ಖ್ಯಾತ ಗಾಯಕಿ & ಕನ್ನಡಿಗರ ಗಾನಕೋಗಿಲೆ ಎಸ್. ಜಾನಕಿ ಅವರನ್ನು ಕೋಟಿ ಕೋಟಿ ಕನ್ನಡಿಗರು ಎಸ್. ಜಾನಕಿ ಅಮ್ಮ ಎಂದೇ ಕರೆಯುತ್ತಾರೆ. ಅದರಲ್ಲೂ ಸಾವಿರಾರು ಹಾಡುಗಳನ್ನು ಹಾಡಿ, ಕನ್ನಡಿಗರ ಎದೆಯಲ್ಲಿ ಎಂದಿಗೂ ಮಾಸದಂತೆ ಉಳಿದಿರುವ ಗಾನಕೋಗಿಲೆ ಎಸ್. ಜಾನಕಿ ಅವರ ಅಗಲಿಕೆ ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭಾರತೀಯ ಸಿನಿಮಾ ಫ್ಯಾನ್ಸ್ ಪಾಲಿಗೆ ದೊಡ್ಡ ನೋವು ಉಂಟು ಮಾಡಿದೆ. ಎಸ್. ಜಾನಕಿ ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ ಹಿರಿಯರು. ಈ ಸಮಯದಲ್ಲೇ, ಗಾನಕೋಗಿಲೆ ಎಸ್. ಜಾನಕಿ ಅಮ್ಮನವರ ಸ್ಮಾರಕ ನಿರ್ಮಾಣಕ್ಕೆ ಹಂಸಲೇಖ ಆಗ್ರಹ ಮಾಡಿದ್ದಾರೆ.
ಹೌದು, ಹಿರಿಯ ಗಾಯಕಿ ಎಸ್. ಜಾನಕಿ ಅವರ ನಿಧನದಿಂದ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಕಂಬನಿ ಮಿಡಿದಿದ್ದಾರೆ. ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಮಹಾನ್ ಗಾಯಕಿಗೆ ಶಾಶ್ವತ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮೈಸೂರಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯ ಮಾಡಿದ್ದಾರೆ ಹಂಸಲೇಖ ಅವರು. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಜಯಮಾಲಾ ಅವರಿಗೆ ಅಧಿಕೃತ ಮನವಿಯನ್ನೂ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಹಾಗಾದರೆ ಅಭಿಮಾನಿಗಳು ಹೇಳ್ತಿರುವುದು ಏನು? ಬನ್ನಿ ತಿಳಿಯೋಣ...
ಮೈಸೂರಿನಲ್ಲೇ ನಿರ್ಮಾಣವಾಗಬೇಕು ಸ್ಮಾರಕ...
ಅಂದಹಾಗೆ, ಎಸ್. ಜಾನಕಿ ಅವರು ಸುಮಧುರ ಧ್ವನಿ ಮೂಲಕವೇ ಕೋಟ್ಯಂತರ ಕನ್ನಡಿಗರ ಹೃದಯವನ್ನ ಗೆದ್ದರು. ಅವರಿಗೆ ಕನ್ನಡ ನೆಲದ ಮೇಲಿರುವ ಅಪಾರ ಪ್ರೀತಿ ಇತ್ತು ಎಂಬುದನ್ನ ಕೂಡ ಸ್ಮರಿಸಿದ ಹಂಸಲೇಖ ಅವರು, ಎಸ್. ಜಾನಕಿ ಅವರಿಗೆ ಕನ್ನಡ ನೆಲದಲ್ಲೇ ಇರಬೇಕು ಎಂಬ ಆಸೆಯಿದೆ. ಹಾಗಾಗಿ, ನಾವು ಅವರಿಗೆ ಸ್ಮಾರಕ ನಿರ್ಮಿಸುವ ಮೂಲಕ ಸೂಕ್ತ ಗೌರವವನ್ನು ಸಲ್ಲಿಸಬೇಕಾಗಿದೆ. ಈ ಸ್ಮಾರಕವು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ನಿರ್ಮಾಣವಾಗಬೇಕು ಎಂದು ಇದೀಗ ಒತ್ತಾಯಿಸಿದ್ದಾರೆ. ಸಿನಿಮಾ ರಂಗದ ಕಲಾವಿದರು ಹಾಗೂ ಸಂಗೀತ ಲೋಕದ ದಿಗ್ಗಜರ ಆಶಯ ಕೂಡ ಇದೇ ಆಗಿದೆ.
ಹಾಗೇ ಎಸ್. ಜಾನಕಿ ಅಮ್ಮನವರ ಕೋಟಿ ಕೋಟಿ ಅಭಿಮಾನಿಗಳ ಒತ್ತಾಯ ಕೂಡ ಇದೇ ಆಗಿದೆ. ಇನ್ನ ಸೋಷಿಯಲ್ ಮೀಡಿಯಾ ಮೂಲಕ ಕೂಡ ಅಭಿಮಾನಿಗಳು ಸರ್ಕಾರಕ್ಕೆ ಇದೇ ಒತ್ತಾಯವನ್ನ ಈಗ ಮಾಡುತ್ತಿದ್ದಾರೆ. ಮತ್ತೊಂದು ಕಡೆ ದಕ್ಷಿಣ ಭಾರತದ ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಇಡೀ ಭಾರತ ಎಸ್. ಜಾನಕಿ ಅಮ್ಮ ಅವರ ಸಾವಿಗೆ ಕಂಬನಿ ಮಿಡಿದಿದೆ. ಹೀಗೆ ಅವರು ಕನ್ನಡ ನಾಡಲ್ಲೇ ಹುಟ್ಟಿ ಬರಲಿ, ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಇನ್ನು ಸರ್ಕಾರವೂ ಕೂಡ ಅಭಿಮಾನಿಗಳ ಒತ್ತಾಯಕ್ಕೆ ಪೂರಕವಾಗಿ ಸ್ಮಾರಕ ನಿರ್ಮಾಣ ಮಾಡಲಿದೆ ಎನ್ನುವ ಭರವಸೆ ಮೂಡಿದ್ದು, ಕಾದು ನೋಡಬೇಕಿದೆ.
ಎಸ್. ಜಾನಕಿ ಎಂದರೆ ಸೀತೆ...
"ನಮಗೆ ಎಸ್. ಜಾನಕಿ ಎಂದರೆ ಸೀತೆ, ಸೀತೆ ಎಂದರೆ ಗೀತೆ" ಎಂಬ ಭಾವನಾತ್ಮಕ ಮಾತುಗಳ ಮೂಲಕ ಹಂಸಲೇಖ ಅವರು ಗೌರವ ಸಲ್ಲಿಸಿದ್ದಾರೆ. ಅವರ ಕಂಠಸಿರಿ ಅನೇಕ ಭಾವನೆಗಳಿಗೆ ಜೀವ ತುಂಬಿದ್ದು ಕನ್ನಡ ಸಂಗೀತ ಇತಿಹಾಸದಲ್ಲಿ ಅಳಿಸಲಾಗದ ಅಧ್ಯಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಹೀಗೆ ಎಸ್. ಜಾನಕಿ ಅವರ ಅಗಲಿಕೆ ಅಭಿಮಾನಿಗಳ ಪಾಲಿಗೆ ಸಾಕಷ್ಟು ನೋವು ತಂದಿದ್ದು, ಕುಟುಂಬ ಸದಸ್ಯರು ಆಗಮಿಸಿ ಇದೀಗ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ದಿವಂಗತ ಜಾನಕಿ ಅವರ ಸಾಧನೆ ನೆನಪು ಮಾಡಿಕೊಂಡು ಹಿರಿಯ ಕಲಾವಿದರು, ರಾಜಕೀಯ ನಾಯಕರು ಹಾಗೂ ಗಣ್ಯರು ಸೋಷಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.