ಮಳೆರಾಯ ಕಾಣೆಯಾಗಿದ್ದಾನೆ, ಹುಡುಕಿಕೊಟ್ಟ ವ್ಯಕ್ತಿಗೆ ಸೂಕ್ತ ಬಹುಮಾನ ನೀಡಲಾಗುವುದು... ಹೀಗಂತಾ ಈಗ ಕನ್ನಡ ನಾಡಿನ ಪ್ರಜೆಗಳು ಜಾಹೀರಾತು ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಯಾಕಂದ್ರೆ ಸಿಕ್ಕಾಪಟ್ಟೆ ಮಳೆ ಬಿದ್ದು, ಇಷ್ಟೊತ್ತಿಗೆಲ್ಲಾ ಕರ್ನಾಟಕದ ಡ್ಯಾಂಗಳು ತುಂಬಿ ತುಳುಕಬೇಕಿದ್ದ ಸಮಯದಲ್ಲಿ ದಿಢೀರ್ ಮಳೆ ಮೋಡದ ಗೊಂಚಲು ಮರೆಯಾಗಿದೆ. ಬಯಲು ಸೀಮೆ ಮಾತ್ರವಲ್ಲ, ಸ್ವತಃ ಬೆಟ್ಟಗುಡ್ಡಗಳ ಸ್ವರ್ಗ ಎಂದು ಕರೆಯುವ ಮಳೆ ಹೆಚ್ಚಾಗಿ ಸುರಿಯುವ ಮಲೆನಾಡು ಭಾಗದಲ್ಲೂ ಮಳೆ ಇಲ್ಲದೆ ಜನ ನರಳಿ ಹೋಗಿದ್ದಾರೆ. ಇಂತಹ ಸಮಯದಲ್ಲೇ, ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಮಳೆ.. ಮಳೆ.. ಭರ್ಜರಿ ಮಳೆ ಗ್ಯಾರಂಟಿ ಕರ್ನಾಟಕದ ಈ ಜಿಲ್ಲೆಗಳಲ್ಲಿ!
ಹೌದು, ಮಳೆ ಮತ್ತೊಮ್ಮೆ ಕನ್ನಡ ನಾಡಿಗೆ ತಂಪೆರೆಯಲು ಸಜ್ಜಾಗಿದೆ. ಅದರಲ್ಲೂ ಮುಂಗಾರು ಮಳೆ ಆರಂಭದ ಸಮಯದಲ್ಲೇ ಕೈಕೊಟ್ಟು ಚಿಂತೆ ಹೆಚ್ಚು ಮಾಡಿತ್ತು. ಆದರೆ ಇದೀಗ ಮಳೆರಾಯ ಮತ್ತೊಮ್ಮೆ ಆಕ್ಟಿವೇಟ್ ಆದಂತೆ ಕಾಣ್ತಿದ್ದು ನಮ್ಮ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭರ್ಜರಿ ಮಳೆಯ ಹುಮ್ಮಸ್ಸು ಮೂಡಿದೆ. ಇನ್ನೇನು 2026 ಪೂರ್ತಿ ಬರಗಾಲದಲ್ಲಿ ನರಳಾಟ ಗ್ಯಾರಂಟಿ ಎಂಬ ಚಿಂತೆಯು ಆವರಿಸಿರುವ ಸಮಯದಲ್ಲೇ ಕರ್ನಾಟಕದ ಆಗಸದ ಮೇಲೆ ಭಾರಿ ದೊಡ್ಡ ಪ್ರಮಾಣದಲ್ಲಿಯೇ ಮಳೆ ಮೋಡಗಳು ಎಂಟ್ರಿ ಕೊಟ್ಟಿವೆ. ಹಾಗಿದ್ರೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದ ಯಾವ, ಯಾವ ಜಿಲ್ಲೆಗಳಲ್ಲಿ ಇದೀಗ ಮಳೆ ಸುರಿಯಲಿದೆ? ಬನ್ನಿ ಮಾಹಿತಿ ತಿಳಿಯಲು ಮುಂದೆ ಓದೋಣ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಕರ್ನಾಟಕದಲ್ಲಿ ಜಲಾಶಯಗಳು ತುಂಬಬೇಕು & ಆ ಮೂಲಕ ಡ್ಯಾಂ ನೀರು ಬೆಳೆ ಬೆಳೆಯಲು ಹಾಗೂ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದರೆ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಚನ್ನಾಗಿ ಮಳೆ ಬೀಳಬೇಕು. ಆದರೆ ಎಲ್-ನಿನೋ ಪರಿಣಾಮ ಮುಂಗಾರು ಮಳೆ ಆರಂಭದಲ್ಲೇ ಕೈಕೊಟ್ಟು ಹೋಗಿದೆ. ಹೀಗಿದ್ದಾಗ ರೈತರಲ್ಲಿ ಚಿಂತೆ & ಬೇಸರ ಹೆಚ್ಚಾಗಿತ್ತು. ಆದರೆ ಇದೀಗ ಕರ್ನಾಟಕ ರಾಜ್ಯದ ಮಲೆನಾಡು ಭಾಗ & ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಒಳನಾಡು ಪ್ರದೇಶದ ಬಯಲು ಸೀಮೆ ಜಿಲ್ಲೆಗಳಲ್ಲಿ ಕೂಡ ಭಾರಿ ಭರ್ಜರಿ ಮಳೆ ಫಿಕ್ಸ್ ಆಗಿದೆ. ಇದು ರೈತರಲ್ಲೂ, ಸಿಟಿ ಭಾಗದಲ್ಲಿ ವಾಸ ಇರುವ ಜನರಲ್ಲೂ ಖುಷಿ ಮೂಡುವಂತೆ ಮಾಡಿದೆ.
ಸೋಮವಾರ ಅಂದ್ರೆ ಇಂದಿನಿಂದಲೇ ಶುರು ಆಗಲಿರುವ ಮಳೆರಾಯನ ಅಬ್ಬರ, ಜುಲೈ 23 ಬುಧವಾರ ತನಕವೂ ಮುಂದುವರಿಯುವ ನಿರೀಕ್ಷೆ ಇದೆ. ಅದ್ರಲ್ಲೂ ಈ ಸಮಯದಲ್ಲಿ ಆವರಿಸಿರುವ ಮಳೆ ಮೋಡಗಳನ್ನು ನೋಡಿದರೆ ಮಲೆನಾಡು ಪ್ರದೇಶದಲ್ಲಿ ಶುಕ್ರವಾರ ತನಕ ಕೂಡ ಭರ್ಜರಿ ಮಳೆ ಫಿಕ್ಸ್ ಆಗಿದೆ. ಹಾಗಿದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಇದೀಗ ಮಳೆ ಮುನ್ಸೂಚನೆ ನೀಡಲಾಗಿದೆ? ಕರಾವಳಿ ಭಾಗದಲ್ಲಿ ಪರಿಸ್ಥಿತಿ ಹೇಗೆ ಇರಲಿದೆ? ಮಲೆನಾಡು ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಆಗಬಹುದು? ಎಂಬುದರ ಮಾಹಿತಿಯು ಮುಂದೆ ಇದೆ ಓದಿ ತಿಳಿಯೋಣ ಬನ್ನಿ.
ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು...
ಅಂದಹಾಗೆ ಈಗ ಇರುವ ಮಾಹಿತಿ ಪ್ರಕಾರ ಕರ್ನಾಟಕದ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯೂ ಸೇರಿದಂತೆ ಮೈಸೂರು ಭಾಗದಲ್ಲಿ, ಹುಬ್ಬಳ್ಳಿ ಧಾರವಾಡ ಸುತ್ತಮುತ್ತ ಇರುವ ಜಿಲ್ಲೆಗಳಲ್ಲಿ ಹಾಗೂ ಪ್ರಮುಖವಾಗಿ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ನಿರೀಕ್ಷೆ ಮಾಡಲಾಗಿದೆ. ಅಲ್ಲದೇ, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೂಡ ಇದೀಗ ಮಳೆ ನಿರೀಕ್ಷೆ ಮೂಡಿದ್ದು ಜನರು ಫುಲ್ ಖುಷ್ ಆಗಿದ್ದಾರೆ ಈಗ. ಹಾಗೇ ಮತ್ತೊಂದೆಡೆ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಎಂಬುದನ್ನ ಕಾದು ನೋಡಬೇಕಿದೆ. ಈ ಪೈಕಿ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು & ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ನಿರೀಕ್ಷೆ ಮಾಡಲಾಗಿದೆ.