ಬಡವರ ಬದುಕು ದುಸ್ತರವಾಗುತ್ತಿದ್ದು, ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಬಿಸಿ ತಾಗುತ್ತಿದೆ ಎಂದು ಪ್ರಜೆಗಳು ಭಾರಿ ಆಕ್ರೋಶ ಹೊರಹಾಕುತ್ತಾ ಇದ್ದಾರೆ. ಅದರಲ್ಲೂ ಪೆಟ್ರೋಲ್ & ಡೀಸೆಲ್ ಬೆಲೆ ಏರಿಕೆ ಹಾಗೂ ಗ್ಯಾಸ್ ಬೆಲೆ ಏರಿಕೆಯ ಬಿಸಿಯಿಂದ ಹೊರಬರುವ ಒಳಗಾಗಿ ಅಕ್ಕಿ, ಬೇಳೆ, ತರಕಾರಿ ರೀತಿಯ ಅತ್ಯಗತ್ಯ ವಸ್ತುಗಳ ಬೆಲೆ ಕೂಡ ಭಾರಿ ಹೆಚ್ಚಳ ಆಗಿರುವುದು ಬಡವರಿಗೆ ಚಿಂತೆ ತರಿಸಿತ್ತು. ಪರಿಸ್ಥಿತಿ ಹೀಗಿದ್ದಾಗ ದಿಢೀರ್ ಅಂತಾ ಮತ್ತೊಂದು ಆಘಾತ ಎದುರಾಗಿದೆ, ಇದೀಗ ಸಸ್ಯಾಹಾರಿಗಳ ಬದಲಾಗಿ ಮಾಂಸಾಹಾರ ಪ್ರಿಯರಿಗೆ ದೊಡ್ಡ ಶಾಕ್ ಸಿಕ್ಕಿದೆ. ಹಾಗಾದ್ರೆ ಕರ್ನಾಟಕದಲ್ಲಿ ಚಿಕನ್ & ಮೊಟ್ಟೆ ದರ ಭರ್ಜರಿ ಏರಿಕೆ, ಇದಕ್ಕೆ ಕಾರಣ ತಿಳಿಯಿರಿ...
ಅಂದಹಾಗೆ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ನಗರಗಳಲ್ಲಿ ಕಳೆದ ಕೆಲ ದಿನಗಳಿಂದ ಚಿಕನ್ & ಕೋಳಿ ಮೊಟ್ಟೆ ಬೆಲೆ ಭಾರಿ ಏರಿಕೆ ಕಂಡಿದೆ. ಪ್ರತಿದಿನ ಆಹಾರದಲ್ಲಿ ಪ್ರೋಟೀನ್‌ಗೆ ಇದನ್ನೇ ಅವಲಂಬಿಸಿರುವ ಲಕ್ಷಾಂತರ ಕುಟುಂಬಗಳಿಗೆ ಹೆಚ್ಚುವರಿ ಆರ್ಥಿಕ ಹೊರೆ ಎದುರಾಗಿ ಆಘಾತ ಸಿಕ್ಕಂತಾಗಿದೆ. ಇನ್ನು ಜಿಮ್ ಹೋಗುವವರು ಸೇರಿದಂತೆ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಹೋಟೆಲ್ ಉದ್ಯಮಿಗಳು ಹಾಗೂ ವಾರಾಂತ್ಯದಲ್ಲಿ ಮಾಂಸಾಹಾರ ಸೇವಿಸುವವರ ಮೇಲೆ ಕೂಡ ಇದೀಗ ಚಿಕನ್ ಹಾಗೂ ಮೊಟ್ಟೆ ದರ ಏರಿಕೆ ಕಂಡಿರುವುದು ಹೆಚ್ಚು ಪರಿಣಾಮ ಬೀರಲಿದೆ. ಅದರಲ್ಲೂ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಇದು ದೊಡ್ಡ ಹೊರೆಯಾಗಲಿದ್ದು, ಹಾಗಾದರೆ ಈಗ ಎಷ್ಟು ಏರಿಕೆ ಕಂಡಿದೆ ಚಿಕನ್ & ಮೊಟ್ಟೆ ಬೆಲೆ? ಬನ್ನಿ ತಿಳಿಯೋಣ.
ಒಂದು ಮೊಟ್ಟೆ ಬೆಲೆ 10 ರೂಪಾಯಿ!
ಹೌದು, ನಾವು & ನೀವೆಲ್ಲಾ ಚಿಕ್ಕವರಿದ್ದಾಗ ಒಂದು ಮೊಟ್ಟೆಗೆ ಅಬ್ಬಬ್ಬಾ ಅಂದ್ರೆ 2 ರೂಪಾಯಿ ಅಥವಾ 3 ರೂಪಾಯಿ ಬೆಲೆ ಇತ್ತು. ಹಂಗೆ ನೋಡ ನೋಡುತ್ತಲೇ 5 ರೂಪಾಯಿ ಆಸುಪಾಸಿಗೆ ಬಂದು ನಿಂತಿತ್ತು ಕೋಳಿ ಮೊಟ್ಟೆಯ ಬೆಲೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ನಿರಂತರವಾಗಿ ಹೆಚ್ಚಾಗಿದ್ದ ಮೊಟ್ಟೆ ಬೆಲೆ ಇದೀಗ ದಿಢೀರ್ ಅಂತಾ ಬರೋಬ್ಬರಿ 10 ರೂಪಾಯಿಗೆ ಬಂದು ತಲುಪಿದೆ. ಮಾರುಕಟ್ಟೆಯ ಈಗಿನ ಪರಿಸ್ಥಿತಿ ಗಮನಿಸಿದರೆ ಗ್ರಾಹಕರಿಗೆ ದೊಡ್ಡ ಆಘಾತವೇ ಈಗ ಎದುರಾಗಿದೆ. ಅದರಲ್ಲೂ ಚಿಕನ್ ಬೆಲೆಯನ್ನು ಕೇಳುವುದಕ್ಕೇ ಆಗಲ್ಲ ಎನ್ನಬಹುದು, ಸ್ಕಿನ್ ಔಟ್ ಹಾಗೂ ವಿತ್ ಸ್ಕಿನ್ ಎರಡರ ಬೆಲೆಯೂ ದಿಢೀರ್ ಅಂತಾ ಭಾರಿ ಭರ್ಜರಿ ಏರಿಕೆಯನ್ನ ಕಂಡಿದೆ...
ಚಿಕನ್ ಬೆಲೆ ಪ್ರತಿ ಕೆಜಿಗೆ 360 ರೂಪಾಯಿ!
ಕೋಳಿ ಮೊಟ್ಟೆ ಬೆಲೆ ಮಾತ್ರವಲ್ಲ, ಮೊಟ್ಟೆಗೆ ಜನ್ಮ ನೀಡುವ ಚಿಕನ್ ಬೆಲೆ ಕೂಡ ಭಾರಿ ಏರಿಕೆ ಕಂಡುಬಿಟ್ಟಿದೆ. ಈ ಮೂಲಕ ಚರ್ಮವಿಲ್ಲದ ಬ್ರಾಯ್ಲರ್ ಚಿಕನ್ ಅಂದ್ರೆ ಸ್ಕಿನ್ ಔಟ್ ಆಗಿರುವ ಚಿಕನ್ ಬೆಲೆ ಪ್ರತಿ ಕೆಜಿಗೆ ₹360ಕ್ಕೆ ತಲುಪಿದ್ದು, ಚರ್ಮ ಸಮೇತ ಚಿಕನ್ ಅರ್ಥಾತ್ ವಿತ್ ಸ್ಕಿನ್ ಚಿಕನ್ ಬೆಲೆ ಸುಮಾರು 340 ರೂಪಾಯಿಗೆ ತಲುಪಿದೆ. ಹಾಗಾದ್ರೆ ಈ ರೀತಿ ಬೆಲೆ ದಿಢೀರ್ ದೊಡ್ಡ ಪ್ರಮಾಣದಲ್ಲಿ ಏರುಪೇರು ಆಗಲು ಕಾರಣ ಏನು? ಇನ್ನೂ ಎಷ್ಟು ರೂಪಾಯಿಗೆ ಏರಿಕೆಯನ್ನ ಕಾಣಬಹುದು ಚಿಕನ್ & ಕೋಳಿ ಮೊಟ್ಟೆ ಬೆಲೆ? ಬನ್ನಿ ಈ ಬಗ್ಗೆ ಮುಂದೆ ಓದಿ ತಿಳಿಯೋಣ...
ಬೆಲೆ ಏರಿಕೆಗೆ ಕಾರಣ ಏನು?
* ಚಿಕನ್ ಹಾಗೂ ಮೊಟ್ಟೆ ಪೂರೈಕೆಯಲ್ಲಿ ಭಾರಿ ವ್ಯತ್ಯಾಸ
* ಪೂರೈಕೆಯ ಕುಸಿತದ ಪರಿಣಾಮ ಬೆಲೆ ಏರಿಕೆಯ ಸಮಸ್ಯೆ
* ಹವಾಮಾನ ವೈಪರೀತ್ಯ ಕಾರಣ ಕೋಳಿ ಬೆಳವಣಿಗೆ ಕುಸಿತ
* ಮೇವು, ವಿದ್ಯುತ್, ಔಷಧಿ & ಕಾರ್ಮಿಕರ ವೆಚ್ಚ ಹೆಚ್ಚಳ
* ಅಕ್ಕಪಕ್ಕದ ರಾಜ್ಯಗಳಲ್ಲಿ ಚಿಕನ್ & ಮೊಟ್ಟೆಗೆ ಡಿಮ್ಯಾಂಡ್
ಮತ್ತಷ್ಟು ಬೆಲೆ ಏರಿಕೆ ಸಾಧ್ಯತೆ?
ಈಗ ಸಿಕ್ಕಿರುವ ಆಘಾತ ಮಾತ್ರವಲ್ಲ, ಮುಂದಿನ ಕೆಲವು ತಿಂಗಳಲ್ಲಿ ಚಿಕನ್ ಹಾಗೂ ಕೋಳಿ ಮೊಟ್ಟೆ ಬೆಲೆ ಮತ್ತಷ್ಟು ಏರಿಕೆ ಕಾಣುವ ಭೀತಿ ಕಾಡುತ್ತಿದೆ. ಅದರಲ್ಲೂ ರೈತರು & ಕೋಳಿ ಸಾಕಾಣಿಕೆದಾರರು ಉತ್ಪಾದನೆ ವೆಚ್ಚವು ಹೆಚ್ಚಾಗಿರುವ ಕಾರಣ ಕಡಿಮೆ ದರದಲ್ಲಿ ಮಾರಾಟ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾ ಇರುವುದು ಕೂಡ ಬೆಲೆಯಲ್ಲಿ ಮತ್ತಷ್ಟು ಏರಿಕೆ ಕಾಣುವ ಆತಂಕ ಹುಟ್ಟಿಸಿದೆ. ಹಾಗಾದರೆ ಈ ರೀತಿ ಚಿಕನ್ ಹಾಗೂ ಕೋಳಿ ಮೊಟ್ಟೆ ಬೆಲೆ ಏರಿಕೆ ಪರಿಣಾಮ ಯಾರ ಮೇಲೆ ಆಗಲಿದೆ? ಮತ್ತು ಇದಕ್ಕೆ ಪರಿಹಾರ ಏನು? ಮುಂದೆ ಓದಿ.
ಚಿಕನ್ ಬೆಲೆ ಏರಿಕೆಯಿಂದ ಯಾರಿಗೆ ತೊಂದರೆ?
* ಜಿಮ್‌ಗೆ ಹೋಗುವವರು, ಪ್ರತಿದಿನ ಮೊಟ್ಟೆ & ಚಿಕನ್ ಸೇವಿಸುವರಿಗೆ ಸಮಸ್ಯೆ
* ಚಿಕನ್ & ಕೋಳಿ ಮೊಟ್ಟೆ ನಂಬಿರುವ ಕೈಗಾರಿಕೆಗಳಿಗೂ ತೊಂದರೆ ಕಾಡಲಿದೆ
* ಕರ್ನಾಟಕದಲ್ಲಿ ಇರುವ ಹಾಸ್ಟೆಲ್‌ಗಳಲ್ಲಿ ಹಾಗೂ ಪಿಜಿ ವಾಸಿಗಳಿಗೆ ತಲೆನೋವು
* ಸ್ಟ್ರೀಟ್ ಫುಡ್ & ಸಣ್ಣಪುಟ್ಟ ಹೋಟೆಲ್ ನಡೆಸುವವರಿಗೂ ತೊಂದರೆ ಆಗಲಿದೆ
* ಕ್ಯಾಟರಿಂಗ್ ಮತ್ತು ಆಹಾರ ಉದ್ಯಮಕ್ಕೆ ಬೆಲೆ ಏರಿಕೆಯು ಆಘಾತವನ್ನೇ ತಂದಿದೆ
ಪರ್ಯಾಯವಾಗಿ ಏನು ಮಾಡಬಹುದು ಈಗ?
ಚಿಕನ್ & ಕೋಳಿ ಮೊಟ್ಟೆ ಬೆಲೆ ಏರಿಕೆ ಆಗಿರುವ ಕಾರಣಕ್ಕೆ ಹಲವರು ಚಿಂತೆ ಮಾಡುವಂತೆ ಆಗಿದೆ. ಏಕೆಂದರೆ ಇದೇ ಚಿಕನ್ & ಕೋಳಿ ಮೊಟ್ಟೆ ಕೋಟ್ಯಂತರ ಜನರ ಪಾಲಿಗೆ ಪ್ರೊಟೀನ್ ಮೂಲವಾಗಿದೆ. ಆದರೆ ದಿಢೀರ್ ಈ ರೀತಿಯ ಬೆಲೆ ಏರಿಕೆ ಕಂಡು ಗ್ರಾಹಕರು ಕಂಗಾಲಾಗಿ ಹೋಗಿದ್ದು, ಏನು ಮಾಡಬೇಕು? ಎಂಬ ಚಿಂತೆಯಲ್ಲಿ ಇದ್ದಾರೆ. ಈಗ ಇದೇ ಕಾರಣಕ್ಕೆ ಪರ್ಯಾಯ ಪ್ರೊಟೀನ್ ಮಾರ್ಗಗಳ ಅಥವಾ ಆಹಾರದ ಹುಡುಕಾಟದಲ್ಲಿ ಇದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಚಿಕನ್ & ಕೋಳಿ ಮೊಟ್ಟೆ ಬೆಲೆ ಇನ್ನಷ್ಟು ಏರಿಕೆ ಆಗಲಿರುವ ಕಾರಣಕ್ಕೆ, ಏನೆಲ್ಲಾ ಪರ್ಯಾಯ ಮಾರ್ಗ ಇದೆ? ಮುಂದೆ ಓದಿ.
ಚಿಕನ್ & ಮೊಟ್ಟೆಗೆ ಬದಲಿ ಆಹಾರ...
* ಚಿಕನ್ & ಮೊಟ್ಟೆ ಬೆಲೆ ಏರಿಕೆ ಹಿನ್ನೆಲೆ ವೆಜ್ ಕಡೆ ಗಮನ
* ಪ್ರೋಟೀನ್ ಕೊರತೆಯಾಗದಂತೆ ಪರ್ಯಾಯ ಆಹಾರ ಬಳಕೆ
* ಸೋಯಾಬೀನ್ ಚಂಕ್ಸ್, ಪನ್ನೀರ್, ಮಶ್ರೂಮ್, ಬೇಳೆಕಾಳು
* ಕಡಲೆ, ರಾಜ್ಮಾ & ಹೆಸರು ಕಾಳಿನ ಬಳಕೆ ಮಾಡಬಹುದಾಗಿದೆ
* ಹಲಸಿನ ಸೀಸನ್ ಇರುವುದರಿಂದ ಹಲಸಿನ ಬೀಜವೂ ಉತ್ತಮ