ಉಕ್ರೇನ್ ತಗ್ಗಿಬಗ್ಗಿ ನಡೆಯುತ್ತಿಲ್ಲ, ರಷ್ಯಾ ತನ್ನ ಶತ್ರು ದೇಶವನ್ನು ಶಿಕ್ಷಿಸದೆ ಬಿಡುತ್ತಿಲ್ಲ. ಹೀಗೆ ರಷ್ಯಾ & ಉಕ್ರೇನ್ ಈಗ ಭಾರಿ ದೊಡ್ಡ ಕಾಳಗದಲ್ಲಿ ಬ್ಯುಸಿ ಆಗಿದ್ದು, ಕಳೆ 4 ವರ್ಷಗಳಿಂದ ನಿರಂತರವಾಗಿ ಇಬ್ಬರ ನಡುವೆ ತಿಕ್ಕಾಟವು ಜೋರು ಜೋರಾಗುತ್ತಲೇ ಇದೆ. ಒಂದು ಕಡೆ ಜಾಗತಿಕ ಮಟ್ಟದಲ್ಲಿ ರಷ್ಯಾ & ಉಕ್ರೇನ್ ಯುದ್ಧ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಸಮಯದಲ್ಲೇ, ಅಮೆರಿಕ ಸಹಿತ ದೊಡ್ಡ ದೊಡ್ಡ ದೇಶಗಳು ಈ ಇಬ್ಬರ ನಡುವಿನ ತಿಕ್ಕಾಟ ನಿಲ್ಲಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿವೆ. ಆದರೆ ಯಾವುದೂ ವರ್ಕೌಟ್ ಆಗದ ಕಾರಣಕ್ಕೆ ಈಗಲೂ ಜಗಳ ಜೋರಾಗಿದೆ, ಇದೇ ಸಮಯಕ್ಕೇ ಸರಿಯಾಗಿ ರಷ್ಯಾ & ಉಕ್ರೇನ್ ತಿಕ್ಕಾಟಕ್ಕೆ ದೊಡ್ಡ ತಿರುವು ಸಿಗುವ ಸಾಧ್ಯತೆ ದಟ್ಟವಾಗಿದೆ.
ಹೌದು, ಉಕ್ರೇನ್ ಸರ್ಕಾರದಲ್ಲಿ ಭಾರಿ ದೊಡ್ಡ ರಾಜಕೀಯ ಬದಲಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈಗ ಪ್ರಧಾನಿ ಯೂಲಿಯಾ ಸ್ವಿರಿಡೆಂಕೊ ಸ್ಥಾನ ಬದಲಾಯಿಸುವ ಪ್ರಸ್ತಾವನೆ ಮುಂದಿಟ್ಟಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ಹಂಚಿಕೊಂಡು, ಸರ್ಕಾರದ ಕಾರ್ಯತಂತ್ರ ಹೊಸ ದಿಕ್ಕಿನಲ್ಲಿ ಮುನ್ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದಿರುವುದು ಭಾರಿ ಕುತೂಹಲವನ್ನು ಕೆರಳಿಸಿದೆ. ಒಂದು ಕಡೆ ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಉಕ್ರೇನ್ ಗಡಿಯಲ್ಲಿ ಸೂಕ್ಷ್ಮ ಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಕಡೆ ಉಕ್ರೇನ್ ಸರ್ಕಾರದಲ್ಲಿ ದೊಡ್ಡ ಸ್ಥಾನವೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ.
ಯುದ್ಧದ ನಂತರ ಎಲ್ಲಾ ಚೇಂಜ್
2022 ಫೆಬ್ರವರಿ ತಿಂಗಳಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಘೋರ ಯುದ್ಧ ಆರಂಭ ಆಗಿತ್ತು, ಆಗ ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿ ಆಡಳಿತ ನಡೆಸುತ್ತಿದ್ದ ಜೋ ಬೈಡನ್ ಅವರು ನೇರವಾಗಿ ಬೆಂಬಲ ಸೂಚಿಸಿದ್ದರು. ಅದರಲ್ಲೂ ಉಕ್ರೇನ್‌ನ ಸೇನೆಗೆ ಎಲ್ಲಾ ರೀತಿಯ ನೆರವು ನೀಡಿ, ಬೆಂಬಲ ಕೊಟ್ಟು ಹಣವನ್ನೂ ನೀಡುತ್ತಿದ್ದರು. ಆದರೆ ಯಾವಾಗ ಅಮೆರಿಕದಲ್ಲಿ ಸರ್ಕಾರ ಬದಲಾಗಿ ಡೊನಾಲ್ಡ್ ಟ್ರಂಪ್ ಎಂಟ್ರಿ ಆಗಿತ್ತೋ, ಅಲ್ಲಿಂದ ನಂತರ ಉಕ್ರೇನ್ ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ ಎನ್ನಬಹುದು.
ಅಂದಹಾಗೆ ಈಗಾಗಲೇ ರಷ್ಯಾ ಜೊತೆಗಿನ ಯುದ್ಧದ ಕಾರಣಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನೂ ಮೈಮೇಲೆ ಎಳೆದುಕೊಂಡು ಒದ್ದಾಡುತ್ತಿರುವ ಉಕ್ರೇನ್ ಸರ್ಕಾರ, ಮುಂದೆ ಏನು ಮಾಡುವುದು? ಎಂಬ ಚಿಂತೆಯಲ್ಲಿ ಮುಳುಗಿ ಈ ಸಮಯದಲ್ಲಿ ಒದ್ದಾಡುತ್ತಿದೆ. ಇದೇ ಸಮಯದಲ್ಲಿ ಸರ್ಕಾರದಲ್ಲಿ ಬದಲಾವಣೆಯು ಆರಂಭ ಆದಂತೆ ಕಾಣುತ್ತಿದ್ದು, ಆ ಕಡೆ ಜನರು ಕೂಡ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಕ್ರೋಶಗೊಂಡಿರುವ ಮಾಹಿತಿಗಳು ಹರಿದಾಡುತ್ತಿವೆ. ಪದೇ ಪದೇ ತಪ್ಪು ಹೆಜ್ಜೆ ಇಡುತ್ತಿರುವ ಉಕ್ರೇನ್ ಸರ್ಕಾರದ ಬಗ್ಗೆ ಜನರ ಆಕ್ರೋಶ ಹೆಚ್ಚಾಗುತ್ತಲೇ ಇದೆ.
ಉಕ್ರೇನ್ ಚುನಾವಣೆ ನಡೆಯುವುದು ಯಾವಾಗ?
ಅಂದಹಾಗೆ ಇದೀಗ ಉಕ್ರೇನ್ ಆಗಿರುವ ಪ್ರಧಾನಿಯಾಗಿ ಯೂಲಿಯಾ ಸ್ವಿರಿಡೆಂಕೊ ಅವರು ನೀಡಿದ ಸೇವೆಯನ್ನು ಶ್ಲಾಘಿಸಿದ ಝೆಲೆನ್ಸ್ಕಿ, ದೇಶದ ಆಡಳಿತದಲ್ಲಿ ಅವರ ಸ್ಪಷ್ಟತೆ, ಸ್ಥಿರತೆ ಮತ್ತು ಪರಿಣಾಮಕಾರಿ ನಾಯಕತ್ವವನ್ನು ಮೆಚ್ಚಿಕೊಂಡಿದ್ದಾರೆ. ಇದೇ ಸಮಯದಲ್ಲಿ, ಯೂಲಿಯಾ ಸ್ಥಾನ ಬದಲಾವಣೆಗೆ ಮುಂದಾಗಿರುವ ಝೆಲೆನ್ಸ್ಕಿ ಬಗ್ಗೆಯೇ ಹಲವು ಚರ್ಚೆ ಶುರುವಾಗಿವೆ. ಅದರಲ್ಲೂ ಉಕ್ರೇನ್ ದೇಶದ ಸಾರ್ವತ್ರಿಕ ಚುನಾವಣೆ ಹಲವು ವರ್ಷಗಳಿಂದ ಮುಂದೂಡಿಕೆ ಆಗುತ್ತಿದ್ದು, ಮೊದಲು ಆ ಚುನಾವಣೆ ನಡೆಯಲಿದೆ ಎಂದು ರಷ್ಯಾ ಆಗ್ರಹ ಮಾಡುತ್ತಿದೆ. ಆದರೆ ತನ್ನ ಸ್ಥಾನ ಉಳಿಸಿಕೊಳ್ಳಲು ಉಕ್ರೇನ್ ಅಧ್ಯಕ್ಷರು ಈ ರೀತಿಯಾಗಿ ಪ್ರಧಾನಿ ಸ್ಥಾನ ಬದಲಾವಣೆ ಮಾಡುವ ನಾಟಕ ಮಾಡುತ್ತಿದ್ದಾರಾ? ಎಂದು ಜನರು ಪ್ರಶ್ನೆ ಕೇಳ್ತಿದ್ದಾರೆ.