ಗೆ ಮತ್ತಷ್ಟು ಭಯ, ಕಾರಣ ಇಲ್ಲಿದೆ ತಿಳಿಯಿರಿ!

bengaluru diaries | July 13, 2026 - 10:30 pm

ಕಿಮ್ ಜಾಂಗ್ ಉನ್ ಜೊತೆಯಲ್ಲೇ ಕಿರಿಕ್ ಬೆರೆತು ಹೋಗಿದೆ ಅಂತಾ ಕಾಣುತ್ತದೆ, ಏಕೆಂದರೆ ಪದೇ ಪದೇ ಕಿರಿಕ್ ಮಾಡಿ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳ ಮೂಲಕವೇ ಬೆದಿರಿಕೆ ಹಾಕುತ್ತಿರುವ ಈ ಸರ್ವಾಧಿಕಾರಿ ಮತ್ತೊಂದು ವಿನಾಶದ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಅಂದಹಾಗೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಇದೀಗ ಮತ್ತೊಮ್ಮೆ ತನ್ನ ಶತ್ರುಗಳ ಎದೆ ನಡುಗಿಸಲು ಮುಂದಾಗಿದ್ದು, ಮತ್ತೊಮ್ಮೆ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳಿಗೆ ಹೊಸ ರೂಪ ಕೊಡೋದಕ್ಕೆ ಮುಂದಾದ ರೀತಿ ಕಾಣಿಸುತ್ತಿದೆ. ಈ ಬಗ್ಗೆ ಹೊರಬಿದ್ದಿರುವ ಹೊಸ ಮಾಹಿತಿ ಇಡೀ ಜಗತ್ತಿನ ತುಂಬಾ ಕಾಡ್ಗಿಚ್ಚಿನಂತೆ ಈಗ ಹಬ್ಬಿದೆ.

ಉತ್ತರ ಕೊರಿಯಾಗೆ ದೊಡ್ಡ ಶತ್ರು ಅಮೆರಿಕ, ಜಪಾನ್ ಹಾಗೂ ದಕ್ಷಿಣ ಕೊರಿಯಾ. ಇದರ ಜೊತೆಗೆ ಪಾಶ್ಚಿಮಾತ್ಯರನ್ನು ಅತಿಯಾಗಿ ದ್ವೇಷ ಮಾಡುವ ಕಿಮ್ ಜಾಂಗ್ ಉನ್, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿ ಇದ್ದಾನೆ. ಅಂದಹಾಗೆ ಈಗ ಕಿಮ್ ತನ್ನ ಪರಮಾಣು ಸ್ಥಾವರಗಳಲ್ಲಿ ಹೊಸ ನಿರ್ಮಾಣ ಕಾಮಗಾರಿ ಶುರು ಮಾಡಿರುವ ಆರೋಪ ಕೇಳಿಬಂದಿದೆ. ಉಪಗ್ರಹ ಅಂದ್ರೆ ಸ್ಯಾಟಲೈಟ್ ಆಧಾರಿತ ಫೋಟೋಗಳು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್‌ಗೆ ಸಂಬಂಧಿಸಿದ ಒಟ್ಟು 9 ಐಷಾರಾಮಿ ಸಂಯುಕ್ತಗಳಲ್ಲಿ ನಿರ್ಮಾಣ ಚಟುವಟಿಕೆ ಖಚಿತಪಡಿಸಿವೆ ಎಂದು ವರದಿಯಾಗಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಸಂಬಂಧಿಸಿದೆ ಎನ್ನಲಾಗುತ್ತಿರುವ ಹಲವು ಐಷಾರಾಮಿ ನಿವಾಸಗಳಲ್ಲಿ, ಭಾರೀ ನಿರ್ಮಾಣ ಕಾರ್ಯಗಳು ನಡೆಯತ್ತಿವೆ ಎಂದು ಉಪಗ್ರಹ ಚಿತ್ರಗಳು ಮಾಹಿತಿ ನೀಡಿವೆ.


ಜಪಾನ್ & ದಕ್ಷಿಣ ಕೊರಿಯಾಗೆ ಆತಂಕ

ಕಿಮ್ ಜಾಂಗ್ ಉನ್ ಏನೇ ಮಾಡಿದರೂ ಮೊದಲು ಭಯಪಡುವ ದೇಶಗಳು ಅಂದ್ರೆ ಅದು ಜಪಾನ್ & ದಕ್ಷಿಣ ಕೊರಿಯಾ ಎನ್ನಬಹುದು. ಯಾಕಂದ್ರೆ, ಉತ್ತರ ಕೊರಿಯಾಗೆ ಕೂಗಳತೆ ದೂರದಲ್ಲಿ ಇರುವ ಈ ದೇಶಗಳಲ್ಲಿ ಪ್ರತಿಕ್ಷಣವೂ ಆತಂಕದ ವಾತಾವರಣ ಕಾಡುತ್ತಲೇ ಇದ್ದು, ಯಾವ ಕ್ಷಣದಲ್ಲಿ ಪರಮಾಣು ಬಾಂಬ್‌ಗಳ ಬಳಕೆ ಆಗುತ್ತೋ? ಎಂಬ ಭಯವು ಕೂಡ ಎದುರಾಗುತ್ತಿದೆ. ಹೀಗಿದ್ದಾಗ ದಿಢೀರ್ ಅಂತಾ ಕಿಮ್ ಜಾಂಗ್ ಉನ್ ತನ್ನ ಪರಮಾಣು ಸ್ಥಾವರಗಳು ಹಾಗೂ ಅಧಿಕೃತವಾದ ನಿವಾಸದ ಬಳಿ ದೊಡ್ಡ ಮಟ್ಟದಲ್ಲಿ ತಯಾರಿ ನಡೆಸುತ್ತಿದ್ದು, ಆತಂಕವನ್ನು ಇನ್ನಷ್ಟು ಹೆಚ್ಚು ಮಾಡಿದೆ. ಉತ್ತರ ಕೊರಿಯಾ ರಾಜಧಾನಿ ಪ್ಯೊಂಗ್ಯಾಂಗ್‌ನ ಸಂಯುಕ್ತ ಸಂಸ್ಥಾನ ಕಟ್ಟಡವೂ ಸೇರಿ ವೊನ್ಸಾನ್‌ನಲ್ಲಿ ಇರುವ ಖಾಸಗಿ ಬೀಚ್‌ಫ್ರಂಟ್ ರಿಟ್ರೀಟ್ & ಸರೋವರ ಪಕ್ಕದ ರೆಸಾರ್ಟ್ ಹಾಗೂ ವಿಶಾಲವಾದ ಫ್ಯಾಮಿಲಿ ಎಸ್ಟೇಟ್ ಬಳಿ ದೊಡ್ಡ ಪ್ರಮಾಣದಲ್ಲಿ ಕಾಮಗಾರಿ ನಡೆದಿದೆ ಎನ್ನಲಾಗಿದೆ.

ರಷ್ಯಾ & ಚೀನಾ ಆರ್ಥಿಕ ಬೆಂಬಲ?

ಹೌದು, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ರಷ್ಯಾ ಹಾಗೂ ಚೀನಾ ಬೆಂಬಲವು ಇರುವುದು ದೊಡ್ಡ ಬಲ ತುಂಬಿದೆ. ಅದರಲ್ಲೂ ರಷ್ಯಾ ಮತ್ತು ಚೀನಾ ಜೊತೆಯಲ್ಲಿ ಬೆಳೆಯುತ್ತಿರುವ ಆರ್ಥಿಕ ಸಹಕಾರ, ಕಿಮ್ ಆಡಳಿತಕ್ಕೆ ಹೊಸ ಆರ್ಥಿಕ ಸಂಪನ್ಮೂಲ ಒದಗಿಸಿ ಹುರುಪು ತುಂಬಿದೆ. ಆದರೆ ಹೀಗೆ ತನಗೆ ಸಿಗುತ್ತಿರುವ ಆರ್ಥಿಕ ಸಹಕಾರ ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ಬದಲು ಕಿಮ್ ಜಾಂಗ್ ಉನ್ ಹಿಂಗಾ ಮಾಡೋದು? ಎಂಬ ಪ್ರಶ್ನೆ ಕೂಡ ಜಾಗತಿಕ ಮಟ್ಟದಲ್ಲಿ  ಇದೀಗ ಮೂಡಿದೆ. ಹಾಗೇ ಮತ್ತೊಂದು ಕಡೆ ಕಿಮ್ ಜಾಂಗ್ ಉನ್ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿರಬಹುದಾ? ಅಥವಾ ಈ ಮೂಲಕ ತನ್ನ ಶತ್ರುಗಳಿಗೆ ಎಚ್ಚರಿಕೆ ಕೊಡುತ್ತಿರಬಹುದಾ? ಎಂಬ ಚರ್ಚೆ ಕೂಡ ನಡೆಯುತ್ತಿದೆ. ಅಮೆರಿಕ ನಾಯಕರು ಈ ಎಲ್ಲಾ ಬೆಳವಣಿಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈಗಾಗಲೇ ಉತ್ತರ ಕೊರಿಯಾ ವಿರುದ್ಧ ನೂರಾರು ಆರ್ಥಿಕ ನಿರ್ಬಂಧ ಹೇರಿಕೆ ಮಾಡಿ ಎಚ್ಚರಿಕೆ ಸಂದೇಶ ನೀಡಿದ್ದಾರೆ.