Yash Toxic Movie: ಬಂದ.. ಬಂದ.. ಬಂದ.. ಅಣ್ತಮ್ಮಾ ಯಶ್ ಅಬ್ಬರ ಜಗದಗಲ!

bengaluru diaries | August 7, 2026 - 11:11 am

ಕನ್ನಡಿಗ ಯಶ್ ಅಂದ್ರೆ ಸುಮ್ಮನೆ ಅಲ್ಲ ಗುರೂ, ಕನ್ನಡ ಸಿನಿಮಾ ಇಂಡಸ್ಟ್ರಿ ಲೆವೆಲ್‌ನ ಮೊದಲಿಗೆ ಭಾರತದ ಮೂಲೆ ಮೂಲೆಗೂ ತಲುಪಿಸಿದ್ದರು. ಇದೇ ಕಾರಣಕ್ಕೆ ಕನ್ನಡಿಗರು ಯಶ್ ಅವರ ಈ ಧೈರ್ಯ ನೋಡಿ ಭೇಷ್ ಎಂದಿದ್ದರು, ಇದಾದ ನಂತರ ಹೊಡೆದರೆ ಆನೆಯನ್ನೇ ಹೊಡಿ ಅಂತಾ ಮತ್ತೆ ಮುಂದೆ ನುಗ್ಗಿ ಇಡೀ ಹಾಲಿವುಡ್ ಎದೆ ನಡುಗುವಂತೆ ಮಾಡಿದ್ದಾರೆ ಅಣ್ತಮ್ಮಾ ಯಶ್. ಇಡೀ ಜಗತ್ತೇ ಕಾದು ಕೂತಿರುವ ಕನ್ನಡ ಸಿನಿಮಾ ಟಾಕ್ಸಿಕ್ ಕಡೆಯಿಂದ ಭಾರಿ ಭರ್ಜರಿ ಅಪ್‌ಡೇಟ್ ಒಂದು ಇದೀಗ ಹೊರಬಿದ್ದಿದೆ. ನಾಳೆ ಅಂದ್ರೆ ಶುಭ ಶನಿವಾರ ಸಂಜೆಯ ಹೊತ್ತಿಗೆ ಟಾಕ್ಸಿಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗುತ್ತಿದೆ ಪ್ರಪಂಚದಾದ್ಯಂತ.

ಸ್ಯಾಂಡಲ್‌ವುಡ್ ಟು ಹಾಲಿವುಡ್ ಕೋಟ್ಯಂತರ ಅಭಿಮಾನಿಗಳು ಕಾಯುತ್ತಾ ಕೂತಿರುವ ಸಿನಿಮಾ ಟಾಕ್ಸಿಕ್ ಆಗಿದ್ದು ಕನ್ನಡಿಗ ಯಶ್ ಅವರ ಈ ಮೂವಿ ಪ್ರಪಂಚದ ಮೂಲೆ ಮೂಲೆಯಲ್ಲೂ ಪಸರಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು ಭಾರತದ ಮೂಲೆ ಮೂಲೆಯಲ್ಲಿ ಕೂಡ ಬ್ಯಾನರ್ ಆರ್ಭಟಿಸುತ್ತಿವೆ. ಹೀಗಿದ್ದಾಗ ಟ್ರೇಲರ್ ರಿಲೀಸ್ ಆಗಲೇಬೇಕು ಅಲ್ವಾ? ಅದಕ್ಕಾಗಿ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿರುವ ಟಾಕ್ಸಿಕ್ ಟೀಂ ಇದೀಗ ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜಿಸಿದೆ. ಟಾಕ್ಸಿಕ್ ಟ್ರೇಲರ್ ನೋಡಲು ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಾ ಕೂತಿದ್ದಾರೆ. ಹಾಗಾದ್ರೆ ನಾಳೆ ಎಷ್ಟೊತ್ತಿಗೆ ಟ್ರೇಲರ್ ರಿಲೀಸ್? ಬನ್ನಿ ತಿಳಿಯೋಣ.


ರಾಮಾಯಣ ಟ್ರೇಲರ್ ಸೂಪರ್ ಹಿಟ್!

ಹೌದು, ಇತ್ತೀಚೆಗೆ ‘ರಾಮಾಯಣ’ ಸಿನಿಮಾದ ಟ್ರೇಲರ್ ನೋಡಿ ಸಂಚಲನ ಸೃಷ್ಟಿಯಾಗಿರುವ ಬೆನ್ನಲ್ಲೇ ಯಶ್ ಅವರ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸುದ್ದಿ ಸಿಕ್ಕಿದೆ. ಯಶ್ ಅವರ ಮತ್ತೊಂದು ಮೆಗಾ ಪ್ರಾಜೆಕ್ಟ್ ಟಾಕ್ಸಿಕ್ ಸಿನಿಮಾ ಬಗ್ಗೆ ಭರ್ಜರಿ ಸುದ್ದಿ 08/08/2026 ಶನಿವಾರ ಸಂಜೆ ಸಿಗಲಿದ್ದು, ನಾಳೆ ಸಂಜೆ 6 ಗಂಟೆ 02 ನಿಮಿಷಕ್ಕೆ ಸರಿಯಾಗಿ ರಿಲೀಸ್ ಆಗಲಿದೆ. ಇದೇ ಕಾರಣಕ್ಕೆ ಹಾಲಿವುಡ್ ಮಂದಿ ಕೂಡ ಟಾಕ್ಸಿಕ್ ಟ್ರೇಲರ್ ನೋಡಲು ಈಗ ಕಾದು ಕೂತಿದ್ದಾರೆ. ಮತ್ತೊಂದು ಕಡೆ, ನಮ್ಮ ಅಣ್ತಮ್ಮಾ ಯಶ್ ಸಿನಿಮಾ ಅಂತಾ ಫ್ಯಾನ್ಸ್ ಕೂಡ ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲೂ ಸ್ಪೆಷಲ್ ಸ್ಕ್ರೀನಿಂಗ್ ಅರೇಂಜ್ ಮಾಡಿಸಿದ್ದಾರೆ. ಈ ಮೂಲಕ ಟಾಕ್ಸಿಕ್ ಹಬ್ಬಕ್ಕೆ ಕನ್ನಡ ನಾಡು ಮಾತ್ರವಲ್ಲ ಇಡೀ ಪ್ರಪಂಚ ಈಗ ಸಜ್ಜಾಗಿದೆ.

ಟಾಕ್ಸಿಕ್ ಸಿನಿಮಾ ಶುರುವಾದ ದಿನದಿಂದ ಕೂಡ, ದಶ ದಿಕ್ಕುಗಳಲ್ಲೂ ತನ್ನ ಆರ್ಭಟ ತೋರುತ್ತಲೇ ಬರುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿರುವ ಟಾಕ್ಸಿಕ್ ಬಿಗ್ ಬಜೆಟ್ ಸಿನಿಮಾದ ಪ್ರಚಾರ ಭರ್ಜರಿಯಾಗಿ ಸಾಗಿದೆ. ಇದರ ಭಾಗವಾಗಿ ಹಿಂದೆ ಲಿರಿಕಲ್ ವಿಡಿಯೋ ಹಾಗೂ ಟೀಸರ್ ರಿಲೀಸ್ ಆಗಿದ್ದವು. ಇದೇ ಭರ್ಜರಿ ಕಿಕ್ ಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿತ್ತು. ಈಗ ಮತ್ತೊಂದು ಬಂಪರ್ ಸಿಕ್ಕಂತಾಗಿದ್ದು, ಯಶ್ ಅವರ ಅಭಿಮಾನಿಗಳ ಸಂಭ್ರಮಕ್ಕೆ ಗಡಿ ಇಲ್ಲವಾಗಿದೆ. ಟಾಕ್ಸಿಕ್ ಚಿತ್ರದಲ್ಲಿ ಕನ್ನಡಿಗ ಯಶ್ ಡಬಲ್ ಶೇಡ್‌ನಲ್ಲಿ ಮಿಂಚಲಿದ್ದು, ಈ ಸಿನಿಮಾ ಮೂಲಕ ರಾಕಿಂಗ್ ಸ್ಟಾರ್ ಹೊಸ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆಂದು ಹೇಳಬಹುದು.

ವಿರೋಧಿಗಳ ಅಹಂಕಾರಕ್ಕೆ ಸರಿಯಾದ ಉತ್ತರ!

ಕೆಜಿಎಫ್ ಚಾಪ್ಟರ್-1 & ಕೆಜಿಎಫ್ ಚಾಪ್ಟರ್-2 ಸಿನಿಮಾಗಳ ಬಳಿಕ ಯಶ್ ಅವರ ಮುಂದಿನ ನಿರ್ಧಾರ ಏನು? ಯಶ್ ಅವರು ಮತ್ತೆ ದೊಡ್ಡ ಮಟ್ಟದ ಗೆಲುವು ಕಾಣುತ್ತಾರಾ? ಎಂದು ಶತ್ರುಗಳು ಕಾಲು ಎಳೆಯುವ ವರ್ತನೆ ತೋರಿಸಿದ್ದರು, ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಟ್ರೋಲ್ ಮಾಡಿದ್ದರು. ಆದರೆ ಕನ್ನಡ ನಾಡಿನ ಹೆಮ್ಮೆಯ ನಟ ಯಶ್ ಇದೀಗ ತಮ್ಮ ವಿರೋಧಿಗಳ ಅಹಂಕಾರಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ತಮ್ಮ ಸಿನಿಮಾ ಮೂಲಕ ಹಾಗೂ ಕೆಲಸದ ಮೂಲಕವೇ ಶತ್ರುಗಳ ಬಾಯಿ ಮುಚ್ಚಿಸಿದ್ದಾರೆ. ಈ ಮೂಲಕ ಕನ್ನಡಿಗರ ಸಿನಿಮಾ ಒಂದು ಹಾಲಿವುಡ್ ಮಟ್ಟದಲ್ಲಿ ಸೌಂಡ್ ಎಬ್ಬಿಸಿ, ತೂಫಾನ್ ಸೃಷ್ಟಿಸುವುದು ಪಕ್ಕಾ ಆಗಿದೆ.