ಭಾರತೀಯ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಇಡೀ ಜಗತ್ತಿನ ಗಮನ ಸೆಳೆದಿದೆ. ಏಕೆಂದರೆ ಚುನಾವಣೆ ಪ್ರಕ್ರಿಯೆಯನ್ನು ಮತ್ತಷ್ಟು ನ್ಯಾಯ ಸಮ್ಮತವಾಗಿ ನಡೆಸಲು, ನಕಲಿ ಮತದಾರರು ಸೇರಿದಂತೆ ಇಹಲೋಕ ತ್ಯಜಿಸಿರುವ ಮತದಾರರ ಪತ್ತೆಗಾಗಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಗತ್ಯವಾಗಿತ್ತು. ಅದರೆ ಚುನಾವಣಾ ಆಯೋಗದ ಇದೇ ಅಭಿಯಾನಕ್ಕೆ ವಿರೋಧ ಪಕ್ಷಗಳು ಸಾಕಷ್ಟು ಅಡ್ಡಿ ಮಾಡಿದ್ದರೂ ಅದು ವರ್ಕೌಟ್ ಆಗಿಲ್ಲ, ಬದಲಾಗಿ ಚುನಾವಣಾ ಆಯೋಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿಚಾರದಲ್ಲಿ ಇದೀಗ ಮತ್ತೊಂದು ಮೈಲಿಗಲ್ಲು ತಲುಪಿದೆ. ದೇಶದ ಅತಿದೊಡ್ಡ ರಾಜ್ಯಗಳ ಪೈಕಿ ಒಂದಾದ ನಮ್ಮ ಕರ್ನಾಟಕದಲ್ಲಿ, ಚುನಾವಣಾ ಆಯೋಗದ ಅಭಿಯಾನ ಸಕ್ಸಸ್ ಆಗಿದೆ.
ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಶೀಲನೆ ಅಚ್ಚುಕಟ್ಟಾಗಿ ಸಾಗಿದ್ದು, ಇನ್ನೇನು ಈ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದಿದೆ. ಅಂದಹಾಗೆ ನಿಗದಿತ ಅವಧಿಗಿಂತಲೂ ಒಂದು ದಿನ ಮುಂಚಿತವಾಗಿ ಬಹುತೇಕ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ ಎಂದು ಚುನಾವಣಾ ಆಯೋಗವು ಮಹತ್ವದ ಮಾಹಿತಿಯನ್ನ ಇದೀಗ ನೀಡಿದೆ. ಈ ಮೂಲಕ ಮತದಾರರ ಪಟ್ಟಿಯನ್ನ ಇನ್ನಷ್ಟು ನಿಖರ & ಪಾರದರ್ಶಕಗೊಳಿಸುವ ಉದ್ದೇಶದಿಂದ ಕೈಗೊಂಡಿರುವ ಈ ಮಹತ್ವದ ಅಭಿಯಾನದಲ್ಲಿ ಕೋಟ್ಯಂತರ ದಾಖಲೆಗಳನ್ನ ಡಿಜಿಟಲ್ ರೂಪಕ್ಕೆ ಪರಿವರ್ತಿಸಲಾಗಿದೆ, ರಾಜ್ಯಾದ್ಯಂತ ವ್ಯಾಪಕ ಪರಿಶೀಲನೆ ನಡೆಸಲಾಗಿದೆ. ಹಾಗೇ ಕರ್ನಾಟಕದ 4,44,48,231 ಜನರಿಗೆ ಭರ್ಜರಿ ಸುದ್ದಿ ಸಿಕ್ಕಿದೆ, ಹಾಗಾದ್ರೆ ಏನದು ಭರ್ಜರಿ ಸುದ್ದಿ? ಮುಂದೆ ಓದಿ.
ಕರ್ನಾಟಕದಲ್ಲಿ ಒಟ್ಟು ಎಷ್ಟು ಮತದಾರರು?
ಉತ್ತರ ಭಾರತದ ರಾಜ್ಯಗಳು ಸೇರಿದಂತೆ, ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮತದಾರರ ಪಟ್ಟಿ ವಿಶೇಷ ಪರಿಶೀಲನೆ ಅಥವಾ ಪರಿಷ್ಕರಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಮುಖ್ಯವಾಗಿ ಕರ್ನಾಟಕದಲ್ಲಿ ಈ ಪ್ರಕ್ರಿಯೆ ಶುರುವಾದ ನಂತರ ಇದು ಇನ್ನಷ್ಟು ಗಮನ ಸೆಳೆದಿತ್ತು. ಕರ್ನಾಟಕ ರಾಜ್ಯದಲ್ಲಿ ಜೂನ್ 30ಕ್ಕೆ ಆರಂಭವಾಗಿದ್ದ ಈ ವಿಶೇಷ ಅಭಿಯಾನಕ್ಕೆ ಲಕ್ಷಾಂತರ ಅಧಿಕಾರಿಗಳು ಸಾಥ್ ನೀಡಿದ್ದರು. ವಿಶೇಷ ಅಭಿಯಾನದಲ್ಲಿ ಮನೆ ಮನೆಗೆ ತೆರಳಿ ಮತದಾರರ ಮಾಹಿತಿ ಸಂಗ್ರಹಿಸುವ ಕೆಲಸವನ್ನ ಅಧಿಕಾರಿಗಳು ಕೈಗೊಂಡಿದ್ದರು. ಈ ರೀತಿಯಾಗಿ ಸಂಗ್ರಹಿಸಿದ ಎನ್ಯೂಮರೇಷನ್ ಫಾರ್ಮ್‌ಗಳನ್ನ ಡಿಜಿಟಲೀಕರಣ ಮಾಡುವ ಕಾರ್ಯವೂ ಸಮಾನಾಂತರವಾಗಿ ನಡೆದು, ಇದೀಗ ಅದು ಬಹುತೇಕ ಪೂರ್ಣಗೊಂಡಿದೆ. ಚುನಾವಣಾ ಆಯೋಗವು ನೀಡಿರುವ ಅಂಕಿ-ಅಂಶದ ಪ್ರಕಾರ ರಾಜ್ಯಾದ್ಯಂತ ಒಟ್ಟು 5,54,32,314 ಎನ್ಯೂಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿತ್ತು.
ರಾಜ್ಯದಲ್ಲಿ 4,44,48,231 ಫಾರ್ಮ್ ಡಿಜಿಟಲೈಸ್ಡ್
ಹೀಗೆ 5,54,32,314 ಎನ್ಯೂಮರೇಷನ್ ಫಾರ್ಮ್‌ಗಳ ಪೈಕಿ 4,44,48,231 ಫಾರ್ಮ್‌ಗಳನ್ನು ಯಶಸ್ವಿಯಾಗಿಯೇ ಡಿಜಿಟಲ್ ವ್ಯವಸ್ಥೆಗೆ ಅಪ್‌ಲೋಡ್ ಮಾಡಲಾಗಿದೆ. ಈ ಬಗ್ಗೆ ಚುನಾವಣಾ ಆಯೋದ ಅಧಿಕಾಗಿಳು ಮಾಹಿತಿಯನ್ನ ನೀಡಿದ್ದು, ಬಾಕಿ ಉಳಿದ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 66,14,954 ಮತದಾರರು ಶಾಶ್ವತವಾಗಿ ಸ್ಥಳಾಂತರ ಆಗಿದ್ದಾರೆ. ಹಾಗೇ 16,34,326 ಮತದಾರರು ಮೃತಪಟ್ಟಿದ್ದರೆ ಮತ್ತೊಂದೆಡೆ 6,96,536 ನಕಲಿ ಮತದಾರರ ಗುರುತು ಪತ್ತೆಯಾಗಿದೆಯಂತೆ. 15,90,165 ಮತದಾರರು ನಾಪತ್ತೆ ಆಗಿರುವುದಾಗಿ ಪರಿಶೀಲನೆ ಮೂಲಕ ಗೊತ್ತಾಗಿದ್ದು, ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದ ಚುನಾವಣಾ ಆಯೋಗ ಈ ಬಾರಿ ಆನ್‌ಲೈನ್ ಸೇವೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಿತ್ತು.
ಒಟ್ನಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ ಕರ್ನಾಟಕದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಶೀಲನೆ ಯಶಸ್ವಿಯಾಗಿ ನಡೆದಿದೆ. ಒಂದೇ ವ್ಯಕ್ತಿಯ ಹೆಸರು ಒಂದಕ್ಕಿಂತಲೂ ಹೆಚ್ಚು ಕಡೆ ಇರುವ ಪ್ರಕರಣಗಳೂ ಸೇರಿದಂತೆ ಮೃತಪಟ್ಟ ಮತದಾರರ ಹೆಸರು, ಸ್ಥಳಾಂತರವಾದ ಮತದಾರರ ದಾಖಲೆ & ತಪ್ಪು ಮಾಹಿತಿ ಸರಿಪಡಿಸುವ ಕೆಲಸಕ್ಕು ಕೂಡ ಈ ಮಹತ್ವದ ಅಭಿಯಾನ ನೆರವಾಗಿದೆ. ಈ ಮೂಲಕ ಕರ್ನಾಟಕ ರಾಜ್ಯವು ಮುಂದಿನ ಚುನಾವಣೆಗಳಿಗೆ ಸಜ್ಜಾಗಿದ್ದು, ಬಹುಮುಖ್ಯವಾಗಿ ಈ ಹಿಂದಿನ ಬಿಬಿಎಂಪಿ ಹಾಗೂ ಈಗಿನ ಗ್ರೇಟರ್ ಬೆಂಗಳೂರು ಚುನಾವಣೆಗಳು ಯಾವಾಗ ನಡೆಯುತ್ತೆ? ಎಂಬುದನ್ನ ಕಾದು ನೋಡಬೇಕಿದೆ.