ಸಿಎಂ ಸಿದ್ದರಾಮಯ್ಯ ತಮ್ಮ ಅಭಿಮಾನಿಗಳಿಗೆ ಇಂದು ದಿಢೀರ್ ದೊಡ್ಡ ಶಾಕ್ ಕೊಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಸಿಎಂ ಸ್ಥಾನದಿಂದ ಕೆಳಗಿಳಿದು, ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದ ಮಾಜಿ ಸಿಎಂ ಇಂದು ತಮ್ಮ ಬೆಂಬಲಿಗರಿಗೆ ಮತ್ತೊಂದು ಆಘಾತ ನೀಡಿದ್ದಾರೆ. ಕರ್ನಾಟಕದಲ್ಲಿ 2 ಬಾರಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿ, 2 ಬಾರಿಯೂ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿರುವ ಸಿದ್ದರಾಮಯ್ಯ ಅವರು ಲಕ್ಷಾಂತರ ಬೆಂಬಲಿಗರನ್ನು ಹೊಂದಿದ್ದಾರೆ. ಅಲ್ಲದೆ ಕರ್ನಾಟಕದ ಮಾಸ್ ಲೀಡರ್ ಎಂಬ ಖ್ಯಾತಿ ಕೂಡ ಅವರಿಗಿದ್ದು, ಇಂತಹ ಸಮಯದಲ್ಲೇ ಸಿದ್ದರಾಮಯ್ಯ ದಿಢೀರ್ ಚುನಾವಣೆ ರಾಜಕೀಯಕ್ಕೆ ಗುಡ್ ಬೈ ಘೋಷಣೆ...
ಅಂದಹಾಗೆ ಕರ್ನಾಟಕ ರಾಜಕಾರಣದಲ್ಲಿ ದಿನೇ ದಿನೇ ಹಣದ ಪಾತ್ರವು ಹೆಚ್ಚಾಗಿದ್ದು, ಪ್ರಾಮಾಣಿಕ ರಾಜಕಾರಣಕ್ಕೆ ಬೆಲೆ ಇಲ್ಲದಂತಾಗಿದೆ. ವ್ಯವಸ್ಥೆ ಸಂಪೂರ್ಣವಾಗಿ ಕಲುಷಿತಗೊಂಡ ಕಾರಣ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ ಎಂದು ಇಂದು ದಿಢೀರ್ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕಾರ್ಯಕ್ರಮದಲ್ಲಿ ನಿಂತು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ತಮ್ಮ ಅಭಿಮಾನಿಗಳಿಗೆ ಭಾರಿ ದೊಡ್ಡ ಶಾಕ್ ಕೊಟ್ಟಂತಾಗಿದೆ. ಹಾಗಾದರೆ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ರಾಜಕೀಯ ಬಿಟ್ಟು ಹೋಗುತ್ತಾರಾ? ಬನ್ನಿ ಮಾಹಿತಿ ತಿಳಿಯಲು ಮುಂದೆ ಓದೋಣ.
82 ವರ್ಷಕ್ಕೆ ರಾಜಕೀಯ ನಿವೃತ್ತಿ!
2028 ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದರೂ, ಚುನಾವಣಾ ರಾಜಕಾರಣದಿಂದ ದೂರ ಉಳಿದರೂ ಜನಪರ ಹೋರಾಟ & ಸಾರ್ವಜನಿಕ ಬದುಕಿನಲ್ಲಿ ಸಕ್ರಿಯವಾಗಿ ಇರುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ರಾಜಕೀಯ ವ್ಯವಸ್ಥೆಯ ಬಗ್ಗೆ ಮಾಜಿ ಸಿಎಂ ಅಸಮಾಧಾನ ಹೊರಹಾಕುತ್ತಾ ಈ ಘೋಷಣೆ ಹೊರಡಿಸಿದ್ದಾರೆ. 2028ಕ್ಕೆ ನನಗೆ 82 ವರ್ಷ ತುಂಬಲಿದೆ, ಆರೋಗ್ಯ & ವಯಸ್ಸಿನ ಕಾರಣ ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಸಿದ್ದರಾಮಯ್ಯ ಅವರು. ಹಿಂದಿನ ಕಾಲದಲ್ಲಿ ಜನರೇ ಹಣ ಖರ್ಚು ಮಾಡಿ ನಾಯಕರನ್ನು ಗೆಲ್ಲಿಸುತ್ತಿದ್ದರು. ಆದರೆ ಈಗಿನ ಚುನಾವಣೆಗಳಲ್ಲಿ ಗೆಲ್ಲಲು ಹಣವೇ ಮುಖ್ಯವಾಗಿರುವ ಪರಿಸ್ಥಿತಿ ಇದ್ದು, ಪ್ರಾಮಾಣಿಕ ರಾಜಕಾರಣಕ್ಕೆ ಉಳಿಗಾಲವೇ ಇಲ್ಲ ಎಂದು ಇದೇ ವೇಳೆ ಬೇಸರ ಹೊರ ಹಾಕಿದ್ದಾರೆ.
2028ಕ್ಕೆ 50 ವರ್ಷ ಕಂಪ್ಲೀಟ್
ಸಿದ್ದರಾಮಯ್ಯ ಅವರು ಇದೇ ಸಮಯದಲ್ಲಿ ತಮ್ಮ ರಾಜಕೀಯ ಜೀವನ ಮೆಲುಕು ಹಾಕಿದರು. ಅಂದಹಾಗೆ ತಾವು 1978ರಲ್ಲಿ ತಾಲೂಕು ಮಂಡಳಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿದ ಸಮಯ ಮೆಲುಕು ಹಾಕಿಕೊಂಡರು. ಹೀಗಿದ್ದಾಗ 2028ಕ್ಕೆ ರಾಜಕೀಯ ಜೀವನದ 50 ವರ್ಷಗಳು ಪೂರ್ಣಗೊಳ್ಳಲಿದ್ದು, ಚುನಾವಣಾ ರಾಜಕಾರಣದಿಂದ ದೂರವಿದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿದು ಜನರ ಕಷ್ಟ ಮತ್ತು ಸುಖಗಳಿಗೆ ಸದಾ ಧ್ವನಿಯಾಗುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ವರುಣ ಕ್ಷೇತ್ರದಲ್ಲಿ ಜನರು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವಂತೆ ಮನವಿ ಮಾಡುತ್ತಿದ್ದಾರೆ ಎಂಬುದನ್ನೂ ಸಿದ್ದು ಪ್ರಸ್ತಾಪಿಸುತ್ತಲೇ, ಜನರ ಪ್ರೀತಿ & ವಿಶ್ವಾಸಕ್ಕೆ ಸದಾ ಋಣಿ. ಈಗಾಗಲೇ ತೆಗೆದುಕೊಂಡಿರುವ ನಿರ್ಧಾರವನ್ನು ಬದಲಾಯಿಸುವ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿ, ಬೆಂಬಲಿಗರಿಗೆ ಸವಿನಯವಾಗಿ ಮನವಿ ಮಾಡಿದ್ದಾರೆ.
ಒಟ್ನಲ್ಲಿ ಮಾಜಿ ಸಿಎಂ ಈ ರೀತಿಯ ಘೋಷಣೆ ಮಾಡಿರುವುದು ಭಾರಿ ತಲ್ಲಣಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ಅವರ ಈ ಘೋಷಣೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹಾಗೇ ಕಾಂಗ್ರೆಸ್ ಪಕ್ಷದ ಮುಂದಿನ ನಾಯಕತ್ವ, 2028 ಕರ್ನಾಟಕ ವಿಧಾನಸಭೆ ಚುನಾವಣಾ ತಂತ್ರ ಮತ್ತು ಕರ್ನಾಟಕ ಕಾಂಗ್ರೆಸ್ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಮೇಲೆ ಇದರ ಪರಿಣಾಮ ಏನಾಗಬಹುದು? ಎಂಬುದನ್ನ ಕಾದು ನೋಡಬೇಕಿದೆ. ಈ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೊಮ್ಮಗ ಕೂಡ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ.