ರಾಕಿಂಗ್ ಸ್ಟಾರ್
ಯಶ್ ಹವಾ ಮತ್ತಷ್ಟು ಜೋರಾಗಿದೆ, ಕೆಜಿಎಫ್ ಮೂಲಕ ಇಡೀ ಜಗತ್ತಿಗೆ ಕನ್ನಡ ಸಿನಿಮಾಗಳ ಹವಾ ಏನು? ಅನ್ನೋದನ್ನ
ತೋರಿಸಿಕೊಟ್ಟಿದ್ದರು ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಅವರು. ಆದರೆ ಕೆಜಿಎಫ್ ಹಿಟ್ ಆದ ನಂತರ ಯಶ್
ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ, ಇದೇ ಕಾರಣಕ್ಕೆ ಮಂಡ್ಯ ಟು ಇಂಡಿಯಾ ಮಾತ್ರವಲ್ಲ ಇಡೀ ಜಗತ್ತಿನಲ್ಲಿ
ಇದೀಗ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿತ್ತು.
ಇಂತಹ ಸಮಯದಲ್ಲೇ ಭರ್ಜರಿ ಸುದ್ದಿಯು ಹೊರಬಿದ್ದು, ಇನ್ನೇನು ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ ಅಂತಾ ಕೋಟಿ ಕೋಟಿ ಕನ್ನಡಿಗರು ಕಾಯುತ್ತಿದ್ದರು. ಆದರೆ ದಿಢೀರ್ ಅಂತಾ ಸಿನಿಮಾ ರಿಲೀಸ್‍ಗೆ ಬ್ರೇಕ್ ಬಿದ್ದು, ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿತ್ತು. ಇಷ್ಟೆಲ್ಲದರ ನಡುವೆ ಭಾರಿ ಭರ್ಜರಿ ಸುದ್ದಿಯೊಂದು ಈಗ ಹೊರಬಿದ್ದಿದೆ.
ಅಭಿಮಾನಿಗಳಿಗೆ
ಭರ್ಜರಿ ಸುದ್ದಿ!
ಯಶ್ ಅವರು
ಇದೀಗ ಫುಲ್ ಬ್ಯುಸಿ ಆಗಿದ್ದಾರೆ, ಏಕೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಯಶ್ ಅವರ ಟಾಕ್ಸಿಕ್ ಸಿನಿಮಾ
ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಇದಕ್ಕಾಗಿ ಅವರು ಈಗ ಹಾಲಿವುಡ್ ಅಂಗಳದಲ್ಲಿ ಬ್ಯುಸಿಯಾಗಿದ್ದಾರೆ.
ಏಕೆಂದರೆ ಟಾಕ್ಸಿಕ್ ಸಿನಿಮಾ ಕ್ರೇಜ್ ಈಗಾಗಲೇ ಇಡೀ ಜಗತ್ತನ್ನು ಆವರಿಸುತ್ತಿದ್ದು, ಜಗತ್ತಿನಾದ್ಯಂತ
ದೊಡ್ಡ ಮಟ್ಟದಲ್ಲಿ ಅದ್ಧೂರಿಯಾಗಿ ಈ ಸಿನಿಮಾ ರಿಲೀಸ್ ಆಗಲಿದೆ.
ಇದೇ ಕಾರಣಕ್ಕೆ
ಹಾಲಿವುಡ್ ಮಂದಿ ಎದುರು ದೊಡ್ಡ ಸೌಂಡ್ ಮಾಡುತ್ತಿರುವ ಕನ್ನಡಿಗ ಯಶ್ ಅವರು ಅಭಿಮಾನಿಗಳಿಗೆ ಭರ್ಜರಿ
ಸುದ್ದಿ ನೀಡಿದ್ದಾರೆ. ಇಂಗ್ಲಿಷ್‍ನಲ್ಲಿ ಸಾಲು ಸಾಲು ಸಂದರ್ಶನ ಕೊಡುತ್ತಿದ್ದಾರೆ ನಟ ಯಶ್ ಅವರು.
ಇದೇ ಸಮಯದಲ್ಲಿ ಟಾಕ್ಸಿಕ್ ಸಿನಿಮಾ ಬರೀ ಆಕ್ಷನ್ ಮಾತ್ರ ಹೊಂದಿಲ್ಲ, ಇಲ್ಲಿ ಏನೋ ದೊಡ್ಡ ವಿಷಯ ಇದೆ
ಎಂಬುದನ್ನ ಸಾರಿ ಸಾರಿ ಹೇಳುತ್ತಿದ್ದಾರೆ. ಈ ಮೂಲಕ ಪರೋಕ್ಷವಾಗಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದ್ದಾರೆ.
ಯಶ್ ಅಬ್ಬರ ಬಲು ಜೋರು!