Yash Toxic Movie: ಕನ್ನಡಿಗ ಯಶ್ ಸಿನಿಮಾ ತುಳಿಯಲು ಹಿಂದಿವಾಲಾ ಗುಂಪಿನ ಷಡ್ಯಂತ್ರ?

bengaluru diaries | August 11, 2026 - 10:42 pm
ದಕ್ಷಿಣ ಭಾರತ ಅಂದ್ರೆ ಹಿಂದಿವಾಲಾ ಮನಸ್ಥಿತಿಗಳಿಗೆ ಏನೋ ಒಂಥರಾ ಆಗುತ್ತೆ ಅಂತಾ ಕಾಣುತ್ತೆ, ಅದ್ರಲ್ಲೂ ದಕ್ಷಿಣ ಭಾರತದ ಸಿನಿಮಾ ನಟರನ್ನು ಇದೇ ಹಿಂದಿವಾಲಾಗಳು ತುಂಬಾ ಕೆಟ್ಟದಾಗಿ ನಡೆಸಿಕೊಂಡ ಉದಾಹರಣೆ ಈ ಹಿಂದೆ ನಡೆದಿರುವುದು ನಮ್ಮೆಲ್ಲರ ಕಣ್ಣ ಮುಂದೆ ಇದೆ. ಹೀಗಿದ್ದಾಗಲೇ ರಜಿನಿಕಾಂತ್, ಚಿರಂಜೀವಿ, ಜ್ಯೂನಿಯರ್ ಎನ್‌ಟಿಆರ್, ಯಶ್, ರಾಮ್ ಚರಣ್, ಪ್ರಭಾಸ್ ರೀತಿಯ ದಕ್ಷಿಣ ಭಾರತ ಮೂಲದ ದೊಡ್ಡ ದೊಡ್ಡ ನಟರು ಹಿಂದಿ ಸಿನಿಮಾ ರಂಗಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಪೆಟ್ಟು ಕೊಟ್ಟಿದ್ದಾರೆ. ಇಷ್ಟಾದರೂ ನ್ಯಾಯದ ದಾರಿಯಲ್ಲಿ ನಡೆಯದ ಹಿಂದಿ ಸಿನಿಮಾ ರಂಗದ ಕೆಲವರು ಈಗ ಮತ್ತೆ ಕಿರಿಕ್ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಹಿಂದಿ ಸಿನಿಮಾ ಸ್ಟಾರ್ಸ್ ವಿರುದ್ಧ ಯಶ್ ಅವರ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.

ಕನ್ನಡ ಸಿನಿಮಾ ರಂಗ ಅಂದ್ರೆ ಉತ್ತರ ಭಾರತದಲ್ಲಿ ಅದೆಷ್ಟೋ ಜನರಿಗೆ ಗೊತ್ತೇ ಇಲ್ಲದ ಕಾಲಘಟ್ಟ ಇತ್ತು, ಈ ಪೈಕಿ ಕನ್ನಡ ಸಿನಿಮಾ ರಂಗದ ಬಗ್ಗೆ ಹಗುರವಾಗಿ ಮಾತನಾಡುವ ಕೆಲವು ಕಿತ್ತೋದ ನಟರು ಕೂಡ ಇದ್ದರು ಅಲ್ಲಿ. ಆದರೆ ಇದನ್ನೆಲ್ಲಾ ಹೊಡೆದು ಬಿಸಾಕಿ, ಕನ್ನಡ ಸಿನಿಮಾ ರಂಗದ ಗತ್ತು ಏನು? ಅನ್ನೋದನ್ನ ಇಡೀ ಜಗತ್ತಿಗೆ & ಉತ್ತರ ಭಾರತದ ಸಿನಿಮಾ ರಂಗಕ್ಕೆ ಆಧುನಿಕ ಕಾಲಘಟ್ಟದಲ್ಲಿ ತೋರಿಸಿದ ಕೀರ್ತಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತದೆ. ಈ ರೀತಿ ಕೆಜಿಎಫ್-1 & ಕೆಜಿಎಫ್-2 ಸಿನಿಮಾಗಳ ಮೂಲಕ ಅಬ್ಬರಿಸಿದ್ದ ಕನ್ನಡಿಗ ಯಶ್ ಅವರ ಟಾಕ್ಸಿಕ್ ಸಿನಿಮಾ ಇದೀಗ ರಿಲೀಸ್‌ಗೆ ಭರ್ಜರಿಯಾಗಿ ರೆಡಿಯಾಗಿದೆ. ಆದರೆ ಇದೇ ಸಮಯದಲ್ಲಿ ಕೆಲವರು ಕನ್ನಡಿಗ ಯಶ್ ವಿರುದ್ಧ ದೊಡ್ಡದಾಗಿ ಕುತಂತ್ರ ಮಾಡಿರುವ ಆರೋಪ ಕೇಳಿ ಬಂದಿದೆ.



ಕನ್ನಡಿಗ ಯಶ್ ವಿರುದ್ಧ ಕುತಂತ್ರ?
ಹೌದು, ಕನ್ನಡದ ಮೊಟ್ಟ ಮೊದಲ ಅಧಿಕೃತ ಹಾಲಿವುಡ್ ಸಿನಿಮಾ ಟಾಕ್ಸಿಕ್ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಸ್ಯಾಂಡಲ್‌ವುಡ್ ಟು ಹಾಲಿವುಡ್ ಕೋಟ್ಯಂತರ ಅಭಿಮಾನಿಗಳು ಕಾಯುತ್ತಾ ಕೂತಿರುವ ಸಿನಿಮಾ ಟಾಕ್ಸಿಕ್ ಆಗಿದ್ದು ಕನ್ನಡಿಗ ಯಶ್ ಅವರ ಈ ಮೂವಿ ಪ್ರಪಂಚದ ಮೂಲೆ ಮೂಲೆಯಲ್ಲೂ ಪಸರಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು ಭಾರತದ ಮೂಲೆ ಮೂಲೆಯಲ್ಲಿ ಕೂಡ ಬ್ಯಾನರ್ ಆರ್ಭಟಿಸುತ್ತಿವೆ. ಹೀಗಿದ್ದಾಗ ಟ್ರೇಲರ್ ರಿಲೀಸ್ ಆಗಲೇಬೇಕು ಅಲ್ವಾ? ಹಿಂಗೆ ದೊಡ್ಡದಾಗಿ ಸೌಂಡ್ ಮಾಡುತ್ತಾ ರಿಲೀಸ್ ಆಗಿದ್ದ ಟಾಕ್ಸಿಕ್ ಸಿನಿಮಾ ಟ್ರೇಲರ್ ಈಗಲೂ ಎಲ್ಲೆಲ್ಲೂ ಟ್ರೆಂಡ್ ಹುಟ್ಟುಹಾಕಿದೆ. ಆದರೆ ಇದನ್ನು ನೋಡಿ ಸಹಿಸಿಕೊಳ್ಳದ ಕೆಲವು ಹಿಂದಿ ಸಿನಿಮಾ ರಂಗದ ಹೊಟ್ಟೆ ಉರುಕರು, ಕನ್ನಡಿಗ ಯಶ್ ಅವರ ಟಾಕ್ಸಿಕ್ ಸಿನಿಮಾ ಬಗ್ಗೆ ಅಪಪ್ರಚಾರ ಮಾಡ್ತಾ ಇರುವ ಆರೋಪ ಕೇಳಿ ಬಂದಿದೆ.

ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಕನ್ನಡಿಗರು!
ಕನ್ನಡ ಸಿನಿಮಾ ಟಾಕ್ಸಿಕ್ ಇದೀಗ ಹಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟು, ಇಂಗ್ಲಿಷ್ ಮಂದಿಯನ್ನ ಕೂಡ ಈ ಸಮಯದಲ್ಲಿ ಕನ್ನಡ ಸಿನಿಮಾಗಳ ಕಡೆಗೆ ಎಳೆದು ತರಲು ಸಜ್ಜಾಗಿದೆ. ಇಂತಹ ಸಮಯದಲ್ಲೇ ಬೇಕು ಬೇಕಂತ ಕೆಲವರು ಕನ್ನಡಿಗ ಯಶ್ ಅವರ ಸಿನಿಮಾ ಕುರಿತು ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಯಶ್ ಅವರ ಅಭಿಮಾನಿಗಳು ಸುಮ್ಮನೆ ಇರ್ತಾರಾ ಹೇಳಿ? ಇಲ್ಲ ಇಲ್ಲ ಚಾನ್ಸೇ ಇಲ್ಲ, ಯಶ್ ಅವರ ಸಿನಿಮಾಗೆ ಅಭಿಮಾನಿಗಳು ಭರ್ಜರಿ ಸಪೋರ್ಟ್ ಮಾಡ್ತಿದ್ದಾರೆ. ಹೀಗೆ ದೊಡ್ಡ ಮಟ್ಟದಲ್ಲಿ ಟಾಕ್ಸಿಕ್ ಸಿನಿಮಾಗೆ ಬೆಂಬಲ ಸಿಗುತ್ತಿದ್ದು, ಸುಳ್ಳು ಪ್ರಚಾರ ಮಾಡುತ್ತಿರುವವರ ವಿರುದ್ಧವೇ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಹಾಗೇ ಹಿಂದಿ ಸಿನಿಮಾ ರಂಗದ ಕೆಲವು ಕುತಂತ್ರಿಗಳಿಗೆ ಈ ಮೂಲಕ ಖಡಕ್ ಉತ್ತರ ಕೊಡುತ್ತಿದ್ದಾರೆ ಕನ್ನಡಿಗರು.